ಉತ್ತರ ಕನ್ನಡ: ಇಐಡಿ ಸಕ್ಕರೆ ಕಾರ್ಖಾನೆ ವಿರುದ್ದ 65 ಸಾವಿರ ಟನ್ ಕಬ್ಬನ್ನ ಲೂಟಿ ಮಾಡಿದ ಆರೋಪ; ಲೋಕಾಯುಕ್ತರಿಗೆ ದೂರು ನೀಡಿದ ರೈತರು

ರೈತರ ಬಾಳಿಗೆ ಸಹಕಾರಿಯಾಗಬೇಕಾದ ಕಾರ್ಖಾನೆಯಿಂದ ರೈತರಿಗೆ ಗೊತ್ತಿಲ್ಲದ ಹಾಗೆ ಬೆಳೆಯ ತೂಕದಲ್ಲಿ ಮೋಸ ಮಾಡಿ ಲೂಟಿ ಮಾಡಿದ್ದಾರೆ. ಇದರಿಂದ ರೊಚ್ಚಿಗೆದ್ದ ರೈತರು ಕಾರ್ಖಾನೆ ವಿರುದ್ದ ತಮಗೆ ನ್ಯಾಯ ಕೊಡಿಸುವಂತೆ ಲೋಕಾಯುಕ್ತರ ಮೊರೆ ಹೋಗಿದ್ದಾರೆ.

ಉತ್ತರ ಕನ್ನಡ: ಇಐಡಿ ಸಕ್ಕರೆ ಕಾರ್ಖಾನೆ ವಿರುದ್ದ 65 ಸಾವಿರ ಟನ್ ಕಬ್ಬನ್ನ ಲೂಟಿ ಮಾಡಿದ ಆರೋಪ; ಲೋಕಾಯುಕ್ತರಿಗೆ ದೂರು ನೀಡಿದ ರೈತರು
ರೈತರ ಹೋರಾಟ
Follow us
TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 04, 2023 | 7:43 AM

ಉತ್ತರ ಕನ್ನಡ: ಜಿಲ್ಲೆಯ ಹಳಿಯಾಳದ ಇಐಡಿ ಸಕ್ಕರೆ ಕಾರ್ಖಾನೆ(EID sugar factory )ಒಂದಲ್ಲ ಒಂದು ರೀತಿ ಸುದ್ದಿಯಲ್ಲಿ ಇದ್ದೆ ಇರುತ್ತದೆ. ಒಂದು ಸಾರಿ ರೈತರಿಗೆ ಭಾಕಿ ಮೊತ್ತ ಪಾವತಿ ಮಾಡಿಲ್ಲ ಅಂತಾದ್ರೆ, ಮತ್ತೊಮ್ಮೆ ಕಬ್ಬಿನ ಬೆಳೆಗೆ ಸೂಕ್ತ ಬೆಲೆ ನಿಗದಿ ಮಾಡಿಲ್ಲ ಅಂತಾ. ಹೀಗೆ ಹಲವು ರೀತಿಯಲ್ಲಿ ಸಕ್ಕರೆ ಕಾರ್ಖಾನೆ ವಿರುದ್ದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಈಗ ಈ ಸಕ್ಕರೆ ಕಾರ್ಖಾನೆ ವಿರುದ್ದ ಮತ್ತೊಂದು ಗಂಭೀರ ಆರೋಪ ಕೇಳಿ ಬಂದಿದೆ. ಇಐಡಿ ಸಕ್ಕರೆ ಕಾರ್ಖಾನೆಯು ರೈತರ ಮುಗ್ದತೆಯನ್ನ ಬಳಸಿಕೊಂಡು ಇಲ್ಲಿಗೆ ಬರುವ ಕಬ್ಬಿನ ತೂಕದಲ್ಲಿ ಭಾರೀ ಮೋಸ ಮಾಡುತ್ತಿದ್ದು, ಜೊತೆಗೆ ಪ್ರತಿ ಕ್ವಿಂಟಲ್ ಕಬ್ಬಿನಲ್ಲಿ 10 ಕೆಜಿ ತೂಕವನ್ನ ಕಡಿಮೆಗೊಳಿಸಿ ಲೂಟಿ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇನ್ನು ಈವರಗೆ ಕಾರ್ಖಾನೆಯಲ್ಲಿ ಸುಮಾರು 6.5 ಲಕ್ಷ ಕಬ್ಬನ್ನ ನೂರಿಸಲಾಗಿದೆ. ಅಂದ್ರೆ 65 ಸಾವಿರ ಟನ್ ಕಬ್ಬನ್ನ ರೈತರಿಗೆ ಗೊತ್ತಾಗದ ಹಾಗೆ ಸೂಲಿಗೆ ಮಾಡಿದ್ದಾರೆ. ಸೂಲಿಗೆ ಮಾಡಿದ ಈ ಕಬ್ಬಿನ ಅಂದಾಜು ಒಟ್ಟು ಮೊತ್ತು 20 ಕೋಟಿ ರೂ. ಹೀಗಾಗಿ ರೈತರು ಈ ಸಕ್ಕರೆ ಕಾರ್ಖಾನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಈ ಕುರಿತು ತನಿಖೆ ಮಾಡುವಂತೆ ರೈತರು ಸಕ್ಕರೆ ಆಯುಕ್ತರಿಗೆ, ಲೋಕಾಯುಕ್ತರಿಗೆ, ಜಿಲ್ಲಾಧಿಕಾರಿಗಳಿ ದೂರು ನೀಡಿದ್ದಾರೆ.

