Karnataka Election: ಕಾಂಗ್ರೆಸ್​ ಟಿಕೆಟ್ ಹಂಚಿಕೆ ವೇಳೆ ಹೊಸ ಮುಖಗಳಿಗೆ ಮೊದಲ ಆದ್ಯತೆ: ಪರಮೇಶ್ವರ್

ನಮ್ಮಲ್ಲಿ ಜಾಸ್ತಿ ಹೊಸ ಮುಖಗಳಿಗೆ ಮೊದಲ ಆದ್ಯತೆ. ಈಗಾಗಲೇ 110 ಮಹಿಳೆಯರು ಅರ್ಜಿ ಹಾಕಿದ್ದಾರೆ. ಕೆಲ ಮಾನದಂಡಗಳ‌ ಮೇಲೆ ಟಿಕೆಟ್ ಹಂಚಿಕೆ ಆಗುತ್ತದೆ ಎಂದು ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.

Karnataka Election: ಕಾಂಗ್ರೆಸ್​ ಟಿಕೆಟ್ ಹಂಚಿಕೆ ವೇಳೆ ಹೊಸ ಮುಖಗಳಿಗೆ ಮೊದಲ ಆದ್ಯತೆ: ಪರಮೇಶ್ವರ್
ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್
Follow us
TV9 Web
| Updated By: Rakesh Nayak Manchi

Updated on:Feb 04, 2023 | 4:08 PM

ತುಮಕೂರು: ಈ ಬಾರಿಯ ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Election 2023) ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಹೊಸ ಮುಖಗಳಿಗೆ ಮೊದಲ ಆಧ್ಯತೆ ನೀಡಲಿದೆ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ (Dr.G.Parameshwar) ಹೇಳಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವಿಚಾರವಾಗಿ ಜಿಲ್ಲೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಭ್ಯರ್ಥಿ ಪಟ್ಟಿ ಬಿಡುಗಡೆ ಜೆಡಿಎಸ್ ಕಾದುಕುಳಿತಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ್, ಜೆಡಿಎಸ್ 224 ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಹಾಕುವ ಬಗ್ಗೆ ನನಗೆ ಗೊತ್ತಿಲ್ಲ. ಬಿಜೆಪಿ ಅವರು ಕೆಲ ಅತೃಪ್ತರಿಗೆ ಟಿಕೆಟ್ ಕೊಟ್ಟರೂ ಕೊಡ್ಬಹುದು. ನಮ್ಮಲ್ಲಿ ಜಾಸ್ತಿ ಹೊಸ ಮುಖಗಳಿಗೆ ಮೊದಲ ಆದ್ಯತೆ. ಈಗಾಗಲೇ 110 ಮಹಿಳೆಯರು ಅರ್ಜಿ ಹಾಕಿದ್ದಾರೆ. ಕೆಲ ಮಾನದಂಡಗಳ‌ ಮೇಲೆ ಟಿಕೆಟ್ ಹಂಚಿಕೆ ಆಗುತ್ತದೆ. ನಾನು 8 ವರ್ಷ ಕೆಪಿಸಿಸಿ ಅಧ್ಯಕ್ಷ ಆಗಿದ್ದೆ. 224 ಕ್ಷೇತ್ರದಲ್ಲೂ ಸಹ ಅಭ್ಯರ್ಥಿಗಳಿದ್ದಾರೆ. ಅದರಲ್ಲಿ ಯಾರು ಅಂತ ತಿರ್ಮಾನ ಆಗಬೇಕು. ನಿನ್ನೆ ನಮ್ಮ ಮುಖಂಡರ ಜೊತೆ ಸಭೆ ನಡೆದಿದೆ. ಸಭೆಯಲ್ಲಿ ಕೆಲ ತಿರ್ಮಾನ ಮಾಡಲಾಗಿದೆ‌. ಅದನ್ನ ನಾನು ಇಲ್ಲಿ ಹೇಳಲ್ಲ ಎಂದರು.

ತುಮಕೂರು ‌ನಗರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಉದ್ಯಮಿ ಅಟಿಕಾ ಬಾಬು ಸ್ಪರ್ಧೆ ವಿಚಾರ‌ವಾಗಿ ಮಾತನಾಡಿದ ಪರಮೇಶ್ವರ್, ಈ ಬಗ್ಗೆ ನನಗೆ ಗೊತ್ತಿಲ್ಲ. ನಾವು ಯಾರ ಬಗ್ಗೆಯೂ ಸಾರ್ವಜನಿಕ ವಲಯದಲ್ಲಿ ಮಾತಾನಾಡಬಾರದು. ಕೆಲ ದಿನಗಳ ಹಿಂದೆ ನನ್ನ ಮನೆಗೆ ಅಟಿಕಾ ಬಾಬು ಬಂದಿದ್ದರು. ನಾನು ಕಾಂಗ್ರೆಸ್​ನಿಂದ ಸ್ಪರ್ಧೆ ಮಾಡುತ್ತೇನೆ ಅಂದಿದ್ದಾರೆ. ನೋಡಪ್ಪ ಈ ಬಗ್ಗೆ ನಮ್ಮ ಹೈಕಮಂಡ್ ತಿರ್ಮಾನ ಮಾಡುತ್ತದೆ ಅಂತ ಹೇಳಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ: Election News: 4 ಶಾಸಕರಿಗೆ ಟಿಕೆಟ್ ಕೈ ತಪ್ಪುವ ಭೀತಿ; 22 ಹಾಲಿ ಶಾಸಕರಿಗೆ “ಕೈ” ವರಿಷ್ಠರ ಎಚ್ಚರಿಕೆ

