ತುಮಕೂರು: ಕೈದಿ ನೋಡಲು ಬಂದವರಿಂದ ಹಣ ವಸೂಲಿ, ಮಧುಗಿರಿ ಸಬ್ ಜೈಲ್ ಸೂಪರಿಂಟೆಂಡೆಂಟ್ ಲೋಕಾಯುಕ್ತ ಬಲೆಗೆ

ಇಂದು ಒಂದೇ ದಿನ ಇಬ್ಬರು ಅಧಿಕಾರಿಗಳು ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಬಾದಾಮಿ ಬಿಇಒ ಕಚೇರಿಯ ಆಫೀಸ್ ಸೂಪರಿಂಟೆಂಡೆಂಟ್ ಆಗಿರುವ ವೆಂಕಟೇಶ್ ಇನಾಮದಾರ ಹಾಗೂ ಮಧುಗಿರಿ ಸಬ್ ಜೈಲಿನ ಜೈಲು ಸೂಪರಿಂಟೆಂಡೆಂಟ್ ಆಗಿರುವ ದೇವೇಂದ್ರ ಕೋಣಿ ಎಂಬುವವರು ಕೈದಿ ನೋಡಲು ಬಂದಿದ್ದ ವ್ಯಕ್ತಿ ಬಳಿ ಲಂಚ ಪಡಿಯುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದಾರೆ.

ತುಮಕೂರು: ಕೈದಿ ನೋಡಲು ಬಂದವರಿಂದ ಹಣ ವಸೂಲಿ, ಮಧುಗಿರಿ ಸಬ್ ಜೈಲ್ ಸೂಪರಿಂಟೆಂಡೆಂಟ್ ಲೋಕಾಯುಕ್ತ ಬಲೆಗೆ
ಲೋಕಾಯುಕ್ತ ದಾಳಿ
Follow us
ಮಹೇಶ್ ಇ, ಭೂಮನಹಳ್ಳಿ
| Updated By: ಕಿರಣ್ ಹನುಮಂತ್​ ಮಾದಾರ್

Updated on:Aug 29, 2023 | 3:53 PM

ತುಮಕೂರು, ಆ.29: ಇತ್ತೀಚೆಗಷ್ಟೇ ಹಾಸನ, ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ನಡೆದ ಹಗರಣಗಳು ಬೆಳಕಿಗೆ ಬಂದಿತ್ತು. ಅಲ್ಲಿ ಹಣವೊಂದಿದ್ದರೆ, ಕೈದಿಗಳಿಗೆ ಎಲ್ಲವೂ ಸಫ್ಲೈ ಆಗುತ್ತಿತ್ತು. ಇದೀಗ ತುಮಕೂರು (Tumakuru) ಜಿಲ್ಲೆಯ ಮಧುಗಿರಿ ಸಬ್ ಜೈಲಿನ ಕರ್ಮಕಾಂಡ ಬೆಳಕಿಗೆ ಬಂದಿದೆ. ಹೌದು, ಜೈಲು ಸೂಪರಿಂಟೆಂಡೆಂಟ್ ದೇವೇಂದ್ರ ಕೋಣಿ ಎಂಬುವವರು ಕೈದಿ ನೋಡಲು ಬಂದಿದ್ದ ವ್ಯಕ್ತಿ ಬಳಿ ಲಂಚ ಪಡಿಯುತ್ತಿದ್ದರು. ಈ ವೇಳೆ ಖಚಿತ ಮಾಹಿತಿ ಪಡೆದ ಲೋಕಾಯುಕ್ತ (Lokayukta) ಅಧಿಕಾರಿಗಳು ದಾಳಿ ನಡೆಸಿ ಭ್ರಷ್ಟ ಅಧಿಕಾರಿಯನ್ನು ಹಿಡಿದಿದ್ದಾರೆ.

