Borewell: ಬೋರ್​ವೆಲ್ ಕೊರೆಯಿಸೇ ಇಲ್ಲ, ಜೆಸಿಬಿಯಲ್ಲಿ ಗುಂಡಿ ತೋಡಿ ಬಿಲ್ ಮಂಜೂರು ಆರೋಪ!

ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಕೆ ಮೇಲನಹಳ್ಳಿ ಗ್ರಾಮದ ಪಕ್ಕ ಹೇಮಾವತಿ ನಾಲೆ ಹಾದುಹೋಗಿದೆ. ಹೇಮಾವತಿ ನಾಲೆ ಪಕ್ಕದಲ್ಲಿ ಸುಮಾರು 10 ಅಡಿ ಆಳದ ಗುಂಡಿ ತೆಗೆಯಲಾಗಿದೆ. ಈ ಗುಂಡಿಗೆ ಕೇಸಿಂಗ್ ಹಾಕಿ ಜೊತೆಗೆ ಡಸ್ಟ್ ಸುರಿದು, ನೀರು ಹಾಕಿ ಬೋರ್ ವೆಲ್ ತೋಡಿದಂತೆ ಮೇಲ್ನೋಟಕ್ಕೆ ಸೃಷ್ಟಿಸಿದ್ದಾರೆ ಎನ್ನಲಾಗಿದೆ.

Borewell: ಬೋರ್​ವೆಲ್ ಕೊರೆಯಿಸೇ ಇಲ್ಲ, ಜೆಸಿಬಿಯಲ್ಲಿ ಗುಂಡಿ ತೋಡಿ ಬಿಲ್ ಮಂಜೂರು ಆರೋಪ!
ಬೋರ್​ವೆಲ್ ಕೊರೆಯದೇ ಹಣ ಮಂಜೂರು ಮಾಡಿಸಿಕೊಂಡಿದ್ದಾರೆ ಎಂದು ಕೆ ಮೇಲನಹಳ್ಳಿ ಗ್ರಾಮಸ್ಥ (ಒಳಚಿತ್ರ) ಆರೋಪಿಸಿದ್ದಾರೆ.
Follow us
TV9 Web
| Updated By: ಸಾಧು ಶ್ರೀನಾಥ್​

Updated on: Nov 13, 2021 | 12:59 PM

ತುಮಕೂರು: ಬೋರ್​ವೆಲ್ ಕೊರೆಯದೇ ಹಣ ಮಂಜೂರು ಮಾಡಿರುವ ಆರೋಪ ಕೇಳಿಬಂದಿದ್ದು, ಜೆಸಿಬಿಯಲ್ಲಿ ಗುಂಡಿ ತೋಡಿ ಬಿಲ್ ಮಂಜೂರು ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಕೆ ಮೇಲನಹಳ್ಳಿ ಗ್ರಾಮದಲ್ಲಿ ಬೋರ್​ವೆಲ್ ಕೊರೆಯದೇ ಹಣ ಮಂಜೂರು ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ.  ಗ್ರಾಮದ ಜಗದೀಶ್, ಲೋಕೇಶ್, ಸುನೀಲ್ ಬೀರಲಿಂಗಪ್ಪ, ಶಂಕರಲಿಂಗಪ್ಪ,ಅಭಿಷೇಕ್ ಸೇರಿದಂತೆ ಹಲವರು ಸೇರಿ ಗೋಲ್‌ಮಾಲ್ ಮಾಡಿದ್ದಾರೆ ಅಂತಾ ಕೆ ಮೇಲನಹಳ್ಳಿ ಗ್ರಾಮಸ್ಥರು ಆರೋಪಿಸಿದ್ದಾರೆ. ಗ್ರಾಮ ಪಂಂಚಾಯತ್ ಅಧಿಕಾರಿಗಳ ಜೊತೆ ಶಾಮೀಲಾಗಿ ಗೋಲ್ ಮಾಡಿದ್ದಾರೆ ಅಂತಾ ಆರೋಪ ಕೇಳಿಬಂದಿದೆ.

ಗ್ರಾಮದ ಪಕ್ಕ ಹೇಮಾವತಿ ನಾಲೆ ಹಾದುಹೋಗಿದೆ. ಹೇಮಾವತಿ ನಾಲೆ ಪಕ್ಕದಲ್ಲಿ ಸುಮಾರು 10 ಅಡಿ ಆಳದ ಗುಂಡಿ ತೆಗೆಯಲಾಗಿದೆ. ಈ ಗುಂಡಿಗೆ ಕೇಸಿಂಗ್ ಹಾಕಿ ಜೊತೆಗೆ ಡಸ್ಟ್ ಸುರಿದು, ನೀರು ಹಾಕಿ ಬೋರ್ ವೆಲ್ ತೋಡಿದಂತೆ ಮೇಲ್ನೋಟಕ್ಕೆ ಸೃಷ್ಟಿಸಿದ್ದಾರೆ ಎನ್ನಲಾಗಿದೆ.

ಮೋಸದಿಂದ ಹಣ ಮಾಡಲು ಈ ರೀತಿ ಮಾಡಿದ್ದಾರೆ ಅಂತಾ ಗ್ರಾಮಸ್ಥರು ಆರೋಪಿಸಿದ್ದಾರೆ. ಐದಾರು ತಿಂಗಳ ಹಿಂದೆ ನಡೆದ ಘಟನೆ, ತಡವಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ‌ ಜರುಗಿಸಲು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಒಟ್ಟಾರೆ ಮೇಲ್ನೋಟಕ್ಕೆ ಬೋರ್ ವೆಲ್ ಕೊರೆಸಿದ್ದೀವಿ ಅಂತಾ ತೋರಿಸಿ ಗ್ರಾಮದ ಕೆಲವರು ಹಣದಾಸೆಗೆ ಗೋಲ್‌ಮಾಲ್ ಮಾಡಿದ್ದಾರೆ ಅಂತಾ ಗ್ರಾಮಸ್ಥರು ಆರೋಪಿಸಿದ್ದಾರೆ.

(no borewell drilling just jcb work but money sanctioned allege villagers in turuvekere taluk tumkur district)