ನೆಲಮಂಗಲ: ಹಣಕಾಸಿನ ವಿಚಾರಕ್ಕೆ ಬೆಟ್ಟದ ಮೇಲಿನಿಂದ ತಳ್ಳಿ ಕೊಲೆ ಮಾಡಿದ ಆರೋಪ; ಸ್ನೇಹಿತನನ್ನು ವಶಕ್ಕೆ ಪಡೆದ ಪೊಲೀಸರು

ಮೃತ ಮಂಜುನಾಥ್ ಕಾಣೆಯಾದ ಬಗ್ಗೆ ತುಮಕೂರು ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತು. ಪೊಲೀಸರ ವಿಚಾರಣೆ ವೇಳೆ ಘಟನೆ ಬೆಳಕಿಗೆ ಬಂದಿದೆ. ದಾಬಸ್ ಪೇಟೆ ಪೊಲೀಸರು ಸ್ನೇಹಿತ ಸಿದ್ದೇಶ್​ನನ್ನು ಸದ್ಯ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ನೆಲಮಂಗಲ: ಹಣಕಾಸಿನ ವಿಚಾರಕ್ಕೆ ಬೆಟ್ಟದ ಮೇಲಿನಿಂದ ತಳ್ಳಿ ಕೊಲೆ ಮಾಡಿದ ಆರೋಪ; ಸ್ನೇಹಿತನನ್ನು ವಶಕ್ಕೆ ಪಡೆದ ಪೊಲೀಸರು
ಮಂಜುನಾಥ್(38)
Follow us
TV9 Web
| Updated By: preethi shettigar

Updated on:Dec 11, 2021 | 1:30 PM

ಬೆಂಗಳೂರು: ಹಣಕಾಸಿನ ವಿಚಾರಕ್ಕೆ ಬೆಟ್ಟದ ಮೇಲಿನಿಂದ ಸ್ನೇಹಿತನನ್ನೇ ತಳ್ಳಿ ಕೊಲೆ ಮಾಡಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನಲ್ಲಿ ನಡೆದಿದೆ. ಪ್ರವಾಸಕ್ಕೆ ಹೋಗಿದ್ದ ವೇಳೆ ಗೆಳೆಯರ ನಡುವೆ ಗಲಾಟೆ ನಡೆದಿದೆ. ಮಲ್ಲೇನಹಳ್ಳಿ ಗ್ರಾಮದ ಮಂಜುನಾಥ್(38)ನನ್ನು ದಾಬಸ್ ಪೇಟೆ ಸಿದ್ದರ ಬೆಟ್ಟದಿಂದ ತಳ್ಳಿ ಸ್ನೇಹಿತ ಸಿದ್ದೇಶ್ ಪರಾರಿಯಾಗಿದ್ದಾನೆ. ಕೊಲೆ ಮಾಡಿದ ಬಳಿಕ ಊರಿಗೆ ಬಾರದೆ ಆರೋಪಿ ಸಿದ್ದೇಶ್ ತಲೆ ಮಾರಿಸಿಕೊಂಡಿದ್ದಾನೆ ಎಂಬ ಆರೋಪ ಸದ್ಯ ಕೇಳಿ ಬಂದಿದೆ.