5 ಸಾವಿರ ಲಂಚ ಪಡೆಯುವಾಗ ಲೋಕಾ ಬಲೆಗೆ

ಕಳೆದ 5 ದಿನಗಳ ಹಿಂದೆಯಷ್ಟೇ ಜೈಲುಪಾಲಾಗಿದ್ದ ಆರೋಪಿ ಇಂತಿಯಾಜ್‌ ಅವರ ತಂದೆ ಅರ್ಬಾಜ್ ಅವರು ಜೈಲಿನಲ್ಲಿರುವ ಮಗನನ್ನು ನೋಡಲು ಬಂದಿದ್ದರು. ಈ ವೇಳೆ ಪ್ರತಿದಿನ ಜೈಲಿಗೆ ಬರುವಾಗ ಜೈಲ್ ಸೂಪರಿಂಟೆಂಡೆಂಟ್ ಲಂಚ ಪಡೆಯುತ್ತಿದ್ದರು. ಇದುವರೆಗೆ 10 ಸಾವಿರ ರೂಪಾಯಿ ಲಂಚ ಪಡೆದಿರುವ ದೇವೇಂದ್ರ ಕೋಣಿಯವರನ್ನು ಲೋಕಾಯುಕ್ತ DySP ಮಂಜುನಾಥ್ ಹಾಗೂ ಹರೀಶ್ ನೇತೃತ್ವದಲ್ಲಿ ದಾಳಿ ಮಾಡಿ, ಇಂದು (ಆ.29) 5 ಸಾವಿರ ಲಂಚ ಪಡೆಯುವಾಗ ರೆಡ್​ಹ್ಯಾಂಡ್​ ಆಗಿ ಲೋಕಾ ಬಲೆಗೆ ಬಿದ್ದಿದ್ದಾರೆ. ಇದೀಗ ಜೈಲ್ ಸೂಪರಿಂಟೆಂಡೆಂಟ್ ದೇವೇಂದ್ರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಇದನ್ನೂ ಓದಿ:ಬೆಂಗಳೂರು: ಅರಮನೆಯಂಥ ಮನೆ ಕಟ್ಟಿಸಿರುವ ಮಹದೇವಪುರ ವಲಯದ ಆರ್ ಐ ಲೋಕಾಯುಕ್ತ ದಾಳಿ ನಡೆದಿರದಿದ್ದರೆ ವಿಜಯ್ ಮಲ್ಯಗೆ ಸೆಡ್ಡು ಹೊಡೆಯುತ್ತಿದ್ದ!

ಬಿಇಒ ಕಚೇರಿಯ ಆಫೀಸ್ ಸೂಪರಿಂಟೆಂಡೆಂಟ್ ಲೋಕಾಯುಕ್ತ ಬಲೆಗೆ

ಬಾಗಲಕೋಟೆ: ಜಿಲ್ಲೆಯ ಬಾದಾಮಿ ಬಿಇಒ ಕಚೇರಿಯ ಆಫೀಸ್ ಸೂಪರಿಂಟೆಂಡೆಂಟ್ ಆಗಿರುವ ವೆಂಕಟೇಶ್ ಇನಾಮದಾರ ಎಂಬುವವರು ಹೈಸ್ಕೂಲ್ ನಿವೃತ್ತ ಶಿಕ್ಷಕ ಸತ್ಯಪ್ಪ ಕಾಮಾ ಅವರಿಗೆ ಸ್ಥಗಿತವಾದ ನಿವೃತ್ತಿ ವೇತನ ಬಿಲ್ ಪಾಸ್ ಮಾಡಲು 15 ಸಾವಿರ ಲಂಚಕ್ಕೆ‌ ಡಿಮ್ಯಾಂಡ್ ಮಾಡಿದ್ದರು. ಅದರಲ್ಲಿ 10 ಸಾವಿರ ಮೊದಲೇ ಫೋನ್​ ಪೇ ಮೂಲಕ ಹಾಕಿಸಿಕೊಂಡ ಸುಪರಿಂಟೆಂಡೆಂಟ್. ಇಂದು 5 ಸಾವಿರ ನಗದು ಪಡೆಯುವಾಗ ಲೋಕಾಯುಕ್ತ ಡಿವೈಎಸ್​ಪಿ ಪುಷ್ಪಲತಾ ನೇತೃತ್ವದಲ್ಲಿ ದಾಳಿ ಮಾಡಿ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

ಲೋಕಾಯುಕ್ತ ಬಲೆಗೆ ಬಿದ್ದ ಬಿಬಿಎಂಪಿ ಸೀವೇಜ್ ವಾಟರ್ ಮ್ಯಾನೇಜ್ ಮೆಂಟ್ ಎಇಇ

ಬೆಂಗಳೂರು: ಬಿಬಿಎಂಪಿ ಚಾಮರಾಜಪೇಟೆಯ ಸೀವೇಜ್ ವಾಟರ್ ಮ್ಯಾನೇಜ್ ಮೆಂಟ್ ಎಇಇ ಆಗಿದ್ದ ಶಿವಣ್ಣ ಎಂಬುವವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಹೌದು, ಕಾಮಗಾರಿಯ ಪೆಂಡಿಂಗ್ ಬಿಲ್ ಬಿಡುಗಡೆಗಾಗಿ 50 ಸಾವಿರಕ್ಕೆ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಶಿವಣ್ಣ ಅವರು 10 ಸಾವಿರ ಲಂಚ  ಸ್ವೀಕಾರ ಮಾಡುವ ವೇಳೆ ಲೋಕಾಯುಕ್ತ ಅಧಿಕಾರಿಗಳಿಂದ ಟ್ರ್ಯಾಪ್  ಮಾಡಲಾಗಿದೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:30 pm, Tue, 29 August 23