ಎಲ್ಲರನ್ನ ಒಟ್ಟಿಗೆ ತಗೊಂಡು ಹೋಗುವ ಪಾರ್ಟಿ ಕಾಂಗ್ರೆಸ್. ಪಕ್ಷದಲ್ಲಿ ದುಡಿದವರಿಗೆ ಮಾನ್ಯತೆ ಇದೆ‌. ಇನ್ನು ಕೆಲವರು ಪ್ರೀತಿ ವಿಶ್ವಾಸ ಗೆದ್ದಿರುತ್ತಾರೆ. ಅಂತವರು ನಮ್ಮ ಪಕ್ಷಕ್ಕೆ ಬರುವುದು ಒಂದು ತರ ನಮಗೆ ಹೆಮ್ಮೆ. ಹೀಗಾಗಿ ಅಂತವರಿಗೆ ಪಕ್ಷದಿಂದ ಟಿಕೆಟ್ ಕೊಡುತ್ತೇವೆ. ಈ ಹಿಂದೆಲ್ಲಾ ಕೆಲವರಿಗೆ ಟಿಕೆಟ್ ಕೊಟ್ಟಿದ್ದಾರೆ ಎಂದರು. ಸರ್ವೆಯಲ್ಲಿ ಕಾಂಗ್ರೆಸ್​ಗೆ ಹಿನ್ನಡೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಈಗಾಗಲೇ ನಮ್ಮ ಪಕ್ಷದಿಂದ ಒಂದು ಸ್ಯಾಂಪಲ್ ಸರ್ವೆ ನಡೆದಿದೆ‌. ಆ ಸರ್ವೆಯಲ್ಲಿ ಬಂದ ಫಲಿತಾಂಶದಿಂದ ಕೆಲ ಬದಲಾವಣೆ ನಿರ್ಧಾರ ಮಾಡಲು ತಿರ್ಮಾನ ಮಾಡಿದ್ದೇವೆ. ನಾವು ಈ ಬಾರಿ ಗೆಲ್ಲಲೇಬೇಕು ಎಂದರು.

ರಾಜೀನಾಮೆ ಸುದ್ದಿ ಸುಳ್ಳು: ಪರಮೇಶ್ವರ್

ಪ್ರಣಾಳಿಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ವಿಚಾರವಾಗಿ ಮಾತನಾಡಿದ ಪರಮೇಶ್ವರ್, ನಿನ್ನೆ ರಾಜಿನಾಮೆ ಸುದ್ದಿ ಹರಿದಾಡಿತ್ತು. ಅದೆಲ್ಲಾ ಸುಳ್ಳು. ಕೆಲ ವಿಚಾರಗಳ ಬಗ್ಗೆ ಸುರ್ಜೆವಾಲಾ ಅವರ ಜೊತೆ ಚರ್ಚೆ ಮಾಡಿದ್ದೇನೆ. ಸುಮಾರು 3 ಗಂಟೆಗಳ ಕಾಲ ಚರ್ಚೆ ಮಾಡಿದ್ದೇನೆ. ನಾವು ಯಾವ ರೀತಿ ಚುನಾವಣೆಗೆ ಹೋಗಬೇಕು, ಚುನಾವಣೆಗೆ ನಮ್ಮ ಗಣ ನೀತಿ ಏನು ಇರಬೇಕು, ಚುನಾವಣಾ ಪ್ರಣಾಳಿಕೆಗಳು ಹೇಗೆ ಇರಬೇಕು, ಜನ ಅದನ್ನ ಒಪ್ಪುತ್ತಾರೆಯೇ ಎಂಬ ಬಗ್ಗೆ ಚರ್ಚೆ ನಡೆಸಿದ್ದೇವೆ. ಆದರೆ ಅದನ್ನ ಬೇರೆ ಬೇರೆ ರೀತಿ ಬಿಂಬಿಸಿದ್ದಾರೆ ಎಂದರು.

