AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Election News: 4 ಶಾಸಕರಿಗೆ ಟಿಕೆಟ್ ಕೈ ತಪ್ಪುವ ಭೀತಿ; 22 ಹಾಲಿ ಶಾಸಕರಿಗೆ “ಕೈ” ವರಿಷ್ಠರ ಎಚ್ಚರಿಕೆ

ಚುನಾವಣಾ ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್​ ನಾಯಕರು ಟಿಕೆಟ್​ ಹಂಚಿಕೆ ವಿಚಾರದಲ್ಲಿ ತಲೆಕೆಡಿಸಿಕೊಂಡಿದ್ದಾರೆ. ಈಗಾಗಲೇ ತಮ್ಮ ತಮ್ಮ ಕ್ಷೇತ್ರವನ್ನ ಒಂದು ತಿಂಗಳುಗಳೊಳಗಾಗಿ ಗಟ್ಟಿ ಮಾಡಿಕೊಳ್ಳದಿದ್ದರೆ ಟಿಕೆಟ್​ ನೀಡುವುದಿಲ್ಲ ಎಂದು ಖಡಕ್​ ಎಚ್ಚರಿಕೆ ನೀಡಿದೆ.

Election News: 4 ಶಾಸಕರಿಗೆ ಟಿಕೆಟ್ ಕೈ ತಪ್ಪುವ ಭೀತಿ; 22 ಹಾಲಿ ಶಾಸಕರಿಗೆ ಕೈ ವರಿಷ್ಠರ ಎಚ್ಚರಿಕೆ
ಟಿಕೆಟ್​ ಆಕಾಂಕ್ಷಿಗಳಿಗೆ ಖಡಕ್​ ಎಚ್ಚರಿಕೆ ಕೊಟ್ಟ ಕಾಂಗ್ರೆಸ್​ ವರಿಷ್ಟರು
TV9 Web
| Edited By: |

Updated on:Feb 04, 2023 | 8:38 AM

Share

ವಿಧಾನಸಭೆ ಚುನಾವಣೆ ಇನ್ನೆನು ಕೆಲವು ತಿಂಗಳುಗಳು ಬಾಕಿ ಇದ್ದು, ಚುನಾವಣಾ ಕಾವು ಶುರುವಾಗಿದೆ. ಕೆಲವರಿಗೆ ಟಿಕೆಟ್​ ಕೈ ತಪ್ಪುವ ಭೀತಿ ಎದುರಾಗಿದ್ದರೆ, ಇನ್ನೂ ಕೆಲವರು ಈ ಬಾರಿಯಾದರೂ ನಮಗೆ ಟಿಕೆಟ್​ ಸಿಗಬಹುದೆಂಬ ಆಶಾಭಾವನೆಯಿಂದ ಎದುರು ನೋಡುತ್ತಿದ್ದಾರೆ. ಒಟ್ಟಿನಲ್ಲಿ ಚುನಾವಣಾ ಹತ್ತಿರ ಬರುತ್ತಿದ್ದಂತೆ ಟಕೆಟ್​ ಆಕಾಂಕ್ಷಿಗಳಿಗೆ ಭಯ ಶುರುವಾಗಿರುವುದಂತೂ ಸುಳ್ಳಲ್ಲ. ಅದರಂತೆ ವಿವಿಧ ಕಾರಣ ನೀಡಿ ಈ ನಾಲ್ವರು ಶಾಸಕರಿಗೆ ಈ ಬಾರಿ ಟಿಕೆಟ್ ಕೈ ತಪ್ಪುವ ಭೀತಿ ಎದುರಾಗಿದೆ. ವಯಸ್ಸಿನ ಕಾರಣದಿಂದ ಅಫ್ಜಲ್​ಪುರ ಶಾಸಕ ಎಂ.ವೈ.ಪಾಟೀಲ್ ಹಾಗೂ ಪಾವಗಡದಿಂದ ವೆಂಕಟರಮಣಪ್ಪ, ಕ್ಷೇತ್ರದಲ್ಲಿ ಅನುಕಂಪದ ಅಲೆ ಇಲ್ಲದ ಕಾರಣ ಕುಂದಗೋಳದಿಂದ ಕುಸುಮಾ ಶಿವಳ್ಳಿ, ಇನ್ನು ಸರ್ವೆ ವರದಿ ಇರದ ಹಿನ್ನೆಲೆ ಲಿಂಗಸುಗೂರಿನ ಡಿ.ಎಸ್.ಹುಲಗೇರಿ ಅವರಿಗೆ ಟಿಕೆಟ್​ ಕೈ ತಪ್ಪುವ ಭಯ ಶುರುವಾಗಿದೆ.

