ವಾರದ ಬಳಿಕ ಕೊನೆಗೂ ಮಾಲೀಕರ ಕೈಸೇರಿತು ಮಿಸ್ಸಿಂಗ್ ಗಿಳಿ, ಹೇಗೆ?

| Updated By: ಆಯೇಷಾ ಬಾನು

Updated on: Jul 22, 2022 | 10:40 PM

ಇಂದು ಗಿಳಿ ಸಿಕ್ಕ ಖುಷಿಯಲ್ಲಿ 50 ಸಾವಿರ ಬದಲಿಗೆ 85 ಸಾವಿರ ಬಹುಮಾನ ಕೊಟ್ಟು ಅರ್ಜುನ್ ದಂಪತಿ ಖುಷಿ ಪಟ್ಟಿದ್ದಾರೆ. ತಮ್ಮ ಕುಟುಂಬದಲ್ಲಿ ಒಂದಾಗಿದ್ದ ಗಿಳಿ ಮತ್ತೆ ಮನೆಗೆ ಬಂದಿದ್ದಕ್ಕೆ ಮನೆಯಲ್ಲಿ ಸಂತಸ ಮನೆ ಮಾಡಿದೆ.

ವಾರದ ಬಳಿಕ ಕೊನೆಗೂ ಮಾಲೀಕರ ಕೈಸೇರಿತು ಮಿಸ್ಸಿಂಗ್ ಗಿಳಿ, ಹೇಗೆ?
ವಾರದ ಬಳಿಕ ಕೊನೆಗೂ ಮಾಲೀಕರ ಕೈಸೇರಿತು ಮಿಸ್ಸಿಂಗ್ ಗಿಳಿ
Follow us on

ತುಮಕೂರು: ತಮ್ಮ ಕುಟುಂಬದಲ್ಲೇ ಒಂದಾಗಿದ್ದ ಗಿಳಿಯೊಂದು ಜುಲೈ 16ರಂದು ನಾಪತ್ತೆಯಾಗಿತ್ತು. ಗಿಳಿ(Parrot) ನಾಪತ್ತೆ ಬಗ್ಗೆ ಕುಟುಂಬಸ್ಥರು ಪ್ರಕಟಣೆ ಹೊರಡಿಸಿದ್ದರು. ಹಾಗೂ ಗಿಳಿ ಹುಡುಕಿಕೊಟ್ಟವರಿಗೆ 50 ಸಾವಿರ ಬಹುಮಾನ ಕೊಡುವುದಾಗಿ ಘೋಷಿಸಿದ್ದರು. ಸದ್ಯ ಈಗ ಆ ಗಿಳಿ ಸಿಕ್ಕಿದ್ದು ಗಿಣಿ ಸಿಕ್ಕ ಖುಷಿಯಲ್ಲಿ 85 ಸಾವಿರ ಬಹುಮಾನ ಕೊಟ್ಟಿದ್ದಾರೆ.

ಶಿವಮೊಗ್ಗದ ಭದ್ರಾವತಿಯಲ್ಲಿದ್ದ ಅರ್ಜುನ್ ಹಾಗೂ ರಂಜನಾ ದಂಪತಿ ಮೂರು ವರ್ಷಗಳಿಂದ ಎರಡು ಗಿಳಿಗಳನ್ನ ಸಾಕುತಿದ್ರು. ಕಳೆದ 20 ದಿನಗಳ ಹಿಂದಷ್ಟೇ ತುಮಕೂರಿನ ಜಯನಗರಕ್ಕೆ ಶಿಫ್ಟ್ ಆಗಿದ್ರು. ಆದ್ರೆ ಜುಲೈ 16 ರಂದು ಮನೆಯ ಬಾಗಿಲು ತೆರೆದಾಗ ಗಂಡು ಗಿಣಿ ಹಾರಿಹೋಗಿದ್ದು ಪುನಃ ಬಂದಿಲ್ಲ. ಹೀಗಾಗಿ ಆಟೋದಲ್ಲಿ ಅನೌನ್ಸ್ ಮಾಡುತ್ತಾ, ಕರಪತ್ರ ಹಂಚುತ್ತಾ ಗಿಳಿಗಾಗಿ ಹುಡುಕಾಡುತ್ತಿದ್ದರು. ಆಫ್ರಿಕನ್ ಗ್ರೇ ಬಣ್ಣದ ಗಂಡು ಗಿಳಿಗೆ ರುಸ್ತುಮಾ ಅಂತಾ ಹೆಸರಿಟ್ಟಿದ್ರು. ಆದ್ರೀಗ ಪ್ರೀತಿಯ ಗಿಳಿ ಹಾರಿಹೋಗಿದ್ದು ಹುಡುಕಿ ಕೊಟ್ಟವ್ರಿಗೆ 50 ಸಾವಿರ ರೂಪಾಯಿ ಬಹುಮಾನ ಕೊಡೋದಾಗಿ ಹೇಳಿದ್ದರು.

ಸದ್ಯ ಈಗ ಸಿದ್ಧಗಂಗಾ ಮಠದ ಬಂಡೆ ಪಾಳ್ಯದಲ್ಲಿ ಗಿಳಿ ಪತ್ತೆಯಾಗಿದೆ. ಶ್ರೀನಿವಾಸ್ ಎಂಬುವವರ ಮನೆಯ ಟೇರಸ್ ಮೇಲೆ ಗಿಳಿ ಕೂತಿತ್ತು. ಇದನ್ನು ಗಮನಿಸಿದ ಮನೆ ಯಜಮಾನ ಕೊನೆಗೂ ಗಿಳಿಯನ್ನು ಅದರ ಮಾಲೀಕರ ಕೈಗೆ ಒಪ್ಪಿಸಿದ್ದಾರೆ. ಇಂದು ಗಿಳಿ ಸಿಕ್ಕ ಖುಷಿಯಲ್ಲಿ 50 ಸಾವಿರ ಬದಲಿಗೆ 85 ಸಾವಿರ ಬಹುಮಾನ ಕೊಟ್ಟು ಅರ್ಜುನ್ ದಂಪತಿ ಖುಷಿ ಪಟ್ಟಿದ್ದಾರೆ. ತಮ್ಮ ಕುಟುಂಬದಲ್ಲಿ ಒಂದಾಗಿದ್ದ ಗಿಳಿ ಮತ್ತೆ ಮನೆಗೆ ಬಂದಿದ್ದಕ್ಕೆ ಮನೆಯಲ್ಲಿ ಸಂತೋಷ ಮನೆ ಮಾಡಿದೆ. ಕುಟುಂಬಸ್ಥರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

Published On - 10:36 pm, Fri, 22 July 22