ನಮ್ಮಲ್ಲಿ ಅಸಮಾಧಾನ ತರಲು ಹುನ್ನಾರ ನಡೆಯುತ್ತಿದೆ: ಪರಮೇಶ್ವರ್

ಕಾಂಗ್ರೆಸ್ ಹೊರಡಿಸಿದ ಎಲ್ಲಾ ಪ್ರಣಾಳಿಕೆಗಳು ನನ್ನ ಗಮನಕ್ಕೆ ಬಂದಿದೆ‌. ನಾವೆಲ್ಲರೂ ಒಟ್ಟಿಗೆ ಸೇರಿ ಮಾಡಿದ್ದೇವೆ‌. ಕೆಲವರು ನಮ್ಮಲ್ಲಿ ಅಸಮಾಧಾನ ತರಲು ಈ ರೀತಿ ಮಾಡುತ್ತಿದ್ದಾರೆ. ಗೃಹಲಕ್ಷ್ಮೀ ಭಾಗ್ಯಕ್ಕೆ ಕೆಲವರು ಎಲ್ಲಿಂದ ಹಣ ತರುತ್ತೀರಾ ಎಂದು ಪ್ರಶ್ನಿಸುತ್ತಿದ್ದಾರೆ. ಅದಕ್ಕೆಲ್ಲಾ ನಾವು ಉತ್ತರ ಕೊಟ್ಟಿದ್ದೇವೆ. ನಾವು ಜನರಿಗೆ ಪ್ರಣಾಳಿಕೆ ಕೊಟ್ಟ ಮೇಲೆ ಅದನ್ನ ಜಾರಿಗೆ ತರಬೇಕು. ಇದರ ಬಗ್ಗೆ ನಾವು ಚರ್ಚೆ ಮಾಡಿದ್ದೇವೆ. 1 ನೇ ತರಗತಿಯಿಂದ 5 ನೇ ತರಗತಿಯವರೆಗೆ ಯಾರು ಮಕ್ಕಳನ್ನ ಸರ್ಕಾರಿ ಶಾಲೆಗೆ ಕಳಿಹಿಸುತ್ತಾರೋ ಅಂತಹ ಎಸ್​​ಸಿ, ಎಸ್​ಟಿ ಸಮುದಾಯದ ಕುಟುಂಬಕ್ಕೆ‌ ಹಣ ಬಿಡುಗಡೆ ಮಾಡುತ್ತೇವೆ ಅಂತ ಹೇಳಿಕೆ ಬಿಡುಗಡೆ ಮಾಡಿದ್ದೇವೆ. ಅದಕ್ಕೆ ವರ್ಷಕ್ಕೆ 3600 ಕೋಟಿ ಹಣ ಬೇಕಾಗುತ್ತದೆ. ಇದರ ಬಗ್ಗೆ ತಿರ್ಮಾನ ಮಾಡಿದ್ದೇವೆ ಎಂದರು.

ಗುಬ್ಬಿ ಹೆಚ್​​ಎಎಲ್ ಉತ್ಪಾದನಾ ಘಟಕ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಆಗಮನ ವಿಚಾರವಾಗಿ ಮಾತನಾಡಿದ ಪರಮೇಶ್ವರ್, ಅವರು ನಮ್ಮ ಪ್ರಧಾನಮಂತ್ರಿಗಳು. ಅವರೇ ಪೌಂಡೆಷನ್ ಹಾಕಿದ್ದರು. ಇನ್ನೂ ಎರಡು ವರ್ಷಗಳಲ್ಲಿ ಇಲ್ಲಿಂದ ಹೆಲಿಕಾಪ್ಟರ್ ಹಾರಾಡುತ್ತದೆ ಅಂತ ಹೇಳಿದ್ದರು. ಕಾರಣಾಂತರಗಳಿಂದ 7 ವರ್ಷಗಳ ಬಳಿಕ ಉದ್ಘಾಟನೆ ಆಗುತ್ತಿದೆ. ಅದನ್ನ ಅವರನ್ನೆ ಕೇಳಬೇಕು. ಹೆಚ್​ಎಎಲ್ ಉತ್ಪಾದನಾ ಘಟಕಕ್ಕೆ ಒಟ್ಟು 6500 ಜನಕ್ಕೆ ಉದ್ಯೋಗ ಕೊಡುತ್ತೇನೆ ಅಂತ ಹೇಳಿದ್ದಾರೆ. ಆದಷ್ಟು ತುಮಕೂರು ಜಿಲ್ಲೆಯ ಜನರಿಗೆ ಹೆಚ್ಚಿನ ಉದ್ಯೋಗ ಕೊಡಬೇಕು. ನಮ್ಮಲ್ಲಿ ಐಟಿಐ, ಇಂಜಿನಿಯರ್, ಸೇರಿದಂತೆ ಅನೇಕ ವಿದ್ಯಾಭ್ಯಾಸ ಮಾಡಿದವರು ಇದ್ದಾರೆ. ಅವರನ್ನ ಆಯ್ಕೆ ಮಾಡಿ ತರಬೇತಿ ಕೊಟ್ಟು ಕೆಲಸ ಕೊಡಿ ಎಂದರು.

