AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತುಮಕೂರು:ಖಾಸಗಿ ಬಸ್​ನಲ್ಲಿ ಶೌಚಾಲಯಕ್ಕೆ ಬಳಸುವ ಆ್ಯಸಿಡ್ ಬಾಟಲ್ ಸ್ಫೋಟ; ಹಲವರಿಗೆ ಗಾಯ

ಖಾಸಗಿ ಬಸ್​ನಲ್ಲಿ ಶೌಚಾಲಯಕ್ಕೆ ಬಳಸುವ ಆ್ಯಸಿಡ್ ಬಾಟಲ್(Acid Bottle)ಸ್ಫೋಟವಾಗಿ ಹಲವರಿಗೆ ಸಣ್ಣಪುಟ್ಟ ಗಾಯವಾದ ಘಟನೆ ತುಮಕೂರು ತಾಲೂಕಿನ ಗೂಳೂರು ಬಳಿ‌ ನಡೆದಿದೆ. ಕೂಡಲೇ ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ತುಮಕೂರು:ಖಾಸಗಿ ಬಸ್​ನಲ್ಲಿ ಶೌಚಾಲಯಕ್ಕೆ ಬಳಸುವ ಆ್ಯಸಿಡ್ ಬಾಟಲ್ ಸ್ಫೋಟ; ಹಲವರಿಗೆ ಗಾಯ
ಖಾಸಗಿ ಬಸ್​ನಲ್ಲಿ ಶೌಚಾಲಯಕ್ಕೆ ಬಳಸುವ ಆ್ಯಸಿಡ್ ಬಾಟಲ್ ಸ್ಫೋಟ
ಮಹೇಶ್ ಇ, ಭೂಮನಹಳ್ಳಿ
| Edited By: |

Updated on:Mar 20, 2024 | 8:49 PM

Share

ತುಮಕೂರು, ಮಾ.20: ಇತ್ತೀಚೆಗೆ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಆದ ಸ್ಫೋಟ ಜನರನ್ನ ಬೆಚ್ಚಿ ಬೀಳುವಂತೆ ಮಾಡಿತ್ತು. ಇದೀಗ ಖಾಸಗಿ ಬಸ್​ನಲ್ಲಿ ಶೌಚಾಲಯಕ್ಕೆ ಬಳಸುವ ಆ್ಯಸಿಡ್ ಬಾಟಲ್(Acid Bottle)ಸ್ಫೋಟವಾಗಿ ಹಲವರಿಗೆ ಸಣ್ಣಪುಟ್ಟ ಗಾಯವಾದ ಘಟನೆ ತುಮಕೂರು ತಾಲೂಕಿನ ಗೂಳೂರು ಬಳಿ‌ ನಡೆದಿದೆ. ಕೂಡಲೇ ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಶೌಚಾಲಯಕ್ಕೆ ಬಳಸುವ ಆ್ಯಸಿಡ್ ಬಾಟಲ್​ಗಳನ್ನು ಶಕೀಲಾ ಬಾನು (48) ಎಂಬ ಮಹಿಳೆ ತಂದಿದ್ದಳು.

ಬಾಟಲ್​​ಗಳಲ್ಲಿ ಒತ್ತಡ ಹೆಚ್ಚಾಗಿ ಸ್ಫೋಟಗೊಂಡಿರುವ ಶಂಕೆ

ಬಸ್​ನಲ್ಲಿ ಬಾಟಲ್​ಗಳನ್ನು ಇಟ್ಟುಕೊಂಡು ತುಮಕೂರು ತಾಲೂಕಿನ ಹೊನ್ನುಡಿಕೆ ಹ್ಯಾಂಡ್ ಪೋಸ್ಟ್​​​ನಿಂದ ಬರುತ್ತಿದ್ದರು. ಈ ವೇಳೆ ಬಾಟಲ್​​ಗಳು ಸ್ಫೋಟಗೊಂಡಿದೆ. ಒಂದು ಕ್ಷಣ ಖಾಸಗಿ ಬಸ್​ನಲ್ಲಿದ್ದ ಪ್ರಯಾಣಿಕರು ಶಾಕ್ ಆಗಿದ್ದು, ಅದೃಷ್ಟವಶಾತ್​ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮೇಲ್ನೋಟಕ್ಕೆ ಬಾಟಲ್​​ಗಳಲ್ಲಿ ಒತ್ತಡ ಹೆಚ್ಚಾಗಿ ಸ್ಫೋಟಗೊಂಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ತುಮಕೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇದನ್ನೂ ಓದಿ:ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಕೇಸ್​: ಜೈಲಿನಲ್ಲಿದ್ದ ಆರೋಪಿಯನ್ನ ವಶಕ್ಕೆ ಪಡೆದ ಎನ್​ಐಎ

ಸರಕು ತುಂಬಿದ ಮಂಜಿ ಬೋಟ್ ಸಮುದ್ರದಲ್ಲಿ ಮುಳುಗಡೆ

ಮಂಗಳೂರು: ಮಂಗಳೂರಿನಿಂದ ಲಕ್ಷದ್ವೀಪ ಹೊರಟಿದ್ದ ಸರಕು ತುಂಬಿದ ಮಂಜಿ ಬೋಟ್ ಸಮುದ್ರದಲ್ಲಿ ಮುಳುಗಡೆಯಾಗಿದೆ. ಮಾ.12ರಂದು ಈ ಬೋಟ್​, ಮಂಗಳೂರಿನಿಂದ ಜಲ್ಲಿ, ಸಿಮೆಂಟ್ ಇನ್ನಿತರ ಸಾಮಗ್ರಿ ಹೊತ್ತು ತೆರಳಿತ್ತು. ತಾಂತ್ರಿಕ ತೊಂದರೆಗೀಡಾಗಿ ಸಮುದ್ರ ಮಧ್ಯೆ ಮುಳುಗಿದೆ. ಅನ್ನ-ನೀರಿಲ್ಲದೇ ಸಮುದ್ರದಲ್ಲಿಯೇ ಮೂರು ದಿನ ಮಂಜಿ ಬೋಟ್ ​ನಲ್ಲಿದ್ದ ಸಿಬ್ಬಂದಿ ಕಳೆದಿದ್ದಾರೆ. ಸಣ್ಣ ಬೋಟಿನಲ್ಲಿ ಮಂಜಿಯ ಕ್ಯಾಪ್ಟನ್ ಮತ್ತು ಸಿಬಂದಿ ಸಮುದ್ರಕ್ಕೆ ಹಾರಿ ಜೀವ ಉಳಿಸಿಕೊಂಡಿದ್ದರು. ಆಳ ಸಮುದ್ರದಲ್ಲಿ ಜೀವ ರಕ್ಷಣೆಗಾಗಿ ಕೈಬೀಸುತ್ತಿದ್ದಾಗ ಲಕ್ಷದ್ವೀಪ ಬಳಿಯ ಕಲ್ಪೇನಿ ದ್ವೀಪದ ಮೀನುಗಾರರು ಮೀನುಗಾರಿಕೆ ನಡೆಸುತ್ತಿದ್ದಾಗ ರಕ್ಷಣೆ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:01 pm, Wed, 20 March 24