ಕಳಪೆ ಕಾಮಗಾರಿ ಪ್ರಶ್ನಿಸಿದ ಸಾರ್ವಜನಿಕರಿಗೆ ಏಕವಚನದಲ್ಲಿ ನಿಂದನೆ: ಇಂಜಿನಿಯರ್ ಅಮಾನತ್ತು
1.80 ಕೋಟಿ ವೆಚ್ಚದಲ್ಲಿ ಐಡಿಹಳ್ಳಿ ಗ್ರಾಮದಿಂದ ಜನಕಲೋಟಿ ಗ್ರಾಮದವರೆಗೂ 6 km ಉದ್ದ ರಸ್ತೆ ಕಾಮಗಾರಿ ಮಾಡಲಾಗಿತ್ತು. ನಿರ್ಮಾಣ ಮಾಡಿ ಒಂದೇ ವರ್ಷದಲ್ಲಿ ಡಾಂಬರ್ ಕಿತ್ತು ಗುಂಡಿಗಳು ಬಿದ್ದಿವೆ.
ತುಮಕೂರು: ಕಳಪೆ ಕಾಮಗಾರಿ ಪ್ರಶ್ನಿಸಿದ ಸಾರ್ವಜನಿಕರನ್ನು ನಿಂದಿಸಿದ ಮಧುಗಿರಿ ತಾಲ್ಲೂಕು ಲೋಕೋಪಯೋಗಿ ಇಲಾಖೆ ಸಹಾಯಕ ಇಂಜಿನಿಯರ್ (Engineer) ನನ್ನು ಅಮಾನತ್ತು ಮಾಡಿ ಲೋಕೋಪಯೋಗಿ ಇಲಾಖೆಯ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದೆ. ದೀಪಕ್ ಯಾದವ್ ಸಾರ್ವಜನಿಕರ ಮೇಲೆ ದರ್ಪ ತೋರಿದ ಇಂಜಿನಿಯರ್. ರಮಣ್ ಕಂಪನಿ 1.80 ಕೋಟಿ ವೆಚ್ಚದಲ್ಲಿ ಐಡಿಹಳ್ಳಿ ಗ್ರಾಮದಿಂದ ಜನಕಲೋಟಿ ಗ್ರಾಮದವರೆಗೂ 6 km ಉದ್ದ ರಸ್ತೆ ಕಾಮಗಾರಿ ಮಾಡಲಾಗಿತ್ತು. ಎರಡು ವರ್ಷದ ಹಿಂದೆ ರಸ್ತೆ ನಿರ್ಮಾಣ ಮಾಡಲಾಗಿದ್ದು, ನಿರ್ಮಾಣ ಮಾಡಿ ಒಂದೇ ವರ್ಷದಲ್ಲಿ ಡಾಂಬರ್ ಕಿತ್ತು ಗುಂಡಿಗಳು ಸೃಷ್ಟಿಯಾಗಿತ್ತು. ಈ ಹಿನ್ನೆಲೆ ಎಇಇ ರಾಜಗೋಪಾಲ್ ಹಾಗೂ ಎಇ ದೀಪಕ್ ಯಾದವ್ ಕಾಮಗಾರಿ ಗುಣಮಟ್ಟ ಪರಿಶೀಲನೆಗೆ ಭೇಟಿ ನೀಡಿದ್ದರು. ಪರಿಶೀಲನೆ ವೇಳೆ ಸಾರ್ವಜನಿಕರು ಕಾಮಗಾರಿ ಬಗ್ಗೆ ಮಾಹಿತಿ ನೀಡಿದ್ದು, ಜನರ ಮಾಹಿತಿಯನ್ನು ಅಲ್ಲಗಳೆದು ಸಾರ್ವಜನಿಕರನ್ನೇ ಎಇ ದೀಪಕ್ ನಿಂದಿಸಿದ್ದಾನೆ. ನಾನು ಪಿಡಬ್ಲ್ಯೂಡಿ ಎಇ ಏನ್ಮಾಡ್ತಿಯೋ ಮಾಡಿಕೋ ಎಂದು ಏಕವಚನದಲ್ಲಿ ಹಿರಿಯ ಅಧಿಕಾರಿಗಳು ಎಇಇ ರಾಜಗೋಪಾಲ್ ಎದುರು ಗ್ರಾಮಸ್ಥರಿಗೆ ಅವಾಜ್ ಹಾಕಿದ್ದಾನೆ. ದೀಪಕ್ ಯಾದವ್ ವರ್ತನೆ ಖಂಡಿಸಿ ಗ್ರಾಮಸ್ಥರು ಕಾರನ್ನು ತಡೆದಿದ್ದಾರೆ. ಇಂಜಿನಿಯರ್ ಮೇಲೆ ಇಲಾಖೆ ವಿಚಾರಣೆ ನಡೆಸುವಂತೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ: ದೇವನಹಳ್ಳಿಯಲ್ಲಿ ರೈತರು ತಾವು ಬೆಳೆದ ಹೂವನ್ನು ರಸ್ತೆಗೆ ಚೆಲ್ಲಿ ಪ್ರತಿಭಟನೆ ನಡೆಸಿದರು
ಅಕ್ರಮವಾಗಿ ಟೋಲ್ ಸುಂಕ ಸಂಗ್ರಹ
ನೆಲಮಂಗಲ: 19ವರ್ಷದ ಕಾಂಟ್ರಾಕ್ಟ್ ಅವಧಿ ಮುಗಿದಿದ್ದರೂ ಅಕ್ರಮವಾಗಿ ಟೋಲ್ ಸುಂಕ ಸಂಗ್ರಹ ಮಾಡುತ್ತಿದ್ದ, NHAI ವಿರುದ್ಧ ಸಂಘಟನೆಗಳ ಬೃಹತ್ ಹೋರಾಟ ಮಾಡಲಾಗಿದೆ. ಮಾಜಿ ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್ ನೇತೃತ್ವದಲ್ಲಿ ಹೆದ್ದಾರಿ ತಡೆಯಲಾಗಿದ್ದು, ಹೆದ್ದಾರಿ ತಡೆ ಹಿನ್ನೆಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಅಹಿತಕರ ಘಟನೆಗಳು ನಡೆಯದಂತೆ ನೆಲಮಂಗಲ ಪೊಲೀಸರು ಸ್ಥಳದಲ್ಲಿದ್ದಾರೆ. ಪ್ರಧಾನಿ ಮೋದಿ ಹಾಗೂ ನಿತಿನ್ ಗಡ್ಕರಿ ವಿರುದ್ಧ ಧಿಕ್ಕಾರ ಕೂಗಲಾಗಿದೆ. ವಕೀಲ ಜಗದೀಶ್ ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:51 pm, Fri, 17 June 22