ಗುಬ್ಬಿ ಶಾಸಕ ಶ್ರೀನಿವಾಸ್ ಜೆಡಿಎಸ್ ಪಕ್ಷ ತೊರೆಯುವ ಮುನ್ಸೂಚನೆ ಹಿನ್ನೆಲೆ ಹೊಸ ಅಭ್ಯರ್ಥಿಯನ್ನು ಹುಟ್ಟುಹಾಕಿದ ಕುಮಾರಸ್ವಾಮಿ
ಶಾಸಕ ಶ್ರೀನಿವಾಸ್ ತೆರೆ ಮರೆಯಲ್ಲಿ ಕಾಂಗ್ರೆಸ್ ಮುಖಂಡರನ್ನು ಭೇಟಿ ಮಾಡಿದ್ದರು. ಚುನಾವಣೆ ಸಮೀಪದಲ್ಲಿ ಕಾಂಗ್ರೆಸ್ ಸೇರಲು ಯೋಚಿಸಿದ್ದರು.
ತುಮಕೂರು: ಜೆಡಿಎಸ್ (JDS) ಶಾಸಕನ ತಂತ್ರಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಪ್ರತಿತಂತ್ರದ ಶಾಕ್ ನೀಡಿದ್ದಾರೆ. ಗುಬ್ಬಿ ಜೆಡಿಎಸ್ ಶಾಸಕ ಶ್ರೀನಿವಾಸ್ ಪಕ್ಷ ತೊರೆಯುವ ಮಾಹಿತಿ ಹಿನ್ನೆಲೆ ಹೊಸ ಅಭ್ಯರ್ಥಿಯನ್ನು ಕುಮಾರಸ್ವಾಮಿ ಹುಟ್ಟುಹಾಕಿದ್ದಾರೆ. ಚುನಾವಣೆ ಸಮಯದಲ್ಲಿ ಜೆಡಿಎಸ್ ಶಾಸಕ ಶ್ರೀನಿವಾಸ್ ಪಕ್ಷ ತೊರೆಯುವ ಮುನ್ಸೂಚನೆ ನೀಡಿದ್ದು, ಹೀಗಾಗಿ ಇದಕ್ಕೆ ಕುಮಾರಸ್ವಾಮಿ ಪ್ರತಿತಂತ್ರ ರೂಪಿಸಿದ್ದಾರೆ. ಉದ್ಯಮಿ ನಾಗರಾಜುಗೆ ಜೆಡಿಎಸ್ ಟಿಕೆಟ್ ನೀಡಲು ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ.
ಶಾಸಕ ಶ್ರೀನಿವಾಸ್ ತೆರೆ ಮರೆಯಲ್ಲಿ ಕಾಂಗ್ರೆಸ್ ಮುಖಂಡರನ್ನು ಭೇಟಿ ಮಾಡಿದ್ದರು. ಚುನಾವಣೆ ಸಮೀಪದಲ್ಲಿ ಕಾಂಗ್ರೆಸ್ ಸೇರಲು ಯೋಚಿಸಿದ್ದರು. ಹೀಗಾಗಿ ಶಾಸಕ ಎಸ್.ಆರ್.ಶ್ರೀನಿವಾಸ್ ನಡೆಯನ್ನು ಅರಿತ ಕುಮಾರಸ್ವಾಮಿ ಗುಬ್ಬಿ ಕ್ಷೇತ್ರದಲ್ಲೇ ಹೊಸ ಅಭ್ಯರ್ಥಿಯನ್ನು ಹುಟ್ಟಿ ಹಾಕಿದ್ದಾರೆ. ಉದ್ಯಮಿ ನಾಗರಾಜು ಎಂಬುವವರಿಗೆ ಜೆಡಿಎಸ್ ಟಿಕೆಟ್ ನೀಡಲು ಚಿಂತನೆ ನಡೆದಿದೆ. ಸಿ.ಎಸ್.