AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹತ್ಯಾಳ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಬೆತ್ತಲಾದ ವ್ಯಕ್ತಿ, 5 ಬೈಕ್‌ಗಳಿಗೆ ಬೆಂಕಿ ಹಚ್ಚಿ ಹುಚ್ಚಾಟ

ಹತ್ಯಾಳು ದೇವೇಗೌಡ ಎಂಬ ವ್ಯಕ್ತಿಯಿಂದ ಅಚಾತುರ್ಯ ನಡೆದಿದ್ದು, ದೇವಸ್ಥಾನದ ಆವರಣದಲ್ಲಿ ಇಟ್ಟಿದ್ದ ಅಂಗಡಿಗಳಲ್ಲಿನ ಪೆಪ್ಸಿ ಬಾಟೆಲ್ ಹೊಡೆದು ಹುಚ್ಚಾಟ ಮೆರೆದಿದ್ದಾನೆ. ಅಲ್ಲದೆ, ಅಂಗಡಿಯಲ್ಲಿನ ಹೂವಿನ ಹಾರಗಳನ್ನ ಕೊರಳಿಗೆ ಹಾಕಿಕೊಂಡು ಪುಂಡಾಟ ನಡೆಸಿದ್ದಾನೆ.

ಹತ್ಯಾಳ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಬೆತ್ತಲಾದ ವ್ಯಕ್ತಿ, 5 ಬೈಕ್‌ಗಳಿಗೆ ಬೆಂಕಿ ಹಚ್ಚಿ ಹುಚ್ಚಾಟ
ಹತ್ಯಾಳ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಬೆತ್ತಲಾದ ವ್ಯಕ್ತಿ, 5 ಬೈಕ್‌ಗಳಿಗೆ ಬೆಂಕಿ ಹಚ್ಚಿ ಹುಚ್ಚಾಟ
TV9 Web
| Edited By: |

Updated on:Jan 15, 2022 | 1:45 PM

Share

ತುಮಕೂರು: ತುಮಕೂರು ಜಿಲ್ಲೆಯ ತಿಪಟೂರಿನ ಸುಪ್ರಸಿದ್ಧ ಹತ್ಯಾಳ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ವ್ಯಕ್ತಿಯೊರ್ವ ಹುಚ್ಚಾಟ ನಡೆಸಿರುವ ಘಟನೆ ನಡೆದಿದೆ. ರಾತ್ರಿ ಹತ್ಯಾಳ ಸ್ವಾಮಿ ದೇವಸ್ಥಾನದ ಮುಂದೆ ಬೈಕ್‌ಗಳಿಗೆ ಬೆಂಕಿ ಹಚ್ಚಿ, ಬಾಟೆಲ್‌ಗಳನ್ನ ಹೊಡೆದು ಹಾರಾಟ-ಚೀರಾಟ ನಡೆಸಿದ್ದಾನೆ. ಮಾನಸಿಕ ಅಸ್ವಸ್ಥನ ರೀತಿ ಬೆತ್ತಲೆಗೊಂಡ ವ್ಯಕ್ತಿಯಿಂದ ಈ ಘಟನೆ ನಡೆದಿದೆ.

ಹತ್ಯಾಳು ದೇವೇಗೌಡ ಎಂಬ ವ್ಯಕ್ತಿಯಿಂದ ಅಚಾತುರ್ಯ ನಡೆದಿದ್ದು, ದೇವಸ್ಥಾನದ ಆವರಣದಲ್ಲಿ ಇಟ್ಟಿದ್ದ ಅಂಗಡಿಗಳಲ್ಲಿನ ಪೆಪ್ಸಿ ಬಾಟೆಲ್ ಹೊಡೆದು ಹುಚ್ಚಾಟ ಮೆರೆದಿದ್ದಾನೆ. ಅಲ್ಲದೆ, ಅಂಗಡಿಯಲ್ಲಿನ ಹೂವಿನ ಹಾರಗಳನ್ನ ಕೊರಳಿಗೆ ಹಾಕಿಕೊಂಡು ಪುಂಡಾಟ ನಡೆಸಿದ್ದಾನೆ. ಪುಂಡಾಟ ನಡೆಸುತ್ತಿದ್ದ ವ್ಯಕ್ತಿ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಲಾಗಿ, ಮಾಹಿತಿ ತಿಳಿದ ಕೆ.ಬಿ. ಕ್ರಾಸ್ ಪೊಲೀಸರು ಪುಂಡನನ್ನ ವಶಕ್ಕೆ ಪಡೆದಿದ್ದಾರೆ.

ಇನ್ನು ದೇವಸ್ಥಾನದ ಸಿಬ್ಬಂದಿಗಳು ಮೆಟ್ಟಿಲುಗಳನ್ನು ಸ್ವಚ್ಚಗೊಳಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಮೆಟ್ಟಿಲ ಮೇಲಿದ್ದ ಗಾಜುಗಳನ್ನು ತೆಗೆದು ನೀರಿನ ಮೂಲಕ ಸ್ವಚ್ಚಗೊಳಿಸುತ್ತಿದ್ದಾರೆ. ಸ್ಥಳಕ್ಕೆ ತಿಪಟೂರು ಎಸಿ, ದಿಗ್ವಿಜಯ ಬೋಡಕೆ, ತಹಶೀಲ್ದಾರ್ ಚಂದ್ರಶೇಖರ್ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಅಧಿಕಾರಿಗಳು ಘಟನೆ ಬಗ್ಗೆ ವರದಿ ಪಡೆಯುತ್ತಿದ್ದಾರೆ.

