ದನ ಮೇಯಿಸಲು ಹೋಗಿದ್ದ ಮಹಿಳೆಯ ಒರ್ಬರ ಕೊಲೆ, ಮಾಂಗಲ್ಯ ಸರ ನಾಪತ್ತೆ

ನಿನ್ನೆ ಬೆಳಿಗ್ಗೆ ಜಯಲಕ್ಷ್ಮೀ ದನ ಮೇಯಿಸಲು ಗ್ರಾಮದ ಬೆಟ್ಟದ ಬಳಿ ಹೋಗಿದ್ದರು. ಈ ವೇಳೆ ಮಹಿಳೆ ಮೇಲೆ ಎರಗಿದ ಕಿರಾತಕರು ಮಹಿಳೆ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರ ಕದ್ದಿದ್ದಾರೆ.

ದನ ಮೇಯಿಸಲು ಹೋಗಿದ್ದ ಮಹಿಳೆಯ ಒರ್ಬರ ಕೊಲೆ, ಮಾಂಗಲ್ಯ ಸರ ನಾಪತ್ತೆ
ಸಾಂದರ್ಭಿಕ ಚಿತ್ರ
Edited By:

Updated on: Aug 25, 2021 | 10:34 AM

ತುಮಕೂರು: ದನ ಮೇಯಿಸಲು ಹೋಗಿದ್ದ ಮಹಿಳೆಯನ್ನು ಕೊಲೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ಛೋಟಾ ಸಾಬರಪಾಳ್ಯ ಗ್ರಾಮದ ಬಳಿ ನಡೆದಿದೆ. ಜಯಲಕ್ಷ್ಮೀ(35) ಕೊಲೆಯಾದ ಮಹಿಳೆ. ಕೃತ್ಯಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ.

ನಿನ್ನೆ ಬೆಳಿಗ್ಗೆ ಜಯಲಕ್ಷ್ಮೀ ದನ ಮೇಯಿಸಲು ಗ್ರಾಮದ ಬೆಟ್ಟದ ಬಳಿ ಹೋಗಿದ್ದರು. ಈ ವೇಳೆ ಮಹಿಳೆ ಮೇಲೆ ಎರಗಿದ ಕಿರಾತಕರು ಮಹಿಳೆ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರ ಕದ್ದಿದ್ದಾರೆ. ಸಂಜೆ 6.45 ಆದರೂ ಪತ್ನಿ ಮನೆಗೆ ಬರದಿದ್ದರಿಂದ ಗಂಡ ಶಿವಕುಮಾರ್ ಪತ್ನಿಯನ್ನು ಹುಡುಕುತ್ತ ಬೆಟ್ಟದ ಬಳಿ ಹೋಗಿದ್ದಾರೆ. ಈ ವೇಳೆ ಘಟನೆ ಬೆಳಕಿಗೆ ಬಂದಿದೆ.

ಮಹಿಳೆ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ರಾತ್ರಿಯಿಡೀ ಮೃತದೇಹ ಸ್ಥಳದಲ್ಲಿಯೇ ಇದ್ದು ಇಂದು (ಆಗಸ್ಟ್ 25) FSL ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ನಿರ್ಮಾಣ ಹಂತದ ನೀರಿನ ಟ್ಯಾಂಕ್ ಕುಸಿದು ಆಟವಾಡುತ್ತಿದ್ದ ಬಾಲಕ ಸಾವು; ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಯುವಕನ ಶವ ಪತ್ತೆ