ಪುರ ನಿವಾಸಿಯಾಗಿರುವ ನಾಗರಾಜು ಜೆಡಿಎಸ್ ಸೇರ್ಪಡೆಗೆ ವೇದಿಕೆ ಸಿದ್ಧತೆಯಾಗುತ್ತಿದೆ. ಖುದ್ದು ಕುಮಾರಸ್ವಾಮಿಯೇ ಹೊಸ ಅಭ್ಯರ್ಥಿಯನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಚಿಂತನೆ ನಡೆಸಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾಸಕ ಎಸ್.ಆರ್.ಶ್ರೀನಿವಾಸ್, ಎಲ್ಲ ಕ್ಷೇತ್ರಗಳಲ್ಲಿ ಇಬ್ಬಿಬ್ಬರು ಅಭ್ಯರ್ಥಿಗಳನ್ನು ಇಟ್ಟಿರುತ್ತಾರೆ. ಇದು ನಮ್ಮ ನಾಯಕರ ಗುಣವೆಂದು ಅಸಮಾಧಾನ ಹೊರಹಾಕಿದ್ದಾರೆ. ನಿಟ್ಟೂರಿನಲ್ಲಿ ಜೆಡಿಎಸ್ ಶಾಸಕ ಶ್ರೀನಿವಾಸ್ ಅಸಮಾಧಾನ ಹೊರಹಾಕಿದ್ದು, ನನ್ನ ಕ್ಷೇತ್ರದಲ್ಲಿ ಇಷ್ಟು ದಿನ ಅಭ್ಯರ್ಥಿಯೇ ಸಿಕ್ಕಿರಲಿಲ್ಲ. ಈಗ ಅಭ್ಯರ್ಥಿ ಸಿಕ್ಕ ಕೂಡಲೇ ಎತ್ತಿಕಟ್ಟುವ ಕೆಲಸವಾಗುತ್ತಿದೆ. ನನಗೆ ಕುಮಾರಸ್ವಾಮಿ ಮೇಲೆ ಯಾವುದೇ ಮುನಿಸಿಲ್ಲ. ಆದರೆ ಅವರೇ ಕ್ರಿಯೇಟ್ ಮಾಡುತ್ತಿದ್ದಾರೆ. ನಾನು ಎಲ್ಲಿಯೂ ಜೆಡಿಎಸ್ ಪಕ್ಷ ಬಿಡುತ್ತೇನೆ ಎಂದು ಹೇಳಿಲ್ಲ. ಮೊನ್ನೆ ತಾನೆ ನಾನು ದೇವೇಗೌಡರನ್ನ ಭೇಟಿ ಮಾಡಿ ಪಕ್ಷದ ಕಾರ್ಯಕ್ರಮಕ್ಕೆ ಹಾಜರಾಗಿದ್ದೇನೆ. ಅದಾದ ಮೇಲೂ ಇನ್ನೊಬ್ಬರನ್ನ ಹಾಕುವುದಾದರೆ ಸಂತೋಷ ಅಂತ ಹೇಳಿದ್ದಾರೆ.
ಇದನ್ನೂ ಓದಿ
ತುಮಕೂರು ಸಂಸದ ಮತ್ತು ಗುಬ್ಬಿ ಶಾಸಕರ ನಡುವೆ ವಾಕ್ಸಮರ; ಎಂಎಸ್ಎಸ್ ಸ್ಟೇಷನ್ ಉದ್ಘಾಟನೆ ಕಾರ್ಯಕ್ರಮಲ್ಲೇ ಪರಸ್ಪರ ಜಗಳ
ಅಭಿಮಾನಿಗೆ ಶಾರುಖ್ ಚಿತ್ರದಿಂದ ಮೋಸ; 15 ಸಾವಿರ ದಂಡ ವಿಧಿಸಿದ ಸುಪ್ರೀಂ ಕೋರ್ಟ್; ಇದು ಇಂಟರೆಸ್ಟಿಂಗ್ ಕೇಸ್
(Kumaraswamy is plan about appointing a new JDS candidate for the Gubbi)