ಮೇಲುಕೋಟೆ ಚೆಲುವನಾರಾಯಣಸ್ವಾಮಿ ಸನ್ನಿಧಾನದಲ್ಲಿ ಬೆತ್ತಲಾದ ಯುವಕ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಮೇಲುಕೋಟೆ ನಾಡಿನ ಪ್ರತಿಷ್ಠಿತ ಪುಣ್ಯ ಕ್ಷೇತ್ರಗಳಲ್ಲಿ ಒಂದು. ದನುರ್ಮಾಸದ ಪೂಜೆ ಮುಗಿಸಿದ್ದ ದೇವಾಲಯದ ಸಿಬ್ಬಂದಿ ರಾತ್ರಿ 9 ಗಂಟೆ ಸುಮಾರಿಗೆ ದೇವಾಲಯಿಂದ ಹೊರ ಹೋಗಲು ಸಿದ್ಧತೆ ನಡೆಸಿರುವಾಗಲೇ ದೇವಾಲಯಕ್ಕೆ ರಾಮ್ ಕುಮಾರ್ ಎಂಬ ಯುವಕ ಪ್ರವೇಶ ಮಾಡಿದ್ದಾನೆ. ಇದ್ಯಾರಪ್ಪ ದೇವಾಲಯದ ಬಾಗಿಲು ಹಾಕುವ ವೇಳೆಗೆ ದೇವಸ್ಥಾನಕ್ಕೆ ಬರುತ್ತಿದ್ದಾನೆ ಎಂದು ಕೊಂಡು ಆತನನ್ನೇ ಹಿಂಬಾಲಿಸಿದ ದೇವಾಲಯದ ಭದ್ರತಾ ಸಿಬ್ಬಂದಿ ಆತನನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಯಾಕಂದ್ರೆ ದೇವಾಲಯದ ಒಳಭಾಗಕ್ಕೆ ಬಂದ ರಾಮ್ ಕುಮಾರ್ ನೇರವಾಗಿ ಚೆಲುವನಾರಾಯಣಸ್ವಾಮಿಯ ಮೂಲ ಮೂರ್ತಿ ಇರುವ ಗರ್ಭಗುಡಿಯ ಒಳಗೆ ನುಗ್ಗಲು ಯತ್ನಿಸಿದ್ದ. ಮೊದಲೇ ಮಾದಕ ವಸ್ತುವನ್ನ ಸೇವಿಸಿದ್ದ ಆತನನ್ನ ನಿಯಂತ್ರಿಸಲು ದೇವಾಲಯದ ಸಿಬ್ಬಂದಿ ಹರ ಸಾಹಸಪಟ್ಟಿದ್ದಾರೆ.

ಎಷ್ಟೇ ಪ್ರಯತ್ನ ಪಟ್ಟರೂ ಆತ ಅವರಿಂದ ತಪ್ಪಿಸಿಕೊಂಡು ಗರ್ಭಗುಡಿಯೊಳಗೆ ನುಗ್ಗಿದ್ದಾನೆ. ಅಲ್ಲಿಯೇ ಇದ್ದ ದೇವಾಲಯದ ಪ್ರಧಾನ ಅರ್ಚಕರು ಮತ್ತು ಭದ್ರತಾ ಸಿಬ್ಬಂದಿ ಹಲ್ಲೆ ನಡೆಸಿ ಹೊರ ದಬ್ಬಲು ಯತ್ನಿಸಿದರೂ ಅವರಿಂದ ತಪ್ಪಿಸಿಕೊಂಡು ಹೊರ ಓಡಿ ಮತ್ತೆ ಗರ್ಭಗುಡಿ ಪ್ರವೇಶ ಮಾಡಿದ್ದಾನೆ. ಅಲ್ಲಿಂದ ಆತನನ್ನ ಎಳೆದು ತರುವ ಸಂದರ್ಭದಲ್ಲಿ ಆತ ತನ್ನ ಬಟ್ಟೆ ಬಿಚ್ಚಿ ದೇವರ ಮುಂದೆಯೇ ಬೆತ್ತಲಾಗಿ ಗರ್ಭಗುಡಿಯ ಬಾಗಿಲ ಬಳಿಯೇ ನಿಂತ ಘಟನೆ ನಡೆದಿದೆ. ಸದ್ಯ ಯುವಕನ ಹುಚ್ಚಾಟವನ್ನು ತಡೆಯಲಾಗದ ಸಿಬ್ಬಂದಿ ಕಡೆಗೂ ಆತನನ್ನು ದೇವಸ್ಥಾನದ ಹೊರಕ್ಕೆ ದಬ್ಬಿದ್ದಾರೆ.

ಇದನ್ನೂ ಓದಿ: Samantha: ವಿಚ್ಛೇದನದ ಬಳಿಕ ಮೊದಲ ಬಾರಿಗೆ ಸಮಂತಾರನ್ನು ಹೊಗಳಿದ ನಾಗ ಚೈತನ್ಯ

Published On - 1:41 pm, Sat, 15 January 22