Sign In

By signing in or creating an account, you agree with Associated Broadcasting Company's Terms & Conditions and Privacy Policy.

ತುಮಕೂರಿನಲ್ಲೂ ಇದೆ ರಾಮ ಸಂಚರಿಸಿರುವ ಕುರುಹು: ನಾಮದ ಚಿಲುಮೆ ಹೇಳುತ್ತಿದೆ ಅಯೋಧ್ಯಾಪತಿ ಬಂದು ಹೋಗಿರುವ ಕಥೆ

ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರ ತುಮಕೂರು ಜಿಲ್ಲೆಯಲ್ಲೂ ಸಂಚರಿಸಿದ್ದಾನೆ ಎಂಬ ಕುರುಹು ಈಗ ಪತ್ತೆಯಾಗಿದೆ. ತುಮಕೂರು ಜಿಲ್ಲೆಯಲ್ಲಿರುವ ದೇವರಾಯನ ದುರ್ಗ ಬೆಟ್ಟದಲ್ಲಿರುವ ನಾಮದ ಚಿಲುಮೆಗೂ ಶ್ರೀರಾಮನಿಗು ನಂಟಿದೆ.

ತುಮಕೂರಿನಲ್ಲೂ ಇದೆ ರಾಮ ಸಂಚರಿಸಿರುವ ಕುರುಹು: ನಾಮದ ಚಿಲುಮೆ ಹೇಳುತ್ತಿದೆ ಅಯೋಧ್ಯಾಪತಿ ಬಂದು ಹೋಗಿರುವ ಕಥೆ
ನಾಮದ ಚಿಲುಮೆ
Follow us
ಮಹೇಶ್ ಇ, ಭೂಮನಹಳ್ಳಿ
| Updated By: ವಿವೇಕ ಬಿರಾದಾರ

Updated on: Jan 02, 2024 | 1:05 PM

ತುಮಕೂರು, ಜನವರಿ 02: ಅಯೋಧ್ಯೆಯಲ್ಲಿ (Ayodhya) ನಿರ್ಮಾಣವಾಗಿರು ಶ್ರೀರಾಮ (Shri Rama) ಮಂದಿರ ಲೋಕಾರ್ಪಣೆಗೆ ದಿನಗಣನೆ ಆರಂಭವಾಗಿದೆ. ಜನವರಿ 22 ರಂದು ಮಂದಿರದಲ್ಲಿ ಪ್ರಭು ಶ್ರೀರಾಮಚಂದ್ರನ ಮಂದಿರ ಉದ್ಘಾಟನೆಯಾಗಲಿದ್ದು, ಅಂದೇ ರಾಮನ ಬಾಲ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಈ ಕ್ಷಣವನ್ನು ಕಣ್ತುಂಬಿಕೊಳ್ಳಲು ದೇಶವಾಸಿಗಳು ಕಾತುರರಾಗಿದ್ದಾರೆ. ಮಂದಿರ ಉದ್ಘಾಟನೆಗೂ ಮುನ್ನ ರಾಮನಿಗೂ ಮತ್ತು ಕರ್ನಾಟಕಕ್ಕೂ ಇರುವ ನಂಟಿನ ಕುರಿತಾದ ಅನೇಕ ಸಂಗತಿಗಳು ಬೆಳಕಿಗೆ ಬರುತ್ತಿವೆ. ಹೌದು ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರ ತುಮಕೂರು (Tumakuru) ಜಿಲ್ಲೆಯಲ್ಲೂ ಸಂಚರಿಸಿದ್ದಾನೆ ಎಂಬ ಕುರುಹು ಈಗ ಪತ್ತೆಯಾಗಿದೆ.

ತುಮಕೂರು ಜಿಲ್ಲೆಯಲ್ಲಿರುವ ದೇವರಾಯನ ದುರ್ಗ ಬೆಟ್ಟದಲ್ಲಿರುವ ನಾಮದ ಚಿಲುಮೆಗೂ ಶ್ರೀರಾಮನಿಗು ನಂಟಿದೆ. ವನವಾಸದ ಸಂದರ್ಭದಲ್ಲಿ ಶ್ರೀ ರಾಮ, ಸೀತೆ, ಲಕ್ಷ್ಮಣ ಈ ಬೆಟ್ಟದಲ್ಲಿ ಬಂದು ನೆಲೆಸಿದ್ದರು. ಒಂದು ದಿನ ಬೆಳಿಗ್ಗೆ ಬಂಡೆಯ ಮೇಲೆ ಕುಳಿತು, ಶ್ರೀರಾಮ ಹಣೆಗೆ ತಿಲಕವಿಡಲು ನೀರು ಹುಡುಕಿದ್ದಾನೆ. ನೀರು‌ ಎಲ್ಲೂ ಸಿಗಲಿಲ್ಲ. ಆಗ ಸ್ಥಳದಲ್ಲೇ ಬಾಣ ಹೂಡಿ ಬಂಡೆಯ ಮೇಲೆ ಬಿಟ್ಟಾಗ, ಬಾಣ ಬಂಡೆಯ ಒಳ ಹೊಕ್ಕಿದೆ.

