ಹಾಸ್ಟೆಲ್​ನ ಕುಡಿಯುವ ನೀರಿಗೆ ವಿಷ ಹಾಕಲು ಯತ್ನಿಸಿದ ಪ್ರಕರಣ; ಅಪರಾಧಿಗೆ 7 ವರ್ಷ ಜೈಲು, 10 ಸಾವಿರ ರೂ. ದಂಡ

| Updated By: preethi shettigar

Updated on: Dec 21, 2021 | 12:51 PM

ಗ್ರಾಮದ ಶ್ರೀನಿವಾಸ್, ಹಾಸ್ಟೆಲ್ ಬಳಿ ಹೂ ಕೀಳಲು ಹೋಗುತ್ತಿದ್ದ ಇದನ್ನು ಹಾಸ್ಟೆಲ್ ಅಡುಗೆ ಭಟ್ಟರಾದ ಕರಿಯಮ್ಮ ಪ್ರಶ್ನೆ ಮಾಡಿದ್ದು, ಹೂ ಕೀಳಬೇಡಿ ಎಂದು ಬೈದಿದ್ದರು. ಹೀಗಾಗಿ ಕೋಪಗೊಂಡ ಶ್ರೀನಿವಾಸ್​, ನೀರಿಗೆ ವಿಷ ಹಾಕಿಸಿ ಕರಿಯಮ್ಮಳಿಗೆ ಕೆಟ್ಟ ಹೆಸರು ತರಿಸಿಬೇಕೆಂದು ನಿರ್ಧರಿಸಿದ್ದ.

ಹಾಸ್ಟೆಲ್​ನ ಕುಡಿಯುವ ನೀರಿಗೆ ವಿಷ ಹಾಕಲು ಯತ್ನಿಸಿದ ಪ್ರಕರಣ; ಅಪರಾಧಿಗೆ 7 ವರ್ಷ ಜೈಲು, 10 ಸಾವಿರ ರೂ. ದಂಡ
ಸಾಂದರ್ಭಿಕ ಚಿತ್ರ
Follow us on

ತುಮಕೂರು: 2018ರಲ್ಲಿ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಗುರುವಾಪುರದಲ್ಲಿ ಹಾಸ್ಟೆಲ್‌ನ (Hostel) ಕುಡಿಯುವ ನೀರಿಗೆ ವಿಷ ಹಾಕಲು ಯತ್ನಿಸಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಪರಾಧಿಗೆ 7 ವರ್ಷ ಜೈಲು, 10 ಸಾವಿರ ರೂ. ದಂಡ ವಿಧಿಸಲಾಗಿದೆ. ತಿಪಟೂರಿನ 5ನೇ ಅಧಿಕ ಜಿಲ್ಲಾ ಮತ್ತು ಸತ್ರ ಕೋರ್ಟ್ ನ್ಯಾಯಾಧೀಶ ಬಿ.ಶಿವಕುಮಾರ್‌ ಈ ಕುರಿತು ಆದೇಶ ಹೊರಡಿಸಿದ್ದಾರೆ.

ಪ್ರಕರಣದ ಹಿನ್ನೆಲೆ ಏನು?
ಗ್ರಾಮದ ಶ್ರೀನಿವಾಸ್, ಹಾಸ್ಟೆಲ್ ಬಳಿ ಹೂ ಕೀಳಲು ಹೋಗುತ್ತಿದ್ದ ಇದನ್ನು ಹಾಸ್ಟೆಲ್ ಅಡುಗೆ ಭಟ್ಟರಾದ ಕರಿಯಮ್ಮ ಪ್ರಶ್ನೆ ಮಾಡಿದ್ದು, ಹೂ ಕೀಳಬೇಡಿ ಎಂದು ಬೈದಿದ್ದರು. ಹೀಗಾಗಿ ಕೋಪಗೊಂಡ ಶ್ರೀನಿವಾಸ್​, ನೀರಿಗೆ ವಿಷ ಹಾಕಿಸಿ ಕರಿಯಮ್ಮಳಿಗೆ ಕೆಟ್ಟ ಹೆಸರು ತರಿಸಿಬೇಕೆಂದು ನಿರ್ಧರಿಸಿದ್ದ. ಕರಿಯಮ್ಮಳನ್ನು ಕೆಲಸದಿಂದ ತೆಗೆಸಬೇಕೆಂದು ವಿದ್ಯಾರ್ಥಿ ಮೂಲಕ ವಿಷಬಾಟಲ್ ನೀಡಿ ನೀರಿಗೆ ವಿಷ ಹಾಕಲು ಯತ್ನಿಸಿದ್ದ. ಈ ಸಂಬಂಧ ಹುಳಿಯಾರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಗುರುವಾಪುರದ ಸರ್ಕಾರಿ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಈ ಘಟನೆ ನಡೆದಿತ್ತು. ಸದ್ಯ ಆರೋಪ ಸಾಭಿತಾದ ಹಿನ್ನೆಲೆ ಶಿಕ್ಷೆ ವಿಧಿಸಿ ಕೋರ್ಟ್ ಆದೇಶ ನೀಡಿದೆ. ಹುಳಿಯಾರು ಪಿಎಸ್​ಐ ಕೆಸಿ ಜಯಕುಮಾರ್ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಪ್ರಧಾನ ಅಭಿಯೋಜಕ ಹನುಮಂತರಾಯ ತಳಕೇರಿ, ಮಹಾದೇವ ಈರಪ್ಪನವರು ವಾದ ಮಂಡಿಸಿದ್ದರು.

ಯಾದಗಿರಿ: ಟ್ರಾಕ್ಟರ್ ಪಲ್ಟಿ; ಕಾರ್ಮಿಕರಿಬ್ಬರು ಸ್ಥಳದಲ್ಲೇ ಸಾವು
ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ನಾಯ್ಕಲ್ ಗ್ರಾಮದಲ್ಲಿ ಟ್ರಾಕ್ಟರ್ ಪಲ್ಟಿಯಾಗಿದ್ದು, ಕಾರ್ಮಿಕರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕೂಲಿ‌ ಕೆಲಸ ಮುಗಿಸಿಕೊಂಡು ವಾಪಸ್ ಬರುವ ವೇಳೆ ಈ ದುರಂತ ನಡೆದಿದೆ. ನಾಯ್ಕಲ್ ಗ್ರಾಮದ ಪರ್ವೀನ್ ಹಾಗೂ ಮಾನಮ್ಮ ಮೃತ ದುರ್ದೈವಿಗಳು. ಟ್ರಾಕ್ಟರ್​ನಲ್ಲಿದ್ದ ಇನ್ನು 13 ಜನರಿಗೆ ಸಣ್ಣಪುಟ್ಟ ಗಾಯಗಲಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.

ಘಟನೆ ಬಳಿಕ ಟ್ರಾಕ್ಟರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾರೆ. ಸದ್ಯ ಜಿಲ್ಲಾಸ್ಪತ್ರೆಗೆ ಯಾದಗಿರಿ ಡಿಸಿ ರಾಗಪ್ರಿಯಾ ಭೇಟಿ ನೀಡಿದ್ದು, ಗಾಯಾಳುಗಳ ಆರೋಗ್ಯ ವಿಚಾರಣೆ ನಡೆಸಿದ್ದಾರೆ. ವಡಗೇರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:
ಕೋಲಾರ: ವಿಷಪೂರಿತ ನೀರು ಕುಡಿದವರಲ್ಲಿ ಕಾಡುತ್ತಿದೆ ಪ್ಲೋರೋಸಿಸ್ ಕಾಯಿಲೆ; 270 ಗ್ರಾಮಗಳಲ್ಲಿ ಇನ್ನೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ

ಮುದ್ದೆಯಲ್ಲಿ ಕ್ರಿಮಿನಾಶಕ- FSLನಿಂದ ವರದಿ ಬಹಿರಂಗ; ಮಗಳೇ ಆಹಾರದಲ್ಲಿ ವಿಷವಿಟ್ಟು ನಾಲ್ವರನ್ನ ಕೊಂದ ಆರೋಪ

Published On - 12:38 pm, Tue, 21 December 21