AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೈ ತುಂಬ ಸಂಬಳ ತರುವ ಕೆಲಸ ಬಿಟ್ಟು ಒಂದು ವರ್ಷದಲ್ಲಿ ಏಕಾಂಗಿಯಾಗಿ ಬಾವಿ ತೋಡಿ ಬಂಗಾರ ಬೆಳೆದ ಎಂಟೆಕ್ ಪದವೀಧರ!

ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಕೌಠಾ ಗ್ರಾಮದ ಸೂರ್ಯಕಾಂತ್ ಕೊಳಿ ಓದಿದ್ದು, ಆಟೋಮೊಬೈಲ್ ಇಂಜಿನಿಯರಿಂಗ್. ಜೊತೆಗೆ ಎಂಟೆಕ್ ಪದವಿದರ ಕೂಡ. ಆದ್ರೀಗ ತಮ್ಮ ಒಂದೂವರೆ ಎಕರೆ ಜಮೀನಿನಲ್ಲಿ ಏನಾದರೂ ಮಾಡಬೇಕೆಂಬ ಛಲದಿಂದಾಗಿ, ತಾವೊಬ್ಬರೇ ಒಂದು ವರ್ಷ ಬಾವಿ ತೋಡಿ ನೀರು ಚಿಮ್ಮಿಸಿದ್ದಾರೆ.

ಕೈ ತುಂಬ ಸಂಬಳ ತರುವ ಕೆಲಸ ಬಿಟ್ಟು ಒಂದು ವರ್ಷದಲ್ಲಿ ಏಕಾಂಗಿಯಾಗಿ ಬಾವಿ ತೋಡಿ ಬಂಗಾರ ಬೆಳೆದ ಎಂಟೆಕ್ ಪದವೀಧರ!
ತಾವು ತೋಡಿದ ಬಾವಿಯ ನೀರನ್ನು ಗಿಡಗಳಿಗೆ ಹಾಕುತ್ತಿರುವ ಸೂರ್ಯಕಾಂತ್
TV9 Web
| Edited By: |

Updated on: Feb 02, 2022 | 7:26 AM

Share

ಬೀದರ್: ಬಂಗರಾದ ಮನುಷ್ಯ ಸಿನಿಮಾದಲ್ಲಿ ವರನಟ ಡಾ.ರಾಜ್ಕುಮಾರ್ ಬರಡು ಭೂಮಿಯಲ್ಲಿ ಬೆಳೆ ಬೆಳೆದು ರಾಜೀವಪ್ಪ ಮಾದರಿಯಾಗಿದ್ರು. ಬಿಹಾರದ ಧಶರಥ್ ಮಾಂಜಿ ಪತ್ನಿ ದೂರದಿಂದ ನೀರು ಹೊತ್ತು ತರೋದನ್ನ ಕಂಡು, ಖುದ್ದು ತಾನೇ ಬಂಡೆ ಕೊರೆದು ದಾರಿ ಮಾಡಿದ್ರು. ಅದೇ ರೀತಿ ಸೂರ್ಯಕಾಂತ್ ಅನ್ನೋ ರೈತನೀಗ ಏಕಾಂಗಿಯಾಗಿ ಬಾವಿ ಕೊರೆದು ಜಮೀನಿನಲ್ಲಿ ಬೆಳೆ ಬೆಳೆದು ಮಾದರಿ ರೈತನಾಗಿದ್ದಾನೆ. ಸಾವಿರಾರು ರೂಪಾಯಿ ಸಂಬಳ ಕೊಡುವ ಕೋರ್ಸ್ ಓದಿ ಎರಡ್ಮೂರು ದೊಡ್ಡ ದೊಡ್ಡ ಕಂಪನಿಯಲ್ಲಿ ನೌಕರಿ ಸಹ ಮಾಡಿದ್ದ ರೈತ. ಆದ್ರೆ, ಅದ್ಯಾವುದೂ ಕೂಡ ಆತನಿಗೆ ಖುಷಿ ಕೊಡಲಿಲ್ಲ. ಲಾಕ್ ಡೌನ್ ಅವಧಿಯಲ್ಲಿ ಮನೆಗೆ ಬಂದ ಆತ ಮಾಡಿದ್ದೇ ಭೂಮಿ ತಾಯಿ ಮೆಚ್ಚೋ ಕೆಲಸ.

ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಕೌಠಾ ಗ್ರಾಮದ ಸೂರ್ಯಕಾಂತ್ ಕೊಳಿ ಓದಿದ್ದು, ಆಟೋಮೊಬೈಲ್ ಇಂಜಿನಿಯರಿಂಗ್. ಜೊತೆಗೆ ಎಂಟೆಕ್ ಪದವಿದರ ಕೂಡ. ಆದ್ರೀಗ ತಮ್ಮ ಒಂದೂವರೆ ಎಕರೆ ಜಮೀನಿನಲ್ಲಿ ಏನಾದರೂ ಮಾಡಬೇಕೆಂಬ ಛಲದಿಂದಾಗಿ, ತಾವೊಬ್ಬರೇ ಒಂದು ವರ್ಷ ಬಾವಿ ತೋಡಿ ನೀರು ಚಿಮ್ಮಿಸಿದ್ದಾರೆ. ಓದಿಗೆ ತಕ್ಕಂತೆ ದೊಡ್ಡ ದೊಡ್ಡ ಕಂಪನಿಯಲ್ಲಿ ಸಾವಿರಾರು ರೂಪಾಯಿ ಸಂಬಳ ಸಿಗೋ ಕೆಲಸ ಮಾಡಿಕೊಂಡಿದ್ದ. ಆದ್ರೆ, ಕಳೆದ ವರ್ಷ ಲಾಕ್ಡೌನ್ ಅವಧಿಯಲ್ಲಿ ಊರಿಗೆ ಬಂದ ಸೂರ್ಯಕಾಂತ್, ತನ್ನ ಜಮೀನಿನಲ್ಲಿ ಕೃಷಿ ಮಾಡೋಕೆ ಮುಂದಾದ್ರು. ಆದ್ರೆ, ನೀರಿನ ಸಮಸ್ಯೆ ಇದ್ದುದ್ದರಿಂದ, ಖುದ್ದು ತಾನೇ ಒಂದು ವರ್ಷ ಬಂಡೆ ಕೊರೆದು ನೆಲ ಅಗೆದು ಬಾವಿ ತೋಡಿದ್ದಾರೆ.. 25/30 ಅಡಿ ವಿಸ್ತೀರ್ಣ 14 ಅಡಿಯಷ್ಟು, ಆಳದ ಬಾವಿಯನ್ನ ತೋಡಿದ್ದಾರೆ.

ಅಡಿಯಷ್ಟು ಬಾವಿಯಲ್ಲಿ 50 ಕೊಡದಷ್ಟು ನೀರು ಸಿಕ್ಕಿದ್ದು, ಆ ನೀರು ವ್ಯರ್ಥವಾಗಬಾರದೆಂದು ಪೇರಲ, ಮಾವು, ಚಿಕ್ಕು, ಹೀಗೆ ವಿವಿಧ ಜಾತಿಯ 4 ನೂರರಷ್ಟು ಹೆಚ್ಚು ಹಣ್ಣಿನ ಗಿಡಗಳನ್ನ ನೆಟ್ಟಿದ್ದಾರೆ. ಆ ಗಿಡಗಳಿಗೆ ಪ್ರತಿದಿನವೂ ತಾನು ತೋಡಿದ ಬಾವಿಯ ನೀರನ್ನ ಗಿಡಗಳಿಗೆ ನೀರುಣಿಸುತ್ತಿದ್ದಾರೆ. ಇನ್ನು ಸೂರ್ಯಕಾಂತರ್ರ ಕೃಷಿ ಪ್ರೇಮದ ಬಗ್ಗೆ ಇವರ ಸ್ನೇಹಿತರೂ ಮೆಚ್ಚುಗೆ ವ್ಯಕ್ತಪಡಿಸ್ತಿದ್ದಾರೆ.

ಒಟ್ನಲ್ಲಿ ಇತ್ತೀಚೆಗೆ ಓದಿದ ಮೇಲೆ ಹೈಟೆಕ್ ಕಂಪನಿಗಳಲ್ಲಿ ಕೆಲಸ ಮಾಡಿಕೊಂಡು ಹೈಫೈ ಜೀವನ ಮಾಡೋ ಯುವಕರೇ ಹೆಚ್ಚು. ಆದ್ರೆ, ಇಂಥವರ ಮಧ್ಯೆ ಎಂಟೆಕ್ ಪದವೀದರ, ಇಂಜಿನಿಯರ್ ಸೂರ್ಯಕಾಂತ್ ಮಾದರಿ ರೈತನಾಗೋ ಮೂಲಕ ಯುವ ಸಮುದಾಯಕ್ಕೂ ಮಾದರಿಯಾಗಿದ್ದಾರೆ. ಯುವ ರೈತನಿಗೆ ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಯಿಂದ, ಪಂಚಾಯತಿಯಿಂದ ಪ್ರೋತ್ಸಾಹ ಸಿಕ್ರೆ, ಮತ್ತಷ್ಟು ಸಾಧನೆಗೆ ಸ್ಫೂರ್ತಿಸಿಗಲಿದೆ.

ವರದಿ: ಸುರೇಶ್ ನಾಯಕ್, ಟಿವಿ9 ಬೀದರ್

M tech man drill well

ಸೂರ್ಯಕಾಂತ್

M tech man drill well

ಸೂರ್ಯಕಾಂತ್

ಇದನ್ನೂ ಓದಿ: ಸಾವಯವ ಗೊಬ್ಬರ ಬಳಸಿ ಸಮೃದ್ಧ ಫಸಲು ತೆಗೆದ ರೈತ; 10 ಎಕರೆ ಜಮೀನಿನಲ್ಲಿ ನಾಲ್ಕು ರೀತಿಯ ಬೆಳೆ ಬೆಳೆದು ಯಶಸ್ವಿ