ಮಂಜುನಾಥ್ ಮತ್ತು ಸಿದ್ದೇಶ್ ಇಬ್ಬರು ತುಮಕೂರಿನ ಮಲ್ಲೇನಹಳ್ಳಿ ಗ್ರಾಮದ ನಿವಾಸಿಯಾಗಿದ್ದರು. ಮಂಜುನಾಥ್ ಮನೆಯಲ್ಲಿ ಬೆಟ್ಟಕ್ಕೆ ಹೋಗುತ್ತಿದ್ದೇವೆ ಎಂದು ಹೇಳಿ ಹೋಗಿದ್ದ. 8 ದಿನದ ಹಿಂದೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಈ ಸಂಬಂಧ ಮೃತ ಮಂಜುನಾಥ್ ಪೋಷಕರು ದಾಬಸ್‌ಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮೃತ ಮಂಜುನಾಥ್ ಕಾಣೆಯಾದ ಬಗ್ಗೆ ತುಮಕೂರು ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತು. ಪೊಲೀಸರ ವಿಚಾರಣೆ ವೇಳೆ ಘಟನೆ ಬೆಳಕಿಗೆ ಬಂದಿದೆ. ದಾಬಸ್ ಪೇಟೆ ಪೊಲೀಸರು ಸ್ನೇಹಿತ ಸಿದ್ದೇಶ್​ನನ್ನು ಸದ್ಯ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಬೆಂಗಳೂರು: ಹೆಂಡತಿಯನ್ನು ಚುಡಾಯಿಸಿದ ಆರೋಪ, ವ್ಯಕ್ತಿ ಮೇಲೆ ಹಲ್ಲೆ ಹೆಂಡತಿಯನ್ನು ಚುಡಾಯಿಸಿದ ಆರೋಪ ಕೇಳಿಬಂದಿದ್ದು, ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆದಿದೆ. ವಾಸು ಎಂಬುವವರು ಸೆಕ್ಯೂರಿಟಿ ಗಾರ್ಡ್ ಯತೀಶ್ ಮೇಲೆ ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಯತೀಶ್ ಮತ್ತು ವಾಸು ಇಬ್ಬರು ದೂರು ನೀಡಿದ್ದಾರೆ. ವಾಸು ಹಲ್ಲೆ ಮಾಡಿರುವುದಾಗಿ ಯತೀಶ್ ದೂರು ನೀಡಿದ್ದು, ತನ್ನ ಹೆಂಡತಿಯನ್ನು ಚುಡಾಯಿಸಿದ್ದಾಗಿ ವಾಸು ದೂರು ನೀಡಿದ್ದಾರೆ. ಈ ಪ್ರಕರಣ ಬೆಂಗಳೂರಿನ ಕೆಂಪೇಗೌಡನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಮಧ್ಯರಾತ್ರಿ ವೇಳೆ ವಾಟ್ಸಾಪ್​ ಕರೆ ಮಾಡಿ ಅಶ್ಲೀಲ ಸಂದೇಶಗಳ ಮುಖಾಂತರ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ನಂತರ ವಾಸು ಯತೀಶ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಯತೀಶ್ ಹಲ್ಲೆ ಬಳಿಕ ನಾಪತ್ತೆಯಾಗಿದ್ದರು. ವ್ಯಕ್ತಿ ಕಾಣೆಯಾದ ಪ್ರಕರಣದ ತನಿಖೆ ಕೈಗೊಂಡಾಗ ಹಲ್ಲೆ ಹಾಗೂ ಕಿರುಕುಳ ಕೇಸ್ ಬಯಲಾಗಿದೆ. ಯತೀಶ್ ಎರಡು ದಿನ ಧರ್ಮಸ್ಥಳ, ಕುಕ್ಕೆ ದೇವಸ್ಥಾನಗಳಿಗೆ ತೆರಳಿದ್ದರು. ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದರು.

ಯತೀಶ್ ಎರಡು ದಿನ ಆದರೂ ಪತ್ತೆಯಾಗದ ಹಿನ್ನೆಲೆ ಯೋಗ ಕೇಂದ್ರದವರು ಕೆಂಪೇಗೌಡ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸದ್ಯ ಯತೀಶ್ ಪತ್ತೆಯಾಗಿದ್ದು, ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಹನ್ನೊಂದು ವರ್ಷಗಳ ಹಿಂದೆ ನಡೆದ ತ್ರಿವಳಿ ಕೊಲೆ; ಯೋಧನಿಗೆ ಜೀವಾವಧಿ ಶಿಕ್ಷೆ

ಕೌಟುಂಬಿಕ ಕಲಹ; ಬಿಜೆಪಿ ಕಾರ್ಯಕರ್ತ ಪ್ರಸನ್ನ ಕುಮಾರ್ ಕೊಲೆ ಮಾಡಿದ್ದ ಆರೋಪಿ ಬಂಧನ

Published On - 1:21 pm, Sat, 11 December 21