N Jagadeesan: ಮಧ್ಯಮ ಬೆರಳು ತೋರಿಸಿದ ಸಿಎಸ್​ಕೆ ಸ್ಟಾರ್ ಪ್ಲೇಯರ್ ಪಂದ್ಯದ ಬಳಿಕ ಹೇಳಿದ್ದೇನು ನೋಡಿ

TNPL 2022: ಚೆಪಾಕ್ ತಂಡದ ಬ್ಯಾಟರ್ ಎನ್. ಜಗದೀಶನ್ (N Jagadeesan) ಅವರನ್ನು ಬಾಬ ಅಪರಂಜಿತ್ ಮಂಕಡ್ ರನೌಟ್ (Mankad Runout) ಮಾಡಿ ಪೆವಿಲಿಯನ್​ಗೆ ಅಟ್ಟಿದರು. ಈ ಸಂದರ್ಭ ದೊಡ್ಡ ಡ್ರಾಮವೇ ನಡೆಯಿತು.

N Jagadeesan: ಮಧ್ಯಮ ಬೆರಳು ತೋರಿಸಿದ ಸಿಎಸ್​ಕೆ ಸ್ಟಾರ್ ಪ್ಲೇಯರ್ ಪಂದ್ಯದ ಬಳಿಕ ಹೇಳಿದ್ದೇನು ನೋಡಿ
N Jagadeesan Mankad TNPL 2022
Follow us
TV9 Web
| Updated By: Vinay Bhat

Updated on: Jun 25, 2022 | 8:36 AM

ಆರನೇ ಆವೃತ್ತಿಯ ತಮಿಳುನಾಡು ಪ್ರೀಮಿಯರ್ ಲೀಗ್​ನ (TNPL 2022) ಪಂದ್ಯವೊಂದರಲ್ಲಿ ನಡೆದ ಮಂಕಡ್ ರನೌಟ್ ಇದೀಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಚೆಪಾಕ್ ಸೂಪರ್ ಗಿಲ್ಲಿಸ್ ಹಾಗೂ ನೆಲೈ ರಾಯಲ್ ಕಿಂಗ್ಸ್​ ನಡುವಣ ಟಿಎನ್​ಪಿಎಲ್​ನ ಮೊದಲ ಪಂದ್ಯದಲ್ಲೇ ಈ ಘಟನೆ ನಡೆದಿದೆ. ಚೆಪಾಕ್ ತಂಡದ ಬ್ಯಾಟರ್ ಎನ್. ಜಗದೀಶನ್ (N Jagadeesan) ಅವರನ್ನು ಬಾಬ ಅಪರಂಜಿತ್ ಮಂಕಡ್ ರನೌಟ್ (Mankad Runout) ಮಾಡಿ ಪೆವಿಲಿಯನ್​ಗೆ ಅಟ್ಟಿದರು. ಈ ಸಂದರ್ಭ ದೊಡ್ಡ ಡ್ರಾಮವೇ ನಡೆಯಿತು. ನೆಲೈ ನೀಡಿದ್ದ 185 ರನ್​ಗಳ ಸವಾಲಿನ ಟಾರ್ಗೆಟ್ ಬೆನ್ನಟ್ಟಲು ಬಂದ ಚೆಪಾಕ್ ಸ್ಫೋಟಕ ಆರಂಭವನ್ನ ಪಡೆದುಕೊಂಡಿತು. ಆದರೆ, 4ನೇ ಓವರ್ ಅಪರಂಜಿತ್ ಬೌಲಿಂಗ್ ಮಾಡಲು ಬಂದರು.

