AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tumakuru News: ಮೇಕೆಗೆ ಸೊಪ್ಪು ತರಲು ಹೋಗಿದ್ದ ಅಣ್ಣ, ತಮ್ಮ ನೀರುಪಾಲು

ಮೇಕೆಗೆ ಸೊಪ್ಪು ತರಲು ಹೋಗಿದ್ದ ಅಣ್ಣ ಮತ್ತು ತಮ್ಮ ನೀರುಪಾಲಾಗಿರುವಂತ ಘಟನೆ ಜಿಲ್ಲೆಯ ಶಿರಾ ತಾಲೂಕಿನ ದ್ವಾರನಕುಂಟೆಯಲ್ಲಿ ಘಟನೆ ನಡೆದಿದೆ.

Tumakuru News: ಮೇಕೆಗೆ ಸೊಪ್ಪು ತರಲು ಹೋಗಿದ್ದ ಅಣ್ಣ, ತಮ್ಮ ನೀರುಪಾಲು
ಬಾವಿ
ಗಂಗಾಧರ​ ಬ. ಸಾಬೋಜಿ
|

Updated on: Jun 10, 2023 | 5:10 PM

Share

ತುಮಕೂರು: ಮೇಕೆಗೆ ಸೊಪ್ಪು ತರಲು ಹೋಗಿದ್ದ ಅಣ್ಣ ಮತ್ತು ತಮ್ಮ (Brothers) ನೀರುಪಾಲಾಗಿರುವಂತ (death) ಘಟನೆ ಜಿಲ್ಲೆಯ ಶಿರಾ ತಾಲೂಕಿನ ದ್ವಾರನಕುಂಟೆಯಲ್ಲಿ ಘಟನೆ ನಡೆದಿದೆ. ದ್ವಾರನಕುಂಟೆ ಗ್ರಾಮದ ಸತೀಶ್(25), ಪ್ರಸನ್ನ(29) ಮೃತರು. ಬಾವಿ ದಡದಲ್ಲಿ ಸೊಪ್ಪು ಕೊಯ್ಯುವಾಗ ಪ್ರಸನ್ನ ಬಾವಿಗೆ ಜಾರಿಬಿದ್ದಿದ್ದು, ಆತನನ್ನು ರಕ್ಷಿಸಲು ಬಾವಿಗೆ ಇಳಿದ ತಮ್ಮ ಸತೀಶ್ ಕೂಡ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಪಟ್ಟನಾಯಕನಹಳ್ಳಿ ಪಿಎಸ್ಐ ಭುವಿತಾ ಭೇಟಿ ನೀಡಿದ್ದು, ಅಗ್ನಿಶಾಮಕದಳ ಸಿಬ್ಬಂದಿಯಿಂದ ಶವ ಮೇಲೆತ್ತಲು ಕಾರ್ಯಾಚರಣೆ ಆರಂಭಿಸಲಾಗಿದೆ. ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಲೇಜಿನ ಹಾಸ್ಟೆಲ್​ನಲ್ಲಿ ನೇಣುಬಿಗಿದುಕೊಂಡು ವಿದ್ಯಾರ್ಥಿ ಆತ್ಮಹತ್ಯೆ

ಬೆಂಗಳೂರು: ನಿಟ್ಟೆ ಮೀನಾಕ್ಷಿ ಕಾಲೇಜಿನ ಹಾಸ್ಟೆಲ್​ನಲ್ಲಿ ನೇಣುಬಿಗಿದುಕೊಂಡು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ನಗರದ ಯಲಹಂಕ ನ್ಯೂ ಟೌನ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ದಾವಣಗೆರೆ ಮೂಲದ ವಿವೇಕ್​​(20) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ನಾಲ್ಕನೇ ಸೆಮಿಸ್ಟರ್ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ. ಆತ್ಮಹತ್ಯೆಗೆ ನಿಖರ ಮಾಹಿತಿ ತಿಳಿದುಬಂದಿಲ್ಲ. ಸ್ಥಳಕ್ಕೆ ಯಲಹಂಕ ನ್ಯೂಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಇದನ್ನೂ ಓದಿ: Anekal News: ದೆಹಲಿ ಮಾದರಿಯಲ್ಲಿ ಮಹಿಳೆಯ ಕೊಲೆ ಕೇಸ್​: ಏಳು ಆರೋಪಿಗಳ ಪೈಕಿ ಓರ್ವ ಅರೆಸ್ಟ್​​

