ತುಮಕೂರು: ನಾಳೆ (ಫೆ.6) ಕಲ್ಪತರು ನಾಡು ತುಮಕೂರಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಆಗಮಿಸಲಿದ್ದಾರೆ. ಗುಬ್ಬಿ ತಾಲೂಕಿನ, ನಿಟ್ಟೂರು ಬಳಿಯ ಹೆಚ್ಎಎಲ್ ಹೆಲಿಕಾಪ್ಟರ್ ಕಾರ್ಖಾನೆಯನ್ನು ಉದ್ಘಾಟಿಸಲಿದ್ದಾರೆ. ಪ್ರಧಾನಿ ಮೋದಿ MI17 ಹೆಲಿಕಾಪ್ಟರ್ನಲ್ಲಿ ಬರಲಿದ್ದು, ಮಧ್ಯಾಹ್ನ 3.20ಕ್ಕೆ ಹೆಚ್ ಎಎಲ್ ಹೆಲಿಪ್ಯಾಡ್ನಲ್ಲಿ ಇಳಿಯಲಿದ್ದಾರೆ. ಪ್ರಧಾನಿ 3.30ಕ್ಕೆ ತುಮಕೂರಿನ HAL ಹೆಲಿಕಾಪ್ಟರ್ ಕಾರ್ಖಾನೆಯ ಲೋಕಾರ್ಪಣೆ ಮತ್ತು ಜಲ ಜೀವನ್ ಮಿಷನ್ ಯೋಜನೆಗಳ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಬಳಿಕ 1 ಗಂಟೆಗಳ ಕಾಲ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಭಾಷಣ ಮಾಡಲಿದ್ದಾರೆ. ಮಧ್ಯಾಹ್ನ 4.40ಕ್ಕೆ ಹೆಚ್ಎಎಲ್ ಹೆಲಿಪ್ಯಾಡ್ಗೆ ಆಗಮಿಸಿ, 4.45ಕ್ಕೆ ಬೆಂಗಳೂರಿನತ್ತ ಪ್ರಯಾಣ ಬೆಳಸಲಿದ್ದಾರೆ.
ನಾಳೆ ಬಾರಿ ಸರಕು ವಾಹನಗಳು, ಕೆಎಸ್ ಆರ್ ಟಿಸಿ ಬಸ್ ಗಳು ಬದಲಿ ಮಾರ್ಗದಲ್ಲಿ ಸಂಚರಿಸಲು ಡಿಸಿ ಆದೇಶ ಹೊಡಿಸಿದ್ದಾರೆ. ನಿಟ್ಟೂರು ಕಡೆಯಿಂದ ಸಂಚರಿಸುವ ವಾಹನಗಳು ನಿಟ್ಟೂರು-ಟಿಬಿ ಕ್ರಾಸ್-ತುರುವೇಕೆರೆ ಮಾರ್ಗವಾಗಿ ಕೆಬಿ ಕ್ರಾಸ್ಗೆ ಸಂಚರಿಸುವುದು. ತಿಪಟೂರಿನಿಂದ ಬರುವ ವಾಹನಗಳು ಕೆಬಿ ಕ್ರಾಸ್-ತುರುವೇಕೆರೆ-ಟಿಬಿ ಕ್ರಾಸ್ ಮಾರ್ಗವಾಗಿ ನಿಟ್ಟೂರಿಗೆ ಸಂಚರಿಸುವುದು ಎದು ಹೇಳಿದ್ದಾರೆ. ಜೊತೆಗೆ ಪ್ರದಾನಿ ಮೋದಿ ಆಗಮನ ಹಿನ್ನೆಲೆಯಲ್ಲಿ ಪೊಲೀಸ್ ಬಿಗಿ ಭದ್ರತೆಗೆ ಮಾಡಲಾಗಿದೆ.
ಇದನ್ನೂ ಓದಿ: ತುಮಕೂರಿನಲ್ಲಿ ದೇಶದ ಅತಿದೊಡ್ಡ ಹೆಲಿಕಾಪ್ಟರ್ ಫ್ಯಾಕ್ಟರಿ: ಸೋಮವಾರ ಪ್ರಧಾನಿಯಿಂದ ಉದ್ಘಾಟನೆ
ತುಮಕೂರು ಎಸ್ಪಿ ಸೇರಿದಂತೆ ಒಟ್ಟು 6 ಎಸ್ಪಿಗಳ ನೇಮಕ ಮಾಡಲಾಗಿದೆ. 19 ಡಿವೈಎಸ್ಪಿ, 119 ಸಿಪಿಐ, 239 ಪಿಎಸ್ಐ, 1202 ಎಎಸ್ಐ, ಹೆಡ್ಕಾನ್ಸ್ಟೇಬಲ್, 400 ಕಾನ್ಸ್ಟೇಬಲ್, ಹೋಮ್ಗಾರ್ಡ್, 14 ಡಿಎಆರ್ ಮತ್ತು 12 ಕೆಎಸ್ಆರ್ಪಿ ತುಕಡಿ ಹಾಗೂ ನಾಳೆ ಭದ್ರತೆಗೆ ಒಟ್ಟು 1,600ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
ಒಟ್ಟು 300 ಕ್ಕೂ ಹೆಚ್ಚು ಕೆಎಸ್ಆರ್ಟಿಸಿ ಬಸ್ಗಳನ್ನು ಬುಕ್ ಮಾಡಲಾಗಿದೆ. ಒಟ್ಟು ಜಿಲ್ಲೆಯಲ್ಲಿ 609 ಕೆಎಸ್ಆರ್ಟಿಸಿ ಬಸ್ಗಳಿವೆ. ಇದರಲ್ಲಿ ಸದ್ಯ 300 ಬಸ್ಗಳನ್ನು ಬುಕ್ ಮಾಡಲಾಗಿದೆ. 300 ಬಸ್ಗಳ ಬಳಕೆ ಹಿನ್ನೆಲೆ ನಾಳೆ ಜಿಲ್ಲಾದ್ಯಂತ ಪ್ರಯಾಣಕ್ಕೆ ಸಮಸ್ಯೆ ಉಂಟಾಗಲಿದೆ. ಪ್ರಯಾಣಿಕರಿಗೆ ತೊಂದರೆ ಯಾಗುವ ಸಾಧ್ಯತೆ ಇದೆ.
Published On - 11:36 am, Sun, 5 February 23