ಕಲ್ಪತರು ನಾಡಿನಲ್ಲಿ ಸಿದ್ಧಗಂಗಾ ಮಠದ ಜಾತ್ರೆ ಸಂಭ್ರಮ; ತರಹೇವಾರಿಯ 34 ಸಾವಿರ ತಂಬಿಟ್ಟು ತಯಾರಿ, ರಥೋತ್ಸವಕ್ಕೆ ಸಿದ್ಧತೆ

ಫೆಬ್ರವರಿ 23 ರಿಂದ ಮಾರ್ಚ್ 4ರ ವರೆಗೂ ಸಿದ್ಧಗಂಗಾ ಮಠದಲ್ಲಿ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಮಾರ್ಚ್ 1 ರಂದು ನಡೆಯಲಿರುವ ಶಿವರಾತ್ರಿ ಮಹೋತ್ಸವಕ್ಕಾಗಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಳೆದ 10 ದಿನಗಳಿಂದಲೂ ಮಠದ ಅಡುಗೆ ಭಟ್ಟರು, ಶ್ರೀ ಮಠದಲ್ಲಿನ ಮಕ್ಕಳು ಹಾಗೂ ಸಿಬ್ಬಂದಿ ಸೇರಿ ಇಷ್ಟು ಬೃಹತ್ ಪ್ರಮಾಣದಲ್ಲಿ ತಂಬಿಟ್ಟು ತಯಾರಿಸಿದ್ದಾರೆ.

ಕಲ್ಪತರು ನಾಡಿನಲ್ಲಿ ಸಿದ್ಧಗಂಗಾ ಮಠದ ಜಾತ್ರೆ ಸಂಭ್ರಮ; ತರಹೇವಾರಿಯ 34 ಸಾವಿರ ತಂಬಿಟ್ಟು ತಯಾರಿ, ರಥೋತ್ಸವಕ್ಕೆ ಸಿದ್ಧತೆ
ಸಿದ್ಧಗಂಗಾ ಮಠ
Updated By: ಆಯೇಷಾ ಬಾನು

Updated on: Feb 28, 2022 | 7:38 AM

ತುಮಕೂರು: ದಸರಾ ಎಂದರೆ ಮೈಸೂರಿಗೆ(Mysuru Dasara) ಹೇಗೆ ಒಂದು ಭೂಷಣವೂ ಹಾಗೇ ಕಲ್ಪತರು ನಾಡಿಗೆ ಸಿದ್ಧಗಂಗಾ ಮಠದಲ್ಲಿ(Siddaganga Mutt Jatre) ನಡೆಯುವ ಜಾತ್ರೆ ಫೇಮಸ್. ಅದರಲ್ಲೂ ಮಠದ ಪ್ರಸಾದ ಇನ್ನೂ ವಿಶೇಷ. ಈ ಬಾರಿ ಜಾತ್ರೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗ್ತಿದೆ. ತುಮಕೂರಿನಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಮಕ್ಕಳಲ್ಲಿ ಅದೇನೋ ಹೊಸ ಸಡಗರ.. ಪ್ರಸಾದ ಸೇವಿಸಿ ಧನ್ಯರಾದ ಭಕ್ತರು.. ಹೌದು, ತುಮಕೂರಿನ ಸಿದ್ದಗಂಗಾ ಮಠದಲ್ಲಿ ಜಾತ್ರೋತ್ಸವ ನಡೆದಿದೆ. ಕೊರೊನಾ ಹಿನ್ನೆಲೆ ಕಳೆಗುಂದಿದ್ದ ಜಾತ್ರೆಯನ್ನು ಈ ವರ್ಷ ಅದ್ಧೂರಿಯಾಗಿ ಆಯೋಜಿಸಲಾಗಿದೆ. ಶಿವರಾತ್ರಿ ಅಂಗವಾಗಿ ಪ್ರತಿ ಬಾರಿಯಂತೆ ಈ ಬಾರಿ ತಂಬಿಟ್ಟು ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ವಿಶೇಷ ಅಂದ್ರೆ ಈ ಬಾರಿ ಕಡ್ಲೆ, ಶೇಂಗಾ, ಅಕ್ಕಿ, ಎಳ್ಳು, ಕೊಬ್ಬರಿ ಮತ್ತು ಏಲಕ್ಕಿಯಂತಹ ತರಹೇವಾರಿಯ 34 ಸಾವಿರ ತಂಬಿಟ್ಟು ತಯಾರಿಸಲಾಗಿದೆ.

ಫೆಬ್ರವರಿ 23 ರಿಂದ ಮಾರ್ಚ್ 4ರ ವರೆಗೂ ಸಿದ್ಧಗಂಗಾ ಮಠದಲ್ಲಿ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಮಾರ್ಚ್ 1 ರಂದು ನಡೆಯಲಿರುವ ಶಿವರಾತ್ರಿ ಮಹೋತ್ಸವಕ್ಕಾಗಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಳೆದ 10 ದಿನಗಳಿಂದಲೂ ಮಠದ ಅಡುಗೆ ಭಟ್ಟರು, ಶ್ರೀ ಮಠದಲ್ಲಿನ ಮಕ್ಕಳು ಹಾಗೂ ಸಿಬ್ಬಂದಿ ಸೇರಿ ಇಷ್ಟು ಬೃಹತ್ ಪ್ರಮಾಣದಲ್ಲಿ ತಂಬಿಟ್ಟು ತಯಾರಿಸಿದ್ದಾರೆ. ಈಗಾಗಲೇ ದನಗಳ ಜಾತ್ರೋತ್ಸವ ಹಾಗೂ ಕೃಷಿ ವಸ್ತು ಪ್ರದರ್ಶನ ನಡೆದಿದೆ. ಶಿವರಾತ್ರಿ ಮಾರನೇ ದಿನ ಅಂದ್ರೆ ಬುಧವಾರ ರಥೋತ್ಸವ ನಡೆಯಲಿದ್ದು ಭಾರಿ ಜನ ಆಗಮಿಸುವ ನಿರೀಕ್ಷೆ ಇದೆ. ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಜಾತ್ರೆಗೆ ಆಗಮಿಸಿ ಮೆರಗು ತಂದಿದ್ದಾರೆ.

ವರದಿ: ಮಹೇಶ್, ಟಿವಿ9, ತುಮಕೂರು

ಸಿದ್ಧಗಂಗಾ ಮಠದ ಜಾತ್ರೆ ಸಂಭ್ರಮ

ಇದನ್ನೂ ಓದಿ: ನೇರಳೆ ಹಣ್ಣಿನ ವಿನೆಗರ್ ಸೇವಿಸಿದ್ದೀರಾ? ಇದರಲ್ಲಿನ ಆರೋಗ್ಯಯುತ ಪ್ರಯೋಜನಗಳ ಬಗ್ಗೆ ನೀವು ತಿಳಿಯಲೇಬೇಕು

Ukraine Crisis: ಉಕ್ರೇನ್ ನಿರ್ಮಿತ ವಿಶ್ವದ ಬೃಹತ್​ ಸರಕು ಸಾಗಣೆ ವಿಮಾನ ಸುಟ್ಟು ಭಸ್ಮ

Published On - 7:36 am, Mon, 28 February 22