AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಧಾನಿ ಮೋದಿ ಆಗಮಿಸುತ್ತಿದ್ದಾರೆಂದು ಕಳಪೆ ರಸ್ತೆ ನಿರ್ಮಾಣ ಮಾಡಿದ್ದ ಗುತ್ತಿಗೆದಾರನಿಗೆ 3 ಲಕ್ಷ ರೂ. ದಂಡ!

ಮುಖ್ಯ ಅಭಿಯಂತರ ಪ್ರಹ್ಲಾದ್ ಅವರು ಶೋಕಾಸ್ ನೋಟಿಸ್ ಜಾರಿ ಮಾಡಿ ನಿನ್ನೆ ಆದೇಶ ಹೊರಡಿಸಿದ್ದರು. ನೋಟಿಸ್ ಜಾರಿ ಮಾಡಿದ ಬೆನ್ನಲ್ಲೆ ಗುತ್ತಿಗೆದಾರ ರಮೇಶ್ ಎಂಬುವವರಿಗೆ ಬಿಬಿಎಂಪಿ ದಂಡ ಹಾಕಿದೆ.

ಪ್ರಧಾನಿ ಮೋದಿ ಆಗಮಿಸುತ್ತಿದ್ದಾರೆಂದು ಕಳಪೆ ರಸ್ತೆ ನಿರ್ಮಾಣ ಮಾಡಿದ್ದ ಗುತ್ತಿಗೆದಾರನಿಗೆ 3 ಲಕ್ಷ ರೂ. ದಂಡ!
ಬಿಬಿಎಂಪಿ ಕಚೇರಿ
TV9 Web
| Edited By: |

Updated on:Jun 25, 2022 | 8:53 AM

Share

ಬೆಂಗಳೂರು: ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಜೂನ್ 20ಕ್ಕೆ ಬೆಂಗಳೂರಿಗೆ ಆಗಮಿಸಿದ್ದರು. ಮೋದಿ ಆಗಮಿಸುತ್ತಿದ್ದಾರೆಂದು ಕಳಪೆ ರಸ್ತೆ ನಿರ್ಮಿಸಿದ್ದ ಗುತ್ತಿಗೆದಾರನಿಗೆ ಬಿಬಿಎಂಪಿ (BBMP) 3 ಲಕ್ಷ ರೂ. ದಂಡ ವಿಧಿಸಿದೆ. ಕಳಪೆ ಕಾಮಗಾರಿ ಹಿನ್ನೆಲೆ ಬಿಬಿಎಂಪಿ ಮೂವರು ಅಧಿಕಾರಿಗಳಿಗೆ ಮುಖ್ಯ ಅಭಿಯಂತರ ಪ್ರಹ್ಲಾದ್ ಅವರು ಶೋಕಾಸ್ ನೋಟಿಸ್ ಜಾರಿ ಮಾಡಿ ನಿನ್ನೆ ಆದೇಶ ಹೊರಡಿಸಿದ್ದರು. ನೋಟಿಸ್ ಜಾರಿ ಮಾಡಿದ ಬೆನ್ನಲ್ಲೆ ಗುತ್ತಿಗೆದಾರ ರಮೇಶ್ ಎಂಬುವವರಿಗೆ ಬಿಬಿಎಂಪಿ ದಂಡ ಹಾಕಿದೆ.

11.50 ಕೋಟಿ ರೂ. ವೆಚ್ಚದಲ್ಲಿ 9 ಕಿಲೋಮೀಟರ್ ರಸ್ತೆ ನಿರ್ಮಿಸಲಾಗಿತ್ತು. ಆದರೆ ರಸ್ತೆ ನಿರ್ಮಾಣಗೊಂಡು ವಾರದೊಳಗೆ ಕಿತ್ತು ಹೋಗುತ್ತಿದೆ. ಈ ಹಿನ್ನೆಲೆ ಪಿಎಂ ಕಾರ್ಯಾಲಯ ಕಾಮಗಾರಿ ಬಗ್ಗೆ ವರದಿ ಕೇಳಿತ್ತು. ಇನ್ನು ಕಳಪೆ ಕಾಮಗಾರಿ ಬಗ್ಗೆ ಟಿವಿ9 ಕನ್ನಡ ವರದಿ ಪ್ರಸಾರ ಮಾಡಿತ್ತು. ಟಿವಿ9 ಸುದ್ದಿ ಆಧರಿಸಿ ಮೂವರು ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ನೀಡಿದ್ದು, ಶೋಕಾಸ್ ನೋಟಿಸ್​ನಲ್ಲಿ ಟಿವಿ9 ಹೆಸರು ಉಲ್ಲೇಖ ಆಗಿತ್ತು.