ಪಕ್ಷದಿಂದ ನನ್ನನ್ನು ಸೈಡ್​ಲೈನ್ ಮಾಡಿಲ್ಲ ಎಂದ ಪರಮೇಶ್ವರ್

ಕಾಂಗ್ರೆಸ್ ಪಕ್ಷದಲ್ಲಿ ತಮ್ಮನ್ನು ಸೈಡ್​​ಲೈನ್ ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಮಾಜಿ ಡಿಸಿಎಂ, ನನ್ನನ್ನ ಯಾರು ಸೈಡ್ ಲೈನ್ ಮಾಡಿಲ್ಲ. ಹಾಗೆ ಮಾಡಿದ್ದಿದ್ದರೆ ಪ್ರಣಾಳಿಕೆ ಸಮಿತಿ ಅಧ್ಯಕ್ಷರನ್ನಾಗಿ ಮಾಡುತ್ತಿದ್ದರಾ? ಮಾಡುತ್ತಿರಲಿಲ್ಲ ಅಲ್ವಾ ಎಂದರು. ಇನ್ನು, ಪ್ರಜಾಧ್ವನಿ ಯಾತ್ರೆ ಎರಡು ಟೀಂ ಬಗ್ಗೆ ಪ್ರತಿಕ್ರಿಯಿಸಿ, ಹೌದು ಎರಡು ಟೀಂ ಮಾಡಿದ್ದಾರೆ. ಒಂದು ಕಡೆ ಸಿದ್ದರಾಮಯ್ಯ, ಮತ್ತೊಂದು ಕಡೆ ಡಿ.ಕೆ.ಶಿವಕುಮಾರ್ ಹೋಗುತ್ತಾರೆ. ಮೈಸೂರು ಭಾಗಕ್ಕೆ ಶಿವಕುಮಾರ್ ಹೋದರೆ, ನಾನು ಆಕಡೆನೆ ಹೋಗುತ್ತೇನೆ, ನಿನ್ನೆ ಕೋಲಾರಕ್ಕೆ ಹೋಗಿದ್ದೆ. ಇವತ್ತು ಮಾಲೂರು ಕಡೆಗೆ ಹೋಗಬೇಕಿತ್ತು, ಕಾರಣಾಂತರಗಳಿಂದ ಹೋಗಲು ಆಗಿಲ್ಲ. ಪ್ರಜಾಧ್ವನಿ ಯಾತ್ರೆಯಲ್ಲಿ ಉತ್ತಮ ಬೆಂಬಲ ಸಿಗುತ್ತಿದೆ. ಇಡೀ ರಾಜ್ಯ ಕಾಂಗ್ರೆಸ್ ಪರವಾಗಿದೆ. ಈ ಬಾರಿ ಜನ ಕಾಂಗ್ರೆಸ್ ಕೈ ಹಿಡಿಯುತ್ತಾರೆ. ರಾಜ್ಯದಲ್ಲಿ ಜನ ಬದಲಾವಣೆ ಬಯಸಿದ್ದಾರೆ ಎಂದರು. ಮುಂದುವರೆದ ಮಾತನಾಡಿದ ಅವರು, ಚುನಾವಣೆಗೆ ರಣನೀತಿ ಬಗ್ಗೆ ಬಗ್ಗೆ ರಾಜ್ಯ ಕಾಂಗ್ರೆಸ್​ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಜೊತೆ ಚರ್ಚಿಸಿದ್ದೇನೆ ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:05 pm, Sat, 4 February 23

ಹನುಮಂತನಿಗೆ ಕಳಪೆ ಕೊಟ್ಟ ಮನೆಮಂದಿ, ಜೈಲು ಸೇರಿದ ಹಾಡು ಹಕ್ಕಿ
ಹನುಮಂತನಿಗೆ ಕಳಪೆ ಕೊಟ್ಟ ಮನೆಮಂದಿ, ಜೈಲು ಸೇರಿದ ಹಾಡು ಹಕ್ಕಿ
Video: ಮನೆ ಎದುರು ಮೈಗೆ ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ
Video: ಮನೆ ಎದುರು ಮೈಗೆ ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ
ಮದುವೆ ಮಂಟಪದಲ್ಲಿ ಕೋಪಗೊಂಡ ಪೂಜಾರಿ, ಮಾಡಿದ್ದೇನು ನೋಡಿ
ಮದುವೆ ಮಂಟಪದಲ್ಲಿ ಕೋಪಗೊಂಡ ಪೂಜಾರಿ, ಮಾಡಿದ್ದೇನು ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್