ಇದನ್ನೂ ಓದಿ: ಅಯೋಧ್ಯೆ ರಾಮಮಂದಿರದ 24‌ ಅರ್ಚಕರಲ್ಲಿ ಇಬ್ಬರು ಎಸ್ಸಿ, ಓರ್ವ ಒಬಿಸಿ ಅರ್ಚಕರು, ಮೂರು ತಿಂಗಳ ಗುರುಕುಲ ತರಬೇತಿ

ಬಾಣದಿಂದ ಬಂಡೆಯ ಒಳಗೆ ರಂದ್ರವಾಗಿ, ನೀರು ಚಿಮ್ಮಿದೆ. ಆ ನೀರಿನಿಂದ ಶ್ರೀರಾಮ ಹಣೆಗೆ ತಿಲಕವನ್ನು ಇಟ್ಟುಕೊಂಡಿದ್ದಾನೆ ಎಂದು ಅರಣ್ಯ ಇಲಾಖೆಯ ಸ್ಥಳದಲ್ಲಿ ಬೋರ್ಡ್​ ಹಾಕಿದೆ. ಇಂದಿಗೂ ಕೂಡ ಇಲ್ಲಿ ಬಂಡೆಯಿಂದ ನೀರು ಬರುತ್ತಿದೆ. ಈ ನೀರು ತೀರ್ಥವೆಂದು ಭಾವಿಸಿ ಭಕ್ತರು ಪ್ರೋಕ್ಷಣೆ ಮಾಡಿಕೊಳ್ಳುತ್ತಾರೆ. ಅಂದಿನಿಂದ ಈ ಸ್ಥಳವನ್ನು ನಾಮದ ಚಿಲುಮೆ ಎಂದು ಕರೆಯಲಾಗುತ್ತಿದೆ.

ಹಾಸನದಲ್ಲಿ ಪತ್ತೆಯಾದ ರಾಮನ ಪಾದ

ಹಾಸನ ಜಿಲ್ಲೆಯ ಆಲೂರು ತಾಲೂಕಿನ ಕಾಗನೂರು ಸಮೀಪದ ಹೇಮಾವತಿ ನದಿಯ ದಡದಲ್ಲಿರುವ ಬೃಹದಾಕಾರದ ಬಂಡೆಯ ಮೇಲೆ ಶ್ರೀರಾಮದ ಪಾದದ ಗುರುತು ಪತ್ತೆಯಾಗಿದೆ. ಶ್ರೀರಾಮಚಂದ್ರನ ಪಾದುಕೆ ಮಾತ್ರವಲ್ಲದೇ ಆಂಜನೇಯ ಪಾದ ಹಾಗೂ ಶಿವಲಿಂಗ ಕೂಡ ಗೋಚರವಾಗಿದೆ.

ಇದನ್ನೂ ಓದಿ: ದಾವಣಗೆರೆಯಲ್ಲಿದೆ ಅಯೋಧ್ಯೆ ರಾಮ ಮಂದಿರದ ಮೂಲ ಮೂರ್ತಿಗಳು; ಈ ಆಶ್ರಮದಲ್ಲಿರುವ ಶಾಸನ ಹೇಳುತ್ತೆ ಸತ್ಯ ಕಥೆ

ಲಂಕಾಧೀಶ ರಾವಣನ ಸಂಹಾರದ ಬಳಿಕ ಬ್ರಹ್ಮ ಹತ್ಯೆ ದೋಷ ಪರಿಹಾರಕ್ಕಾಗಿ ಲೋಕ ಸಂಚಾರದಲ್ಲಿದ್ದ ರಾಮ‌ ಲಕ್ಷ್ಮಣ ಸೀತೆಯರು ಪುಣ್ಯ ನದಿ ಹೇಮಾವತಿ ದಂಡೆಯಲ್ಲಿ ತಂಗಲು ತೀರ್ಮಾನಮಾನಿಸಿದರು.

ಹೀಗಾಗಿ ಬಂಡೆಯ ಮೇಲೆ ಈಶ್ವರ ಪ್ರತಿಷ್ಠಾಪನೆ ಮಾಡಿ ಶ್ರೀರಾಮಚಂದ್ರ ಪೂಜೆ ಮಾಡುವ ವೇಳೆ ಈ ಸ್ಥಳದಲ್ಲಿ ವ್ಯಕ್ತಿಯೊಬ್ಬ ಹೆಂಡತಿಯನ್ನು ಹೆಗಲ ಮೇಲೆ ಹೊತ್ತು ತಾಯಿಯನ್ನು ಕೈಯಲ್ಲಿ ಹಿಡಿದು ನದಿ ದಾಟುವ ದೃಶ್ಯ ಕಂಡರು. ಆಗ ಶ್ರೀರಾಮ ಇಲ್ಲಿ ನೆಲೆಸುವುದು ಬೇಡ ಅಂತ ಮುಂದೆ ಹೋದರಂತೆ. ಆಗ ರಾಮ ನಿಂತ, ನಡೆದಾಡಿದ ಸ್ಥಳಗಳಲ್ಲಿ ಪಾದಗಳು ಮೂಡಿವೆ ಎಂಬುವುದು ಜನರ ನಂಬಿಕೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