ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಬೆಡ್ ಸಿಗದೇ ರೋಗಿಗಳ ನರಳಾಟ; ಪೊಲೀಸರೇ ಬಂದರೂ ನಿಮ್ಹಾನ್ಸ್ ವೈದ್ಯರು ಜಸ್ಟ್​ ಡೋಂಟ್​ ಕೇರ್!

nimhans: ಆತಂಕದ ವಿಷಯವೆಂದರೆ ತಮ್ಮಲ್ಲಿ ಬೆಡ್ ಖಾಲಿ ಇಲ್ಲವೆಂದು, ಬೇರೆ ಆಸ್ಪತ್ರೆಗಾದರೂ ರೆಫರ್ ಮಾಡಿ ಬರೆದುಕೊಡಿ ಎಂದರೂ ವೈದ್ಯರು ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ವಿಷಯ ತಿಳಿದು ಮಾಧ್ಯಮಗಳು ನಿಮ್ಹಾನ್ಸ್‌ ಆಸ್ಪತ್ರೆಯತ್ತ ಧಾವಿಸುತ್ತಿದ್ದಂತೆ ಬೇರೆ ಆಸ್ಪತ್ರೆಗೆ ರೆಫರ್ ಮಾಡಿ, ಕೈತೊಳೆದುಕೊಂಡಿದ್ದಾರೆ.

ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಬೆಡ್ ಸಿಗದೇ ರೋಗಿಗಳ ನರಳಾಟ; ಪೊಲೀಸರೇ ಬಂದರೂ ನಿಮ್ಹಾನ್ಸ್ ವೈದ್ಯರು ಜಸ್ಟ್​ ಡೋಂಟ್​ ಕೇರ್!
ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಬೆಡ್ ಸಿಗದೇ ರೋಗಿಗಳ ನರಳಾಟ; ಪೊಲೀಸರೇ ಬಂದರೂ ನಿಮ್ಹಾನ್ಸ್ ವೈದ್ಯರು ಜಸ್ಟ್​ ಡೋಂಟ್​ ಕೇರ್!
Follow us
TV9 Web
| Updated By: ಸಾಧು ಶ್ರೀನಾಥ್​

Updated on:Feb 02, 2022 | 8:01 AM

ಬೆಂಗಳೂರು: ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಬೆಡ್ ಸಿಗದೇ ರೋಗಿಗಳು ನರಳಾಡುತ್ತಿದ್ದಾರೆ. ನಿನ್ನೆ ರಾತ್ರಿ 8 ಗಂಟೆಗೆ ಆಸ್ಪತ್ರೆಗೆ ಬಂದರೂ ಚಿಕಿತ್ಸೆ ಸಿಕ್ಕಿಲ್ಲ. ಆ್ಯಂಬುಲೆನ್ಸ್‌ನಲ್ಲಿಯೇ ಗಂಟೆಗಟ್ಟಲೇ ಮಲಗಿದ್ದಾರೆ ಅಪಘಾತದಲ್ಲಿ ಗಾಯಗೊಂಡಿದ್ದ ಗುರುಬದನ್ ಎಂಬ ವ್ಯಕ್ತಿ. ನಡೆದುಕೊಂಡು ಹೋಗುತ್ತಿದ್ದ ಗುರುಬದನ್‌ಗೆ ವಾಹನ ಗುದ್ದಿ ಗಾಯಗೊಂಡಿದ್ದರು (injury). ಜೀವನ್‌ಭೀಮಾ ನಗರ ಟ್ರಾಫಿಕ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. ಗುರುಬದನ್‌ಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿತ್ತು. ತಲೆಗೆ ಪೆಟ್ಟಾಗಿದ್ದರಿಂದ ಅಲ್ಲಿನ ವೈದ್ಯರು ನಿಮ್ಹಾನ್ಸ್‌ಗೆ ರೆಫರ್ (nimhans) ಮಾಡಿದ್ದರು. ಗಾಯಾಳು ಗುರುಬದನ್‌ರನ್ನು ರಾತ್ರಿ 8 ಗಂಟೆಗೆ ಆ್ಯಂಬುನೆಲ್ಸ್‌ನಲ್ಲಿ ನಿಮ್ಹಾನ್ಸ್‌ಗೆ ಕರೆತರಲಾಗಿತ್ತು (emergency). ನಡುರಾತ್ರಿ 1 ಗಂಟೆ ಕಳೆದ್ರೂ ಗಾಯಾಳುವನ್ನು, ದಾಖಲಿಸಿಕೊಂಡು ಚಿಕಿತ್ಸೆ ನೀಡಿಲ್ಲ ನಿಮ್ಹಾನ್ಸ್‌ ಸಿಬ್ಬಂದಿ. ಬೆಡ್ ಖಾಲಿ ಇಲ್ಲವೆಂದು ಹೊರಗಡೆಯೇ ಮಲಗಿಸಿದ್ದಾರೆ.

ಆತಂಕದ ವಿಷಯವೆಂದರೆ ತಮ್ಮಲ್ಲಿ ಬೆಡ್ ಖಾಲಿ ಇಲ್ಲವೆಂದು, ಬೇರೆ ಆಸ್ಪತ್ರೆಗಾದರೂ ರೆಫರ್ ಮಾಡಿ ಬರೆದುಕೊಡಿ ಎಂದರೂ ವೈದ್ಯರು ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ವಿಷಯ ತಿಳಿದು ಮಾಧ್ಯಮಗಳು ನಿಮ್ಹಾನ್ಸ್‌ ಆಸ್ಪತ್ರೆಯತ್ತ ಧಾವಿಸುತ್ತಿದ್ದಂತೆ ಬೇರೆ ಆಸ್ಪತ್ರೆಗೆ ರೆಫರ್ ಮಾಡಿ, ಕೈತೊಳೆದುಕೊಂಡಿದ್ದಾರೆ. ಮುಂದೆ, ಗಾಯಾಳು ಗುರುಬದನ್‌ರನ್ನು ವಿಕ್ಟೋರಿಯಾ ಆಸ್ಪತ್ರೆಗೆ ರೆಫರ್ ಮಾಡಿದ್ದರು.

ನಿಮ್ಹಾನ್ಸ್‌ ಆಸ್ಪತ್ರೆಯಲ್ಲಿನ ಸಾಮಾನ್ಯ ಜನರ ನೋವು ಕೇಂದ್ರ ಸರ್ಕಾರಕ್ಕೆ ಕೇಳಿಸ್ತಿಲ್ಲ: ಏನಾಗಿತ್ತೆಂದರೆ ನಿಮ್ಹಾನ್ಸ್‌ ಆಸ್ಪತ್ರೆಯತ್ತ ನಿನ್ನೆ ಸೋಮವಾರ ಒಂದರ ಹಿಂದೆ ಒಂದರಂತೆ 8 ಕ್ಕೂ ಹೆಚ್ಚು ಆ್ಯಂಬುಲೆನ್ಸ್ ಬಂದಿದ್ದವು. ಆದರೆ ಆ್ಯಂಬುಲೆನ್ಸ್ ನಲ್ಲಿದ್ದ ಯಾರಿಗೂ ಚಿಕಿತ್ಸೆ ನೀಡದೇ ಆ್ಯಂಬುಲೆನ್ಸ್ ನಲ್ಲಿಯೇ ಇರಿಸಲಾಗಿತ್ತು. ವಿಕ್ಟೋರಿಯಾಗೆ ಹೋದ್ರು ಇಲ್ಲಿಗೇ ಕಳುಹಿಸ್ತಾರೆ. ಇಲ್ಲಿ ಬಂದ್ರೆ ಯಾರೂ ಕೇರ್ ಕೂಡ ಮಾಡೋದಿಲ್ಲ ಎಂದು ನಿಮ್ಹಾನ್ಸ್‌ ಆಸ್ಪತ್ರೆಯಲ್ಲಿನ ಅವ್ಯವಸ್ಥೆಯ ವಿರುದ್ಧ ಸಂಬಂಧಿಕರು ಆಕ್ರೋಶ ಹೊರಹಾಕಿದ್ದಾರೆ. ಸಾಮಾನ್ಯ ಜನರ ನೋವು ಕೇಂದ್ರ ಸರ್ಕಾರಕ್ಕೆ ಕೇಳಿಸ್ತಿಲ್ಲ. ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಪ್ರತಿನಿತ್ಯ ಇದೇ ಗೋಳು ಕಂಡುಬರುತ್ತದೆ. ಆಸ್ಪತ್ರೆಯ ಬಾಗಿಲಲ್ಲಿಯೇ ಮಲಗಿ, ಪ್ರಾಣ ಬಿಡ್ತಿರುವ ರೋಗಿಗಳ ಸಂಖ್ಯೆಯೂ ಹೆಚ್ಚಾಗಿದೆ.

ಇನ್ನು, ಆ್ಯಂಬುಲೆನ್ಸ್‌ನಲ್ಲೇ ಮಲಗಿ ನರಳುತ್ತಿದ್ದರೂ ವೈದ್ಯರು ನಿರ್ಲಕ್ಷ್ಯ ವಹಿಸುತ್ತಾರೆ. ಬೇರೆ ಆಸ್ಪತ್ರೆಗೆ ರೆಫರ್ ಮಾಡಿ ಕಳುಹಿಸಲೂ ಯಾರೂ ದಿಕ್ಕಿಲ್ಲ. ಅಪಘಾತವಾದ ವ್ಯಕ್ತಿಯ ಜೊತೆಗೆ ಪೊಲೀಸರೇ ಬಂದರೂ ನಿಮ್ಹಾನ್ಸ್ ಆಸ್ಪತ್ರೆಯ ವೈದ್ಯರು ಜಸ್ಟ್​ ಡೋಂಟ್​ ಕೇರ್ ಅನ್ನುತ್ತಿದ್ದಾರೆ ಎಂದು ಗಾಯಾಳು ಗುರುಬದನ್ ನರಳಾಟ ಕಂಡು ಸಂಬಂಧಿಕರು ಕಣ್ಣೀರು ಸುರಿಸುತ್ತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Nimhans Hospital: ಚಿಕಿತ್ಸೆಗೆ 8ಕ್ಕೂ ಹೆಚ್ಚು ಆ್ಯಂಬುಲೆನ್ಸ್‌ಗಳಲ್ಲಿ ಕಾದ ರೋಗಿಗಳು

Also Read: Bengaluru City Police hiring: ಬೆಂಗಳೂರು ಪೊಲೀಸ್​ ಸೈಬರ್ ಕ್ರೈಂ ಲೋಕದಲ್ಲಿ ಭಾರೀ ಉದ್ಯೋಗಾವಕಾಶಗಳು!

Also Read: ಕೈ ತುಂಬ ಸಂಬಳ ತರುವ ಕೆಲಸ ಬಿಟ್ಟು ಒಂದು ವರ್ಷದಲ್ಲಿ ಏಕಾಂಗಿಯಾಗಿ ಬಾವಿ ತೋಡಿ ಬಂಗಾರ ಬೆಳೆದ ಎಂಟೆಕ್ ಪದವೀಧರ!

Published On - 7:38 am, Wed, 2 February 22

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