ಇನ್ನು ಈ ಸಕ್ಕರೆ ಕಾರ್ಖಾನೆಗೆ ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಹಾವೇರಿ ಭಾಗದಿಂದ ರೈತರು ಕಬ್ಬನ್ನ ತಂದು ಮಾರಾಟ ಮಾಡುತ್ತಾರೆ. ಆದರೆ ಈ ರೀತಿ ತೂಕದಲ್ಲಿ ಮೋಸ ಮಾಡುತ್ತಿರುವುದು ನಿಜಕ್ಕೂ ದುರಂತ. ಕೇವಲ ತೂಕದಲ್ಲಿ ಮಾತ್ರ ಮೋಸ ಮಾಡುತ್ತಿಲ್ಲ. ಸರಿಯಾದ ಸಮಯಕ್ಕೆ ಕಬ್ಬನ್ನ ಕಟಾವು ಮಾಡದೆ ರೈತರಿಗೆ ಮೋಸ ಮಾಡಲಾಗುತ್ತಿದೆ. ಈಗಾಗಲೇ 100% ಕಬ್ಬು ಕಟಾವು ಮಾಡಿ ಕಾರ್ಖಾನೆಗೆ ಒಯ್ಯಬೇಕಿತ್ತು. ಆದರೆ 40% ಮಾತ್ರ ಕಬ್ಬಿನ ಕಟಾವು ಮಾಡಿದ್ದಾರೆ. ಇನ್ನು 60% ಹಾಗೆ ಗದ್ದೆಯಲ್ಲಿ ಕಬ್ಬು ಒಣಗಿ ನಿಂತಿದೆ. ಜೊತೆಗೆ ಹಳಿಯಾಳವು ಹೆಚ್ಚು ಅರಣ್ಯ ಪ್ರದೇಶ ಹೊಂದಿರುವುದರಿಂದ ಕಾಡು ಪ್ರಾಣಿಗಳ ಹಾವಳಿ ಇದ್ದು ಇದರಿಂದ ಬೆಳೆ ನಾಶವಾಗುತ್ತಿದೆ. ಹೀಗೆ ಹಲವಾರು ಸಮಸ್ಯೆಯನ್ನ ಈ ಕಾರ್ಖಾನೆಯಿಂದ ರೈತರು ಅನುಭವಿಸುತ್ತಿದ್ದಾರೆ.

ಇದನ್ನೂ ಓದಿ:ಉತ್ತರ ಕನ್ನಡ: ಸರ್ಕಾರಕ್ಕೆ ಕೋಟಿಗಟ್ಟಲೆ ವಂಚಿಸಿದ ಅನಧಿಕೃತ ಪ್ರವಾಸೋದ್ಯಮ ಸಂಸ್ಥೆಗಳು; ಕೈಕಟ್ಟಿ ಕುಳಿತ ಜಿಲ್ಲಾಡಳಿತ

ಒಟ್ಟಿನಲ್ಲಿ ರೈತರಿಗೆ ಒಂದಲ್ಲ ಒಂದು ರೀತಿ ಈ ಸಕ್ಕರೆ ಕಾರ್ಖಾನೆಯಿಂದ ತೊಂದರೆಯಾಗುತ್ತಿದೆ ಎಂಬುದು ರೈತರ ಆರೋಪವಾಗಿದ್ದು, ಸಂಬಂಧಿಸಿದವರು ಸೂಕ್ತ ತನಿಖೆ ಮಾಡಿ ಸೂಲಿಗೆ ಮಾಡಿದ ಕಬ್ಬಿನ ಹಣವನ್ನ ಮರಳಿ ರೈತರಿಗೆ ನೀಡುವುದರೊಂದಿಗೆ ಮತ್ತೊಮ್ಮೆ ಈ ರೀತಿಯಾಗದಂತೆ ಎಚ್ಚರಿಕೆ ನೀಡಬೇಕು ಎನ್ನುವುದು ರೈತರ ಆಗ್ರಹವಾಗಿದೆ.

ವರದಿ: ವಿನಾಯಕ ಬಡಿಗೇರ ಟಿವಿ9 ಕಾರವಾರ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