ತುಮಕೂರು: ಒಳಚರಂಡಿ ವ್ಯವಸ್ಥೆ (ಯುಜಿಡಿ -under ground drainage) ಒಡೆದು ರಸ್ತೆ ಮೇಲೆ ನೀರು ಹರಿದ ಕಾರಣ ನಿರ್ಮಲಾನಂದ ಸ್ವಾಮಿಜಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಪುರಸಭೆ ಮುಂಭಾಗದಲ್ಲಿ ಯುಜಿಡಿ ಒಡೆದು ನೀರು ಹೊರಬರುತ್ತಿದ್ದು ಸರಿಪಡಿಸಿಲ್ಲ ಅಂತಾ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಮಕೃಷ್ಣಾಶ್ರಮದ ನಿರ್ಮಲಾನಂದ ಸ್ವಾಮೀಜಿ (ramakrishna ashrama) ಅವರು ಹೀಗೆ ಆಕ್ರೋಶ ವ್ಯಕ್ತಪಡಿಸಿದ್ದು, ಮಧುಗಿರಿ ಜೆಡಿಎಸ್ ಶಾಸಕ ವೀರಭದ್ರಯ್ಯರನ್ನ (madhugiri mla) ಹೋಪ್ ಲೆಸ್ ಫೇಲೋ ಅಂತಾ ಜಾಡಿಸಿದ್ದಾರೆ. ಯುಜಿಡಿ ಸಮಸ್ಯೆ ಬಗ್ಗೆ ಎಷ್ಟೇ ಮನವಿ ಮಾಡಿದರೂ ಕೂಡ ಪುರಸಭೆ ಅಧಿಕಾರಿಗಳು ಸ್ಪಂದಿಸಿಲ್ಲ ಅಂತಾ ರಸ್ತೆಗಿಳಿದು ಆಕ್ರೋಶ ಹೊರಹಾಕಿದ್ದಾರೆ.
ಎಂಜಿನಿಯರ್, ಹೆಲ್ತ್ ಇನ್ಸ್ಪೆಕ್ಟರ್ ಗೆ ಮನವಿ ಮಾಡಿದರೂ, ನಮಗೂ ಅದಕ್ಕೆ ಸಂಬಂಧವಿಲ್ಲ ಅಂತಿದ್ದಾರೆ. ಶಾಲಾ ಮಕ್ಕಳು ಸೇರಿದಂತೆ ಸಾಕಷ್ಟು ಜನರು ಇಲ್ಲಿ ಓಡಾಡುತ್ತಾರೆ. ಈ ಬಗ್ಗೆ ಹೇಳಿದರೂ ಕ್ರಮವಹಿಸಿಲ್ಲ ಅಂತಾ ಅವರು ಏರು ದನಿಯಲ್ಲಿ ಆರೋಪಿಸಿದ್ದಾರೆ. ಪುರಸಭೆ ಅಧಿಕಾರಿ ಬಾಲಾಜಿ ಸೇರಿದಂತೆ ಸಮಸ್ಯೆ ಬಗೆಹರಿಸದ ಪುರಸಭೆಯ ಅಧಿಕಾರಿಗಳ ವಿರುದ್ಧವೂ ಅವರು ಆಕ್ರೋಶ ಹೊರಹಾಕಿದ್ದಾರೆ. ಕೂಡಲೇ ಯುಜಿಡಿ ಸಮಸ್ಯೆಯನ್ನು ಬಗೆಹರಿಸುವಂತೆ ನಿರ್ಮಲಾನಂದ ಸ್ವಾಮಿಜಿ ಒತ್ತಾಯಿಸಿದ್ದಾರೆ.