ಬಾಡಿಗೆ ರೂಮ್​ನಲ್ಲಿ ವಾಸವಿದ್ದ ಯುವತಿ ಅನುಮಾನಸ್ಪದ ಸಾವು

ತುಮಕೂರು: ನಗರದ ವಿದ್ಯಾನಗರದ 10 ನೇ ಕ್ರಾಸ್​ನಲ್ಲಿ ಬಾಡಿಗೆ ರೂಮ್​ನಲ್ಲಿ ವಾಸವಿದ್ದ ಯುವತಿ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಾಳೆ. ವೀಣಾ(21) ಮೃತ ದುರ್ದೈವಿ. ತುರುವೇಕೆರೆ ತಾಲೂಕಿನ ಹುಲೆಕೆರೆ ಗ್ರಾಮದ ಮೃತ ವೀಣಾ ಅವರು ತುಮಕೂರು ತಾಲೂಕಿನ ಪಂಡಿನತಹಳ್ಳಿ ಬಳಿಯಿರುವ ಇನ್ ಕ್ಯಾಪ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು.

ಇದನ್ನೂ ಓದಿ: Dharwad News: ಕಾದು ಕುಳಿತು ಕಳ್ಳರನ್ನು ಸೆರೆಹಿಡಿದ ಧಾರವಾಡ ಜನ: ಮಾಳಮಡ್ಡಿಗರ ಯಶಸ್ವಿ ಕಾರ್ಯಾಚರಣೆ

ಒಟ್ಟು ಮೂವರು ಸ್ನೇಹಿತೆರೊಂದಿಗೆ ವಾಸವಿದ್ದಳು. ಇಬ್ಬರು ಸ್ನೇಹಿತೆಯರು ಕೆಲಸಕ್ಕೆ‌ ಹೋಗಿದ್ದರು. ಈ ವೇಳೆ ರೂಮ್​ನಲ್ಲಿ ಒಬ್ಬಳೆ ಇದ್ದಾಗ ಈ ಘಟನೆ ನಡೆದಿದ್ದು, ಕೊಲೆಯಾದ ಸ್ಥಿತಿಯಲ್ಲಿ ವೀಣಾ ಶವ ಪತ್ತೆಯಾಗಿದೆ. ಕತ್ತಿನಲ್ಲಿ ಗಾಯದ ಗುರುತು ಇದ್ದು, ಹೊಸ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕಾರು ಪಲ್ಟಿಯಾಗಿ ಬಿಜೆಪಿ ಮುಖಂಡ ಸಾವು; ಇಬ್ಬರು ಮಕ್ಕಳು ಸೇರಿ ನಾಲ್ವರಿಗೆ ಗಾಯ

ಮೈಸೂರು: ಕಾರು ಪಲ್ಟಿಯಾಗಿ ಮೈಸೂರು ಬಿಜೆಪಿ ಮುಖಂಡ ಸ್ವಾಮಿಗೌಡ ಎನ್ನುವವರು ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಊಟಿ ಬಳಿ ನಡೆದಿದೆ. ಮೈಸೂರಿನ ಎನ್.ಆರ್ ಕ್ಷೇತ್ರದ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿಯಾದ ಸ್ವಾಮಿಗೌಡ ಅವರು ಸ್ನೇಹಿತರ ಕುಟುಂಬದವರ ಜೊತೆ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ದುರಂತ ನಡೆದಿದ್ದು, ಸ್ವಾಮಿಗೌಡ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇಬ್ಬರು ಮಕ್ಕಳು ಸೇರಿ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.