ತುಮಕೂರು: ಕರಡಿಯನ್ನು(Bear) ಬೇಟೆಯಾಡಿ ಮಾಂಸ ಸಂಗ್ರಹಿಸಿದ ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಗೌಜಗಲ್ ಗ್ರಾಮದಲ್ಲಿ 6 ಆರೋಪಿಗಳನ್ನು ಬಂಧಿಸಲಾಗಿದೆ. ಗೌಜಗಲ್ ಗ್ರಾಮದ ಚಿಕ್ಕಬಸವಯ್ಯನ ಮನೆಯ ಮೇಲೆ ಕೊರಟಗೆರೆ ಅರಣ್ಯಧಿಕಾರಿಗಳು (Forest department) ದಾಳಿ ನೆಡೆಸಿದ್ದಾರೆ. ಈ ವೇಳೆ ಒಂದು ಕೆಜಿ 50 ಗ್ರಾಂ ಕರಡಿಯ ಮಾಂಸ, ಕರಡಿಯ ಪಾದದ ಬೆರಳುಗಳು, ಕರಡಿಯ ಕೂದಲು ಹಾಗೂ ನಾಲಿಗೆ ಪತ್ತೆಯಾಗಿದೆ. ಸದ್ಯ ಪೊಲೀಸರು ಮಾಂಸ ಹಾಗೂ ಕೃತ್ಯಕ್ಕೆ ಬಳಸಿದ ಆಯುಧಗಳನ್ನು ವಶಪಡಿಸಿಕೊಂಡಿದ್ದಾರೆ.
ಇತ್ತೀಚೆಗೆ ಗ್ರಾಮದಿಂದ ಒಂದು ಕಿಲೋ ಮೀಟರ್ ಹೊರಗಡೆ ಕರಡಿಯನ್ನು ಕೊಂದು, ಬಳಿಕ ಅದನ್ನು ಸುಟ್ಟು ಮಾಂಸ ಸಂಗ್ರಹಿಸಿದ್ದರು. ಸದ್ಯ ಪ್ರಕರಣ ಸಂಬಂಧ ಚಿಕ್ಕಬಸಯ್ಯ, ಜಿ.ಎನ್.ಯತೀಶ್, ನಾಗರಾಜು, ಶ್ರೀಧರ್, ರಾಮಯ್ಯ, ರಾಜಣ್ಣ ಮತ್ತು ಚಿಕ್ಕಬಸವಯ್ಯ ಎಂಬುವರನ್ನು ಬಂಧಿಸಿದ್ದಾರೆ. ಈ ಆರೋಪಿಗಳು ಕರಡಿಯನ್ನು ಬೇಟೆಯಾಡಿ ಬಳಿಕ ಮಾಂಸವನ್ನು ತಿಂದಿದ್ದರು ಎಂಬುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ತುಮಕೂರಿನಲ್ಲಿ ಹಣದ ವಿಚಾರಕ್ಕೆ ಸ್ನೇಹಿತನ ಕೊಂದು ಹೂತಿದ್ದ ಆರೋಪಿ ಅರೆಸ್ಟ್!
ಹಣದ ವಿಚಾರಕ್ಕೆ ಸ್ನೇಹಿತನನ್ನು ಕೊಂದು ಹೂತು ಹಾಕಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಎಂ.ಗೊಲ್ಲಹಳ್ಳಿಯಲ್ಲಿ ಲಿಂಗಣ್ಣ(40) ಎಂಬುವವನು ತನ್ನ ಸ್ನೇಹಿತನನ್ನು ಕೊಂದು ಹೂತಿದ್ದ. ಲಿಂಗಣ್ಣ ಸ್ನೇಹಿತ ಬಸವರಾಜ್ ಬಳಿ 3.5 ಲಕ್ಷ ರೂ. ಪಡೆದಿದ್ದ. ಇದೇ ವಿಚಾರವಾಗಿ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಕೋಳಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.
ಆರೋಪಿ ಲಿಂಗಣ್ಣ ಡಿಸೆಂಬರ್ 12 ರಂದು ಕೊಲೆ ಮಾಡಿದ್ದ. 13 ರಂದು ಪತ್ನಿ ಭಾಗ್ಯಮ್ಮ ನಾಪತ್ತೆಯಾಗಿದ್ದಾರೆಂದು ದೂರು ನೀಡಿದ್ದರು. ನಾಪತ್ತೆ ಪ್ರಕರಣ ಪತ್ತೆ ಹಚ್ಚಿದ್ದಾಗ ಪ್ರಕರಣ ಬೆಳಕಿಗೆ ಬಂದಿದೆ.
ಚಾಮರಾಜನಗರ: ಸಿಲಿಂಡರ್ ಸ್ಫೋಟ, ಎರಡು ಮನೆಗಳು ಬೆಂಕಿಗಾಹುತಿ
ಎಲ್ಪಿಜಿ ಸಿಲಿಂಡರ್ ಸ್ಫೋಟಗೊಂಡು ಎರಡು ಮನೆಗಳು ಬೆಂಕಿಗಾಹುತಿಯಾಗಿವೆ. ಸತ್ತೆಗಾಲದ ಚಿಕ್ಕ ರಾವಳಯ್ಯ, ಮಂಜುಗೆ ಸೇರಿದ ಮನೆಗಳಿಗೆ ಹಾನಿಯಾಗಿದೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಎಂಬಲ್ಲಿ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸಿಲಿಂಡರ್ ಸ್ಫೋಟದ ತೀವ್ರತೆಗೆ ಮನೆಯ ಮೇಲ್ಚಾವಣಿ ಹಾರಿ ಹೋಗಿದೆ. ಕಳೆದ ರಾತ್ರಿ ಘಟನೆ ನಡೆದಿದ್ದು, ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
ಇದನ್ನೂ ಓದಿ:
ನೆಲಮಂಗಲ: ಹಣಕಾಸಿನ ವಿಚಾರಕ್ಕೆ ಬೆಟ್ಟದ ಮೇಲಿನಿಂದ ತಳ್ಳಿ ಕೊಲೆ ಮಾಡಿದ ಆರೋಪ; ಸ್ನೇಹಿತನನ್ನು ವಶಕ್ಕೆ ಪಡೆದ ಪೊಲೀಸರು
ಶಿವಮೊಗ್ಗ: ಅಕ್ರಮವಾಗಿ ಸಾಗಿಸುತ್ತಿದ್ದ 32 ಕೋಣಗಳ ರಕ್ಷಣೆ; ಮೂರು ಮಂದಿ ಹಾಗೂ ಲಾರಿ ವಶಕ್ಕೆ
Published On - 11:52 am, Sat, 18 December 21