ತುಮಕೂರು, (ಸೆಪ್ಟೆಂಬರ್, 28): ಕಟ್ಟಡದ ಬಾಡಿಗೆ (Rent) ಕೇಳಿದ್ದಕ್ಕೆ ಇಬ್ಬರು ಮಹಿಳೆಯರ ಮೇಲೆ ಹಲ್ಲೆ ಮಾಡಿರುವ ಘಟನೆ ತುಮಕೂರು(Tumakuru) ಜಿಲ್ಲೆ ತಿಪಟೂರು ಪಟ್ಟಣದಲ್ಲಿ ನಡೆದಿದೆ. ಕನಕ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಲಿಂಗರಾಜು ಎನ್ನುವಾತ ಕಳೆದ ಎರಡೂವರೆ ವರ್ಷಗಳಿಂದ ಕಟ್ಟಡದ ಬಾಡಿಗೆ ಕೊಡದೆ ಸತಾಯಿಸುತ್ತಿದ್ದ. ನಿನ್ನೆ(ಸೆ.27) ಬಾಡಿಗೆ ಕೇಳಲು ಹೋಗಿದ್ದ ಕಟ್ಟಡದ ಮಾಲೀಕರಾದ ಶಾಹಿನ್ ತಾಜ್ ಮತ್ತು ಗುಜರ್ ಬಾನು ಮೇಲೆ ಹಲ್ಲೆ ಮಾಡಿದ್ದಾರೆ. ಬಾಡಿಗೆ ಕೊಡುವುದಿಲ್ಲ ಎಂದು ಅವಾಜ್ ಹಾಕಿ ಹಲ್ಲೆ ಮಾಡಿದ್ದು, ಇದೀಗ ಗಲಾಟೆ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ. ಹಲ್ಲೆ ಸಂಬಂಧ ಮಹಿಳೆಯರು ತಿಪಟೂರು ಠಾಣೆಗೆ ದೂರು ನೀಡಿದ್ದು, ಈ ದೂರಿನ ಮೇರೆಗೆ ಲಿಂಗರಾಜ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಇದನ್ನೂ ಓದಿ: ಬೆಂಗಳೂರು ಬಂದ್ ವೇಳೆ ಹೋಟೆಲ್ ಮೇಲೆ ದಾಳಿ ಪ್ರಕರಣ; ಬಿಜೆಪಿ ಕಾರ್ಯಕರ್ತರ ಬಂಧನ
ಬುದ್ಧಿವಾದ ಹೇಳಿದ್ದಕ್ಕೆ ಪೊಲೀಸ್ ಎಎಸ್ಐ ಸ್ಕೂಟಿಗೆ ಬೆಂಕಿ ಇಟ್ಟಿರುವ ಘಟನೆ ಚಿಕ್ಕಬಳ್ಳಾಪುರದ ಗುಡಿಬಂಡೆ ಪಟ್ಟಣದ ವಿವೇಕಾನಂದ ನಗರದಲ್ಲಿ ನಡೆದಿದೆ. ಗುಡಿಬಂಡೆ ಪೊಲೀಸ್ ಠಾಣೆಯ ಎಎಸ್ಐ ನಂಜುಂಡ ಶರ್ಮ ಅವರಿಗೆ ಸೇರಿದ ಸ್ಕೂಟಿಗೆ ಸಲೀಂ ಎನ್ನುವಾತ ಬೆಂಕಿ ಹಚ್ಚಿದ್ದಾನೆ. ಅಣ್ಣ ತಮ್ಮಂದಿರ ಗಲಾಟೆ ಮಾಡಿಕೊಂಡು ಆಸ್ಪತ್ರೆ ಸೇರಿದ್ದರು. ಈ ಸಂಬಂಧ ಎಎಸ್ಐ ನಂಜುಂಡ ಶರ್ಮ ಅವರು ಆಸ್ಪತ್ರೆಗೆ ಹೋಗಿ ಬುದ್ದಿವಾದ ಹೇಳಿದ್ದರು. ಇದರಿಂದ ಕುಪಿತಗೊಂಡ ಸಲೀಂ ಎನ್ನುವಾತ ನಂಜುಂಡ ಶರ್ಮ ಅವರ ನಿವಾಸದ ಬಳಿ ಹೋಗಿ ಸ್ಕೂಟಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:40 am, Thu, 28 September 23