Nirmalananda Swamiji: ಯುಜಿಡಿ ಸಮಸ್ಯೆ ಬಗೆಹರಿಸದ ಶಾಸಕರ ವಿರುದ್ಧ ಸ್ವಾಮೀಜಿ ಆಕ್ರೋಶ
ಹೊಳವನಹಳ್ಳಿ ಗ್ರಾಮ ಪಂಚಾಯತ್ನಲ್ಲಿ ನೌಕರನಿಂದಲೇ ಕಳ್ಳತನ
ತುಮಕೂರು: ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಗ್ರಾಮ ಪಂಚಾಯತ್ನಲ್ಲಿ ನೌಕರನಿಂದಲೇ ಕಳ್ಳತನ ನಡೆದಿದೆ. ಗ್ರಾಮ ಪಂಚಾಯತ್ ಜವಾನ ನರೇಂದ್ರ ವಿರುದ್ಧ ಈ ಆರೋಪ ಕೇಳಿಬಂದಿದೆ. ಸದರಿ ನರೇಂದ್ರ ಕಳೆದ ಆರೇಳು ವರ್ಷಗಳಿಂದ ಕಳವು ಮಾಡ್ತಿದ್ದ ಎಂದು ತಿಳುದುಬಂದಿದೆ. ಗ್ರಾಮ ಪಂಚಾಯತ್ನ ಗೋಡೌನ್ ನಲ್ಲಿ ನರೇಂದ್ರ 20 ಜಿಎ ಕಬ್ಬಿಣದ ಪೈಪ್ ಹಾಗೂ ಬೆಲೆಬಾಳುವ ಕೇಬಲ್ ವೈರ್ ಕದ್ದಿದ್ದಾರೆ ಎಂದು ಆರೋಪಿಸಲಾಗಿದೆ. ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಬಳಸುವ ವಾಹನದಲ್ಲಿಯೇ ಕಳ್ಳತನಗಳು ನಡೆದಿವೆ. ಆದರೆ ಕಳೆದ ರಾತ್ರಿ ಕಳವು ಮಾಡಿಕೊಂಡು ಹೋಗುವಾಗ ನರೇಂದ್ರ ಸಿಕ್ಕಿಬಿದ್ದಿದ್ದಾನೆ. ಕೊರಟಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ.
ಮದ್ಯ ಮಾರಾಟ ಮಾಡುತ್ತಿದ್ದ ಮಹಿಳೆಯ ಬಂಧನ:
ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಹುಲಿಕುಂಟೆ ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಮಹಿಳೆಯನ್ನು ಬಂಧಿಸಲಾಗಿದೆ. ಗ್ರಾಮದ ಗಾಯತ್ರಿ ಎಂಬ ಮಹಿಳೆ ತನ್ನ ಅಂಗಡಿಯಲ್ಲಿ ಮದ್ಯ ಮಾರಾಟ ಮಾಡುತ್ತಿದ್ದಾಗ ಕೊರಟಗೆರೆ ಅಬಕಾರಿ ಇಲಾಖೆ ಅಧಿಕಾರಿ ಲತಾ ನೇತೃತ್ವದಲ್ಲಿ ದಾಳಿ ನಡೆದಿದೆ. ಸುಮಾರು ಎಂಟು ಲೀಟರ್ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ.
ಮಡಿಕೇರಿಯಲ್ಲಿ ವೃದ್ಧೆಯರನ್ನು ಕಟ್ಟಿ ಹಾಕಿ ಮನೆ ದರೋಡೆ
ಕೊಡಗು: ವೃದ್ಧೆಯರನ್ನು ಕಟ್ಟಿ ಹಾಕಿ ಮನೆ ದರೋಡೆ ಮಾಡಿರುವ ಘಟನೆ ಜಿಲ್ಲೆಯ ಮಡಿಕೇರಿ ತಾಲೂಕಿನ ಕೊಳಕೇರಿ ಗ್ರಾಮದಲ್ಲಿ ನಡೆದಿದೆ. ಜಾನಕಿ, ಅಮ್ನಕ್ಕಿಯನ್ನು ಬೆದರಿಸಿ, ಅವರ ಕೈಕಾಲು ಕಟ್ಟಿ ದರೋಡೆ ಮಾಡಿದ್ದಾರೆ. ಮನೆಯಲ್ಲಿದ್ದ 2.5 ಲಕ್ಷ ರೂ. ನಗದು, 83 ಗ್ರಾಂ ಚಿನ್ನಾಭರಣ ಕಳ್ಳತನ ಮಾಡಿದ್ದಾರೆ. ತಡರಾತ್ರಿ ಮನೆ ಬಾಗಿಲು ಮುರಿದು ದುಷ್ಕೃತ್ಯ ಎಸಗಿದ ನಾಲ್ವರು ಪರಾರಿಯಾಗಿದ್ದಾರೆ. ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ, ಪರಿಶೀಲನೆ ನಡೆಸಿದ್ದಾರೆ.
Also Read:
Bengaluru City Police hiring: ಬೆಂಗಳೂರು ಪೊಲೀಸ್ ಸೈಬರ್ ಕ್ರೈಂ ಲೋಕದಲ್ಲಿ ಭಾರೀ ಉದ್ಯೋಗಾವಕಾಶಗಳು!
Published On - 9:30 am, Wed, 2 February 22