ಈ ನಾಲ್ವರ ಪೈಕಿ ಇಬ್ಬರು ಶಾಸಕರಿಂದ ಮಕ್ಕಳ ಪರ ಲಾಬಿ ಶುರುವಾಗಿದೆ. ಎಮ್ ವೈ ಪಾಟೀಲ್ ರಾಜಕೀಯ ನಿವೃತ್ತಿ ಹಿನ್ನೆಲೆ ತಮ್ಮ ಪುತ್ರ ಅರುಣ್ ಪಾಟೀಲ್​ಗೆ ಟಿಕೆಟ್ ಕೇಳಿದ್ದಾರೆ. ಇತ್ತ ಸಿದ್ದರಾಮಯ್ಯ ಬೆಂಬಲಿಗ ಜೆ ಎಂ ಕೊರಬು ಕೂಡಾ ಟಿಕೆಟ್​ಗಾಗಿ ಬೇಡಿಕೆ ಇಟ್ಟಿದ್ದಾರೆ. ಇದರ ಜೊತೆ ಪಾವಗಡದ ಶಾಸಕ ವೆಂಕಟರಮಣಪ್ಪ ಕೂಡ ತಮ್ಮ ಮಗನಿಗೆ ಟಿಕೆಟ್​ ನೀಡಿ ಎಂದು ಕೇಳಿದ್ದಾರೆ. ಈ ಎಲ್ಲಾ ಸರ್ವೆ ವರದಿ ಆಧರಿಸಿಯೇ ಹಾಲಿ ಶಾಸಕರ ಟಿಕೇಟ್ ಹಣೆಬರಹವನ್ನೂ ಕೈ ನಾಯಕರು ನಿರ್ಧರಿಸುತ್ತಿದ್ದಾರೆ. ಈ ನಾಲ್ವರನ್ನೂ ಸೇರಿಸಿ 8-10 ಹಾಲಿ ಶಾಸಕರಿಗೆ ಒಂದು ತಿಂಗಳೊಳಗೆ ಕ್ಷೇತ್ರ ಸರಿ ಮಾಡಿಕೊಳ್ಳಿ. ಇಲ್ಲವಾದರೆ ಟಿಕೆಟ್ ಸಿಗುವುದು ಡೌಟ್ ಎಂದು ಈಗಾಗಲೇ ಕಾಂಗ್ರೆಸ್ ವರಿಷ್ಠರು ಎಚ್ಚರಿಕೆ ಕೊಟ್ಟಿದ್ದಾರೆ.

ಇದನ್ನೂ ಓದಿ:ಪಕ್ಷಾಂತರಗಳು ಇರುತ್ತವೆ, ರಾಜಕೀಯ ಪಕ್ಷಗಳು ಒಡೆಯುತ್ತವೆ, ಆದ್ರೂ ಒಂದು ಪಕ್ಷ ಅಧಿಕಾರಕ್ಕೆ ಬರುತ್ತದೆ: ಕೋಡಿಶ್ರೀ ಮತ್ತೊಂದು ಭವಿಷ್ಯ

ಇನ್ನು ಮೂರು ಸರ್ವೆ ವರದಿಯಲ್ಲೂ ಯಾರಿಗೆ ಹಿನ್ನಡೆ ಇದೆಯೋ ಅವರಿಗೆ ಟಿಕೇಟ್ ಸಿಗುವುದು ಡೌಟ್ ಎಂದು 22 ಕ್ಕೂ ಹೆಚ್ಚು ಹಾಲಿ ಶಾಸಕರಿಗೆ ಆಂತರಿಕ ಸಮೀಕ್ಷೆಯ ಮೇರೆಗೆ ಎಚ್ಚರಿಕೆ ಕೊಟ್ಟಿದ್ದ ಎಐಸಿಸಿ, ಇದರ ಬೆನ್ನಲ್ಲೆ ಸುಮಾರು 12 ಕ್ಷೇತ್ರಗಳಲ್ಲಿ ಅಲರ್ಟ್ ಆದ ಹಾಲಿ ಶಾಸಕರು ತಮ್ಮ ತಮ್ಮ ಕ್ಷೇತ್ರವನ್ನು ಹಿಡಿತಕ್ಕೆ ತೆಗೆದುಕೊಂಡಿದ್ದಾರೆ. ಈಗಲೂ ಸೋಲಿನ ಭೀತಿ ಇರುವ ಶಾಸಕರಿಗೆ ಒಂದು ತಿಂಗಳ ಡೆಡ್ ಲೈನ್ ನೀಡಿದ್ದು, ಗೆಲುವಿನ ವಾತಾವರಣ ಸೃಷ್ಟಿ ಆಗಿಲ್ಲ ಎಂದ್ರೆ ಟಿಕೆಟ್ ಇಲ್ಲ ಎಂದು ಪದೇ ಪದೇ ಸುರ್ಜೆವಾಲಾ, ಡಿಕೆಶಿ, ಸಿದ್ದರಾಮಯ್ಯ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ಒಟ್ಟಿನಲ್ಲಿ ಯಾರಿಗೆ ಟಿಕೆಟ್​ ಸಿಗಲಿದೆ, ಯಾರಿಗೆ ಕೈ ತಪ್ಪಲಿದೆ ಕಾದು ನೋಡಬೇಕು.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:38 am, Sat, 4 February 23

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್