ಕೌಟುಂಬಿಕ ಕಲಹ; ಬಿಜೆಪಿ ಕಾರ್ಯಕರ್ತ ಪ್ರಸನ್ನ ಕುಮಾರ್ ಕೊಲೆ ಮಾಡಿದ್ದ ಆರೋಪಿ ಬಂಧನ

TV9 Digital Desk

| Edited By: Ayesha Banu

Updated on: Dec 09, 2021 | 8:44 AM

ಪ್ರಸನ್ನ ಕುಮಾರ್ ಅಣ್ಣನ ಮಗಳು ಮೌನಿಕಾಳನ್ನ ಆರೋಪಿ ರವಿಕುಮಾರ್ ಮದುವೆಯಾಗಿದ್ದ. ಮೌನಿಕಾಳನ್ನ ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಪ್ರಸನ್ನ ಅಕೆಯನ್ನು ವಾಪಸ್ ತವರು ಮನೆಗೆ ಕರೆಸಿಕೊಂಡಿದ್ದ. ಕೋರ್ಟ್ನಲ್ಲಿ ವಿಚ್ಛೇದನ ಪ್ರಕ್ರಿಯೆ ನಡೆಯುತ್ತಿತ್ತು.

ಕೌಟುಂಬಿಕ ಕಲಹ; ಬಿಜೆಪಿ ಕಾರ್ಯಕರ್ತ ಪ್ರಸನ್ನ ಕುಮಾರ್ ಕೊಲೆ ಮಾಡಿದ್ದ ಆರೋಪಿ ಬಂಧನ
ಸಾಂಕೇತಿಕ ಚಿತ್ರ

ತುಮಕೂರು: ಬಿ.ಕೆ.ಹಳ್ಳಿ ಬಳಿ ಪ್ರಸನ್ನಕುಮಾರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ರವಿಕುಮಾರ್(35) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ತಿರುಮಣಿ ಬಳಿ ಕೌಟುಂಬಿಕ ಕಲಹ ಹಿನ್ನೆಲೆ ಡಿ.7ರಂದು ಕೊಲೆ ನಡೆದಿತ್ತು. ಬಿಜೆಪಿ ಕಾರ್ಯಕರ್ತ ಪ್ರಸನ್ನ ಕುಮಾರ್ (46) ಕೊಲೆಯಾದವ. ಅಪ್ಪಾಜಿಹಳ್ಳಿ ಗ್ರಾಮದ ರವಿಕುಮಾರ್ (35) ಬಂಧಿತ ಆರೋಪಿ.

ಪ್ರಸನ್ನ ಕುಮಾರ್ ಅಣ್ಣನ ಮಗಳು ಮೌನಿಕಾಳನ್ನ ಆರೋಪಿ ರವಿಕುಮಾರ್ ಮದುವೆಯಾಗಿದ್ದ. ಮೌನಿಕಾಳನ್ನ ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಪ್ರಸನ್ನ ಅಕೆಯನ್ನು ವಾಪಸ್ ತವರು ಮನೆಗೆ ಕರೆಸಿಕೊಂಡಿದ್ದ. ಕೋರ್ಟ್ನಲ್ಲಿ ವಿಚ್ಛೇದನ ಪ್ರಕ್ರಿಯೆ ನಡೆಯುತ್ತಿತ್ತು. ಹೀಗಾಗಿ ಕೌಟುಂಬಿಕ ಕಲಹ ಹಿನ್ನೆಲೆ ಪ್ರಸನ್ನನನ್ನು ರವಿಕುಮಾರ್ ಕೊಲೆ ಮಾಡಿದ್ದ. ಪಾವಗಡಕ್ಕೆ ಹೋಗಿ ಬರುವಾಗ ಬಿಕೆ ಹಳ್ಳಿ ಬಳಿ ಕೊಚ್ಚಿ ಕೊಲೆ ಮಾಡಲಾಗಿತ್ತು. ಸದ್ಯ ತಿರುಮಣಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಟ್ರ್ಯಾಕ್ಟರ್ ಚಾಲನೆ ವೇಳೆ ಆಕಸ್ಮಿಕವಾಗಿ ಬಿದ್ದು ಚಾಲಕ ಸಾವು ಕಲಬುರಗಿ ಜಿಲ್ಲೆಯ ಅಫಜಲಪುರ ಪಟ್ಟಣದಲ್ಲಿ ದುರ್ಘಟನೆಯೊಂದು ಸಂಭವಿಸಿದೆ. ಟ್ರ್ಯಾಕ್ಟರ್‌ನಿಂದ ಕೆಳಕ್ಕೆ ಬಿದ್ದು ಚಕ್ರದಡಿ ಸಿಲುಕಿ ಚಾಲಕ ಮೃತಪಟ್ಟಿದ್ದಾನೆ. ತಾನೇ ಚಲಾಯಿಸುತ್ತಿದ್ದ ಟ್ರ್ಯಾಕ್ಟರ್ಗೆ ಸಿಲುಕಿ ಚಾಲಕ ಜೀವ ಕಳೆದುಕೊಂಡಿದ್ದಾನೆ. ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಾಟ ಮಾಡಿ ಮರಳುತ್ತಿದ್ದ ವೇಳೆ ಅಫಜಲಪುರ ಪಟ್ಟಣದಿಂದ ಕರಜಗಿ ಮಾರ್ಗವಾಗಿ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ. ಮೃತ ಚಾಲಕನ ಗುರುತು ಪತ್ತೆಯಾಗಿಲ್ಲ. ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೊಡ್ಡೇರಿ ಸರ್ಕಾರಿ ಶಾಲೆ ಬಳಿ 280 ಗ್ರಾಂ ಒಣ ಗಾಂಜಾ ಜಪ್ತಿ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ದೊಡ್ಡೇರಿ ಗ್ರಾಮದ ಸರ್ಕಾರಿ ಶಾಲೆ ಬಳಿ ಗಾಂಜಾ ಮಾರುತ್ತಿದ್ದಾಗ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದ್ದು ಮಧುಗಿರಿ ಅಬಕಾರಿ ಇಲಾಖೆ ಅಧಿಕಾರಿಗಳು 280 ಗ್ರಾಂ ಒಣ ಗಾಂಜಾ ವಶಕ್ಕೆ ಪಡೆದಿದ್ದಾರೆ. ಗಾಂಜಾ ಮಾರುತ್ತಿದ್ದ ಅಮರ್ ವಿರುದ್ಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ನೋಟ್ಸ್ ನೀಡಲು ಮನೆಗೆ ಬಂದಿದ್ದ ಬಾಲಕಿ ಮೇಲೆ ಎರಗಿದ ಕಾಮುಕ, ಪೋಕ್ಸೋ ಕಾಯ್ದೆಯಡಿ ಆರೋಪಿ ಬಂಧನ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada