ತುಮಕೂರಿನಲ್ಲಿ ಹಿಂದೂಗಳ ಮತಾಂತರಕ್ಕೆ ಸಂಚು: ಭಗವದ್ಗೀತೆ ಹೋಲುವ ಪುಸ್ತಕದಲ್ಲಿ ಹಿಂದೂ ದೇವತೆಗಳ ಅವಹೇಳನ
ಈ ಪುಸ್ತಕದಲ್ಲಿ ಹಿಂದೂ ದೇವತೆಗಳ ಬಗ್ಗೆ ಅವಹೇಳನಕಾರಿಯಾಗಿ ಬಿಂಬಿಸಲಾಗಿದೆ. ತುಮಕೂರಿನ ಕೋಟೆ ಆಂಜನೇಯ ದೇವಸ್ಥಾನ ಹಾಗೂ ಕೋರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾಜಾರೋಷವಾಗಿ ಪುಸ್ತಕಗಳನ್ನು ಜನರಿಗೆ ಹಂಚಲಾಗುತ್ತಿದೆ.
ತುಮಕೂರು: ಕಲ್ಪತರು ನಾಡಲ್ಲಿ ಸದ್ದಿಲ್ಲದೇ ಹಿಂದೂಗಳ ಮತಾಂತರ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಭಗವದ್ಗೀತೆ ಪುಸ್ತಕ ಹಂಚಿಕೆ ನೆಪದಲ್ಲಿ ಮತಾಂತರ ಮಾಡಲು ಹುನ್ನಾರ ನಡೆದಿದೆ ಎನ್ನಲಾಗುತ್ತಿದೆ. ತುಮಕೂರು ಜಿಲ್ಲೆಯ ಹಲವು ಕಡೆ ಹಿಂದೂಗಳ ಪವಿತ್ರ ಗ್ರಂಥ ಭಗವದ್ಗೀತೆ ಪುಸ್ತಕ ಹೋಲುವ ಪುಸ್ತಕಗಳ ಮಾರಾಟ, ಹಂಚಿಕೆ ಮಾಡಿ ಮತಾಂತರ ಮಾಡಲಾಗುತ್ತಿದೆ.
ತುಮಕೂರಿನಲ್ಲಿ ಭಗವದ್ಗೀತೆ ಪುಸ್ತಕ ಹೋಲುವ ಗೀತೆಯೇ ನಿನ್ನ ಜ್ಞಾನ ಅಮೃತ ಎಂಬ ಪುಸ್ತಕಗಳ ಮಾರಾಟ ಹೆಚ್ಚಾಗಿದೆ. 98 ರೂಪಾಯಿ ದರದ ಪುಸ್ತಕವನ್ನು ಕೇವಲ 30ರೂಗೆ ಮಾರಾಟ ಮಾಡಲಾಗುತ್ತಿದೆ. ಅಲ್ಲದೆ ಕೆಲವು ಕಡೆ ಉಚಿತವಾಗಿ ಪುಸ್ತಕ ಕೊಟ್ಟು ಮತಾಂತರಕ್ಕೆ ಸಂಚು ಮಾಡಲಾಗುತ್ತಿದೆ. ಇನ್ನು ಈ ಪುಸ್ತಕದಲ್ಲಿ ಹಿಂದೂ ದೇವತೆಗಳ ಬಗ್ಗೆ ಅವಹೇಳನಕಾರಿಯಾಗಿ ಬಿಂಬಿಸಲಾಗಿದೆ. ತುಮಕೂರಿನ ಕೋಟೆ ಆಂಜನೇಯ ದೇವಸ್ಥಾನ ಹಾಗೂ ಕೋರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾಜಾರೋಷವಾಗಿ ಪುಸ್ತಕಗಳನ್ನು ಜನರಿಗೆ ಹಂಚಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ: ಬೆಂಗಳೂರು- ದೆಹಲಿ ವಿಮಾನದಲ್ಲಿ ಬೆಂಕಿಯ ವಿಡಿಯೋ ವೈರಲ್; ವರದಿ ಕೇಳಿದ ವಿಮಾನಯಾನ ಸಚಿವಾಲಯ
ಗೀತೆಯೇ ನಿನ್ನ ಜ್ಞಾನ ಅಮೃತ, ಎಂಬ ಪುಸ್ತಕದಲ್ಲಿ ಹಿಂದೂ ಧರ್ಮದ ಬಗ್ಗೆ ಹಾಗೂ ದೇವರುಗಳ ಬಗ್ಗೆ ಅವಹೇಳನಕಾರಿ ಬರಹವಿದೆ. ಹಿಂದೂ ಧರ್ಮದ ಬಗ್ಗೆ ಜನರಿಗೆ ಕೆಟ್ಟ ಮನಸ್ಥಿತಿ ಬರುವಂತೆ ಬರಹ ಬರೆದು ಪುಸ್ತಕ ಹಂಚಿಕೆ ಮಾಡಿದ್ದಾರೆ. ಹೊರರಾಜ್ಯದಿಂದ ತುಮಕೂರು ನಗರಕ್ಕೆ ಬಂದು ಪುಸ್ತಕಗಳ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಸಿಕ್ಕಿದೆ. ಪುಸ್ತಕಗಳು ನವದೆಹಲಿಯ ಕಬೀರ್ ಪ್ರಿಂಟರ್ಸ್ ಮುದ್ರಣಾಲಯದಿಂದ ಮುದ್ರಿತಾವಾಗಿರುವ ಪುಸ್ತಕಗಳಾಗಿವೆ. ಹಿಂದೂಗಳು ಇರುವ ಏರಿಯಾಗಳಿಗೆ ಹೋಗಿ ಇಡೀ ತುಮಕೂರಿನಲ್ಲಿ ಪುಸ್ತಕಗಳ ಹಂಚಿಕೆಯಾಗುತ್ತಿದೆ. ಸದ್ಯ ಈ ಬಗ್ಗೆ ಭಜರಂಗದಳ ಕಾರ್ಯಕರ್ತರು ಪುಸ್ತಕ ಮಾರಾಟ ಮಾಡ್ತಿದ್ದವರ ವಿರುದ್ಧ ದೂರು ದಾಖಲಿಸಿದ್ದಾರೆ.
ತುಮಕೂರು ನಗರ ಹಾಗೂ ಕೋರಾ ಪೊಲೀಸ್ ಠಾಣೆ ಸೇರಿದಂತೆ ತುಮಕೂರಿನ ಎರಡು ಠಾಣೆಗಳಲ್ಲಿ ಈ ಸಂಬಂಧ ದೂರು ದಾಖಲಾಗಿದೆ. ಹಾಗೂ ಭಜರಂಗದಳದ ಕಾರ್ಯಕರ್ತರು ತುಮಕೂರು ಎಸ್ಪಿಗೆ ದೂರು ನೀಡಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಪುಸ್ತಕಗಳನ್ನ ಮಾರಾಟ ಮಾಡದಂತೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.