ಈ ಸಂದರ್ಭ ನಾಲ್ಕನೇ ಎಸೆತ ಹಾಕಲು ಮುಂದಾದಾಗ ನಾನ್ ಸ್ಟ್ರೈಕರ್​ನಲ್ಲಿದ್ದ ಜಗದೀಶನ್ ಬೌಲರ್ ಬೌಲಿಂಗ್ ಮಾಡುವ ಮುನ್ನ ಕ್ರೀಸ್ ಬಿಟ್ಟು ಮುಂದೆ ಬಂದರು. ಇದನ್ನ ಗಮನಿಸಿದ ಬೌಲರ್ ಚೆಂಡನ್ನು ವಿಕೆಟ್​ಗೆ ತಾಗಿಸಿ ಮಂಕಡ್ ರನೌಟ್ ಮಾಡಿದರು. ಬೇರೆನೂ ದಾರಿಯಿಲ್ಲದೆ ಜಗದೀಶನ್ ಪೆವಿಲಿಯನ್​ಗೆ ತೆರಳಬೇಕಾಯಿತು. ಈ ಘಟನೆಯಿಂದ ಸಿಟ್ಟಾದ ಜಗದೀಶನ್ ಮಧ್ಯಮ ಬೆರಳನ್ನು ತೋರಿಸುತ್ತಾ ಡಗೌಟ್ ಕಡೆ ಹೆಜ್ಜೆ ಹಾಕಿದರು.

ಇದನ್ನೂ ಓದಿ
Image
IND VS LEI: ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧವೇ ಅರ್ಧಶತಕ ಸಿಡಿಸಿದ ರಿಷಭ್ ಪಂತ್..!
Image
ENG vs NZ: ಆಂಗ್ಲರ ಎದುರು ಹ್ಯಾಟ್ರಿಕ್ ಶತಕ ಬಾರಿಸಿದ ಡ್ಯಾರಿಲ್ ಮಿಚೆಲ್; 73 ವರ್ಷಗಳ ಹಳೆಯ ದಾಖಲೆ ಪುಡಿ ಪುಡಿ!
Image
Lionel Messi: ಐಷರಾಮಿ ಬಂಗಲೆ, ಖಾಸಗಿ ಜೆಟ್, ದುಬಾರಿ ಕಾರುಗಳ ಭರಾಟೆ, ಲಿಯೋನೆಲ್ ಮೆಸ್ಸಿ ವೈಭವದ ಬದುಕು ಹೇಗಿದೆ ಗೊತ್ತಾ?
Image
PCB: ಆಟಗಾರರ ಸಂಬಳ ಹೆಚ್ಚಿಸಿದ ಪಾಕ್ ಕ್ರಿಕೆಟ್​ ಮಂಡಳಿ; ವಿದೇಶಿ ಲೀಗ್‌ ಆಡದವರಿಗೂ ಸೂಕ್ತ ಬಹುಮಾನ

IND vs LEI: ಭರತ್ ಮೇಲೆ ಭಾರತ ನಂಬಿಕೆ: ದ್ವಿತೀಯ ಇನ್ನಿಂಗ್ಸ್​​ನಲ್ಲಿ ಟೀಮ್ ಇಂಡಿಯಾ ಮುನ್ನಡೆ

ತಮಿಳುನಾಡು ತಂಡದ ಹಿರಿಯ ಆಟಗಾರ ಜಗದೀಶನ್ ಐಪಿಎಲ್​ನಲ್ಲಿ ಕಳೆದ ಮೂರು ವರ್ಷದಿಂದ ಚೆನ್ನೈ ಸೂಪರ್ ಕಿಂಗ್ಸ್​ ತಂಡದ ಪರ ಆಡುತ್ತಿದ್ದಾರೆ. 26 ಪ್ರಥಮ ದರ್ಜೆ ಕ್ರಿಕೆಟ್, 36 ಲಿಸ್ಟ್ ಎ ಪಂದ್ಯ ಮತ್ತು 45 ಟಿ20 ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ. ಜಗದೀಶನ್ ಅವರ ಈ ವರ್ತನೆಗೆ ಕ್ರಿಕೆಟ್ ಪ್ರೇಮಿಗಳು ಕಿಡಿಕಾರಿದರು, ಮಂಕಡ್ ರನ್ ಔಟ್ ನ್ಯಾಯಯುತ ಎಂದು ಘೋಷಣೆಯಾದ ನಂತರವೂ ಎನ್ ಜಗದೀಶನ್ ಈ ರೀತಿ ವರ್ತಿಸುವುದು ತಪ್ಪು ಎಂದು ಜಗದೀಶನ್ ನಡೆಯನ್ನು ಖಂಡಿಸಿದರು.

ಈ ಸುದ್ದಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ ಎಂಬೊತ್ತಿಗೆ ಪಂದ್ಯ ಮುಗಿದ ಬಳಿಕ ಎನ್ ಜಗದೀಶನ್ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡುವ ಮೂಲಕ ಕ್ಷಮೆಯಾಚಿಸಿದ್ದಾರೆ. “ಕ್ರಿಕೆಟ್ ಆಟಕ್ಕಾಗಿ ಜೀವನವನ್ನು ಮುಡಿಪಾಗಿಟ್ಟಿರುವ ನಾನು ಕ್ರೀಡಾಪಟುತ್ವವನ್ನು ಹೆಚ್ಚು ಗೌರವಿಸುತ್ತೇನೆ, ಹೀಗಾಗಿ ನನಗೆ ಮಂಕಡ್ ರನ್ ಔಟ್‌ನ್ನು ಸಹಿಸಿಕೊಳ್ಳಲು ಆಗಲಿಲ್ಲ ಆದ್ದರಿಂದ ಆ ರೀತಿ ಪ್ರತಿಕ್ರಿಯಿಸಿದೆ, ಈಗ ನನ್ನ ತಪ್ಪಿನ ಅರಿವಾಗಿದೆ ಹಾಗೂ ಅದಕ್ಕೆ ಕ್ಷಮೆ ಯಾಚಿಸುತ್ತೇನೆ”, ಎಂದು ಎನ್ ಜಗದೀಶನ್ ಬರೆದುಕೊಂಡಿದ್ದಾರೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಯಲ್ ಕಿಂಗ್ಸ್​ ತಂಡ 20 ಓವರ್​ನಲ್ಲಿ 4 ವಿಕೆಟ್ ನಷ್ಟಕ್ಕೆ 184 ರನ್ ಚಚ್ಚಿತು. ಟಾರ್ಗೆಟ್ ಬೆನ್ನಟ್ಟಿದ ಚೆಪಾಕ್ ಕೂಡ ಅತ್ಯುತ್ತಮ ಬ್ಯಾಟಿಂಗ್ ನಡೆಸಿತು. ಚೆಪಾಕ್ ತಂಡ ಕೂಡ 20 ಓವರ್​​ಗೆ 7 ವಿಕೆಟ್ ನಷ್ಟಕ್ಕೆ 184 ರನ್ ಗಳಿಸಿತು. ಹೀಗಾಗಿ ಸೂಪರ್ ಓವರ್ ನಡೆಸಲಾಯಿತು. ಸೂಪರ್ ಓವರ್​​ನಲ್ಲಿ ಮೊದಲು ಬ್ಯಾಟ್ ಮಾಡಿದ ಚೆಪಾಕ್ 9 ರನ್ ಗಳಿಸಿತು. ಈ ಟಾರ್ಗೆಟ್ ಅನ್ನು ನೆಲೈ ತಂಡ ಒಂದು ಎಸೆತ ಬಾಕಿ ಇರುವಂತೆ ಗೆದ್ದು ಬೀಗಿತು. ಸುಜಯ್ ಯಾದವ್ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರು.

T20I World Record: ಟಿ20 ಕ್ರಿಕೆಟ್​ನಲ್ಲಿ ಪಾಕಿಸ್ತಾನಕ್ಕೆ ಸೆಡ್ಡು ಹೊಡೆಯಲಿದೆ ಭಾರತ; ಹೊಸ ದಾಖಲೆಯತ್ತ ರೋಹಿತ್ ಸೇನೆ!

‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