ತುಮಕೂರಿನಲ್ಲಿ 4 ಕೋಟಿ ಮೌಲ್ಯದ ಕಳವು ವಸ್ತು ಜಪ್ತಿ, ಗೃಹ ಸಚಿವರ ನೇತೃತ್ವದಲ್ಲಿ ವಾರಸುದಾರರಿಗೆ ವಾಪಸ್
ತುಮಕೂರು ಎಸ್ಪಿ ಅಶೋಕ್ ಕೆ.ವಿ ಮಾರ್ಗದರ್ಶನದ ವಿಶೇಷ ತಂಡ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ 333 ಪ್ರಕರಣ ಭೇದಿಸಿದೆ. ಬರೊಬ್ಬರಿ 4 ಕೋಟಿ 9 ಲಕ್ಷದ 46 ಸಾವಿರ ಬೆಲೆಬಾಳುವ ಚಿನ್ನಾಭರಣ, ದ್ವಿಚಕ್ರ ವಾಹನಗಳು, ಕಾರು, ಹಾಗೂ ಮೊಬೈಲ್ಗಳನ್ನು ಖದೀಮರಿಂದ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತುಮಕೂರು ನ.26: ಗೃಹ ಸಚಿವ ಡಾ. ಜಿ ಪರಮೇಶ್ವರ (G Parameshwara) ತವರು ಜಿಲ್ಲೆಯಲ್ಲಿ ಪೊಲೀಸರು (Police) ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಎಸ್ಪಿ ಅಶೋಕ್ ಕೆ.ವಿ ಮಾರ್ಗದರ್ಶನದ ವಿಶೇಷ ಪೊಲೀಸ್ ತಂಡ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ 333 ಪ್ರಕರಣ ಭೇದಿಸಿದೆ. ಬರೊಬ್ಬರಿ 4 ಕೋಟಿ 9 ಲಕ್ಷದ 46 ಸಾವಿರ ಬೆಲೆಬಾಳುವ ಚಿನ್ನಾಭರಣ, ದ್ವಿಚಕ್ರ ವಾಹನಗಳು, ಕಾರು, ಹಾಗೂ ಮೊಬೈಲ್ಗಳನ್ನು ಖದೀಮರಿಂದ ಪೊಲೀಸರು ವಶಕ್ಕೆ ಪಡೆದಿದ್ದಾರೆ. 2 ದರೋಡೆ, 21 ಸುಲಿಗೆ, 19 ಸರಗಳ್ಳತನ, 95 ಮನೆಗಳ್ಳತನ, 195 ಸಾಮಾನ್ಯ ಪ್ರಕರಣ ಸೇರಿದಂತೆ ಒಟ್ಟು 333 ಪ್ರಕರಣಗಳು ದಾಖಲಾಗಿದ್ದವು.
ವಶಕ್ಕೆ ಪಡೆಯಲಾದ ವಸ್ತುಗಳನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ವಾರಸುದಾರರಿಗೆ ಹಿಂತಿರುಗಿಸಲಾಯಿತು. ಪೊಲೀಸರ ಕಾರ್ಯಕ್ಕೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಶ್ಲಾಘನೆ ವ್ಯಕ್ತಪಡಿಸಿದರು. ಈ ಕಾರ್ಯಕ್ರಮದಲ್ಲಿ ಕೇಂದ್ರ ವಲಯ ಐಜಿಪಿ ಡಾ.ರವಿಕಾಂತೇಗೌಡ, ತುಮಕೂರು ಎಸ್.ಪಿ ಅಶೋಕ್ ಕೆವಿ, ಎಎಸ್ ಪಿ ಮರಿಯಪ್ಪ, ಡಿವೈಎಸ್ ಪಿಗಳಾದ ಚಂದ್ರಶೇಖರ್, ಶೇಖರ್, ಲಕ್ಷ್ಮಿಕಾಂತ್, ಸೇರಿದಂತೆ ಸರ್ಕಲ್ ಇನ್ಸ್ಪೆಕ್ಟರ್ಗಳು ಹಾಗೂ ಸಬ್ಇನ್ಸ್ಪೆಕ್ಟರ್ಗಳು ಸೇರಿದಂತೆ ಪೊಲೀಸ್ ಸಿಬ್ಬಂದಿ ಭಾಗಿಯಾಗಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