ಇದನ್ನೂ ಓದಿ: Sai Pallavi: ಸಾಯಿ ಪಲ್ಲವಿಗೆ ಬಂತು ಮತ್ತಷ್ಟು ಬಲ; ಕನ್ನಡದಲ್ಲೂ ಬರುವ ಹೊಸ ಚಿತ್ರಕ್ಕೆ ಕೈ ಜೋಡಿಸಿದ ಸೂರ್ಯ-ಜ್ಯೋತಿಕಾ

ಇದನ್ನೂ ಓದಿ
Image
N Jagadeesan: ಮಧ್ಯಮ ಬೆರಳು ತೋರಿಸಿದ ಸಿಎಸ್​ಕೆ ಸ್ಟಾರ್ ಪ್ಲೇಯರ್ ಪಂದ್ಯದ ಬಳಿಕ ಹೇಳಿದ್ದೇನು ನೋಡಿ
Image
Sai Pallavi: ಸಾಯಿ ಪಲ್ಲವಿಗೆ ಬಂತು ಮತ್ತಷ್ಟು ಬಲ; ಕನ್ನಡದಲ್ಲೂ ಬರುವ ಹೊಸ ಚಿತ್ರಕ್ಕೆ ಕೈ ಜೋಡಿಸಿದ ಸೂರ್ಯ-ಜ್ಯೋತಿಕಾ
Image
Assam Flood: ಅಸ್ಸಾಂನಲ್ಲಿ ಪ್ರವಾಹದಿಂದ ಮೃತಪಟ್ಟವರ ಸಂಖ್ಯೆ 118ಕ್ಕೆ ಏರಿಕೆ; 5 ದಿನಗಳಿಂದ ಸಿಲ್ಚಾರ್ ಮುಳುಗಡೆ
Image
ಅಮೇರಿಕವನ್ನು ಒಂದೇ ಶಬ್ದದಲ್ಲಿ ವರ್ಣಿಸಲು ಪ್ರಯತ್ನಿಸಿದ ಅಧ್ಯಕ್ಷ ಬೈಡೆನ್ ಎಡವಟ್ಟು ಮಾಡಿಬಿಟ್ಟರು!

ಪ್ರಧಾನಿ ನರೇಂದ್ರ ಮೋದಿ ಜೂನ್ 20ರಂದು ಬೆಂಗಳೂರಿಗೆ ಬಂದಾಗ, ಅವರು ಸಂಚರಿಸುವ ರಸ್ತೆಗಳು ಲಕಲಕ ಅಂತ ಹೊಳೆಯುತ್ತಿದ್ದವು. ಆದರೆ ಮೋದಿ ವಾಪಸ್ ಹೋದ ಮೇಲೆ ತರಾತುರಿಯಲ್ಲಿ ಮಾಡಿದ್ದ ರಸ್ತೆಗಳು ಅದ್ವಾನ ಎದ್ದುಹೋಗಿವೆ. 23 ಕೋಟಿ ರೂಪಾಯಿ ಖರ್ಚು ಮಾಡಿ ನಿರ್ಮಾಣ ಮಾಡಿದ ರಸ್ತೆಯ ಸ್ಥಿತಿ ನೋಡುವಂತಿಲ್ಲ. ಸದ್ಯ ಬಿಬಿಎಂಪಿ ಡಾಂಬರ್ ರಸ್ತೆ ಕಳಪೆ ಕಾಮಗಾರಿ ವಿಚಾರ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಹೀಗಾಗಿ ರಾಜ್ಯ ಸರ್ಕಾರಕ್ಕೆ, ಪ್ರಧಾನಿ ಕಾರ್ಯಾಲಯ ವರದಿ ಕೇಳಿದ್ದು ಬಿಬಿಎಂಪಿ ಆಯುಕ್ತರಿಗೆ ವರದಿ ನೀಡುವಂತೆ ಸಿಎಂ ಕಚೇರಿ ಸೂಚನೆ ನೀಡಿತ್ತು.

ಬೆಂಗಳೂರಿನ ವಿವಿಯಿಂದ ಮರಿಯಪ್ಪನಪಾಳ್ಯದ ಕಡೆ ಹೋಗುವ ರಸ್ತೆಯಲ್ಲಿ ಮೋದಿ ಬರುತ್ತಾರೆ ಎನ್ನುವ ಕಾರಣಕ್ಕೆ ಡಾಂಬರೀಕರಣ ಮಾಡಿದ್ದರು. ಆದರೆ ಮೋದಿ ಬಂದು ಹೋಗಿ ವಾರದೊಳಗೆ  ಡಾಂಬರ್ ಕಿತ್ತುಕೊಂಡು ಬರುತ್ತಿದೆ. ಪ್ರಧಾನಿ ಭೇಟಿ ಕೊಟ್ಟ ಅಂಬೇಡ್ಕರ್ ಎಕನಾಮಿಕ್ ಕಾಲೇಜಿನ ರಸ್ತೆಯಲ್ಲೂ ಬೃಹತ್ ಗುಂಡಿ ಬಿದ್ದಿದೆ. ಅಂಬೇಡ್ಕರ್ ಕಾಲೇಜಿಗೆ ಮೋದಿ ಭೇಟಿ ಕೊಡುತ್ತಾರೆ ಅಂತಾ ಗುಂಡಿಗಳನ್ನ ಮುಚ್ಚಲಾಗಿತ್ತು. ಆದ್ರೀಗ ಮುಚ್ಚಿದ ಗುಂಡಿ ಕೂಡಾ ಬಾಯಿ ತೆರೆದಿದೆ.

Published On - 8:40 am, Sat, 25 June 22

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