ಹೃದಯಾಘಾತದಿಂದ ತುಮಕೂರು ಗುಪ್ತವಾರ್ತೆ ಡಿವೈಎಸ್ಪಿ ಶಿವಕುಮಾರ್ ನಿಧನ
ಗುಪ್ತವಾರ್ತೆ ವಿಭಾಗದಲ್ಲಿ ಡಿವೈಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. 1994ರಲ್ಲಿ ಪೊಲೀಸ್ ಇಲಾಖೆಗೆ ಆಯ್ಕೆಯಾಗಿದ್ದರು. ಇನ್ನು ಶಿವಕುಮಾರ್ ಮೂಲತಃ ದಾವಣಗೆರೆ ಜಿಲ್ಲೆಯ ಜಗಳೂರು ಮೂಲದವರು.
ತುಮಕೂರು: ಹೃದಯಾಘಾತದಿಂದ ತುಮಕೂರು ಗುಪ್ತವಾರ್ತೆ ಡಿವೈಎಸ್ಪಿ ಶಿವಕುಮಾರ್ (DYSP Shivakumar) ತಡರಾತ್ರಿ ನಿಧನ (Death) ಹೊಂದಿದ್ದಾರೆ. ಜಿಲ್ಲೆಯ ನಿವಾಸದಲ್ಲಿ ಶಿವಕುಮಾರ್ ಕೊನೆಯುಸಿರೆಳೆದಿದ್ದಾರೆ. ಎಸ್ಪಿ ಕಚೇರಿ ಹಿಂಭಾಗದ ಕ್ವಾರ್ಟರ್ಸ್ನಲ್ಲಿ ಶಿವಕುಮಾರ್ ವಾಸವಾಗಿದ್ದರು. ಗುಪ್ತವಾರ್ತೆ ವಿಭಾಗದಲ್ಲಿ ಡಿವೈಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. 1994ರಲ್ಲಿ ಪೊಲೀಸ್ ಇಲಾಖೆಗೆ ಆಯ್ಕೆಯಾಗಿದ್ದರು. ಇನ್ನು ಶಿವಕುಮಾರ್ ಮೂಲತಃ ದಾವಣಗೆರೆ ಜಿಲ್ಲೆಯ ಜಗಳೂರು ಮೂಲದವರು. ಒಂದೂವರೆ ವರ್ಷದಿಂದ ತುಮಕೂರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಇವರ ಧರ್ಮಪತ್ನಿ ಶ್ರೀಮತಿ ವಿಜಯಲಕ್ಷ್ಮಿ. ಇವರಿಗೆ ಮೂರು ಜನ ಮಕ್ಕಳಿದ್ದು, ಇಬ್ಬರು ಹೆಣ್ಣು ಮಕ್ಕಳು ಮತ್ತು ಒಬ್ಬ ಗಂಡು ಮಗ. ಹಿರಿಯ ಮಗಳು ಇಂಜಿನಿಯರಿಂಗ್ ಪದವಿ ಮುಗಿಸಿದ್ದು, ಎರಡನೇ ಮಗಳು ಕವನ ಪ್ರಥಮ ವರ್ಷದ ಪಿಯುಸಿ ವ್ಯಾಸಂಗ ಮಾಡುತ್ತಿರುತ್ತಾರೆ. ಮಗ ಪ್ರತೀಕ್ 7ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾನೆ. ಮೃತರ ಅಂತ್ಯಸಂಸ್ಕಾರ ಅವರ ಸ್ವಂತ ಊರಾದ ಚಿತ್ರದುರ್ಗ ಜಿಲ್ಲೆಯ ಜಗಳೂರು ತಾಲೂಕಿನ ಚಿಕ್ಕ ಬನಹಳ್ಳಿ ಗ್ರಾಮದಲ್ಲಿ ನಡೆಯಲಿದೆ.
ಅಕ್ರಮ ಮಣ್ಣು ಗಣಿಗಾರಿಕೆಗೆ ಇಬ್ಬರು ಯುವಕರು ಬಲಿ: ಗದಗ: ಅಕ್ರಮ ಮಣ್ಣು ಗಣಿಗಾರಿಕೆಗೆ ಇಬ್ಬರು ಯುವಕರು ಬಲಿಯಾಗಿದ್ದಾರೆ. ಈ ಘಟನೆ ಗದಗ ತಾಲೂಕಿನ ಶ್ಯಾಗೋಟಿ ಗ್ರಾಮದಲ್ಲಿ ನಡೆದಿದೆ. ಮಣ್ಣು ತೆಗೆದ ಬೃಹತ್ ಹೊಂಡದಲ್ಲಿ ಈಜಲು ಹೋಗಿದ್ದ ಯುವಕರು ಮುಳುಗಿ ಸಾವನ್ನಪ್ಪಿದ್ದಾರೆ. 20 ಗಂಟೆ ಕಳೆದರೂ ಶವಗಳು ಸಿಗಲಿಲ್ಲ. ಹೊಂಡದಲ್ಲಿ ಇಳಿದು ಶವ ಶೋಧಕ್ಕೆ ಅಗ್ನಿಶಾಮಕ ಸಿಬ್ಬಂದಿ ಸಿಬ್ಬಂದಿ ಹಿಂದೇಟು ಹಾಕುತ್ತಿದೆ. ಅಗ್ನಿಶಾಮಕ ಸಿಬ್ಬಂದಿಯ ಬೇಜವಾಬ್ದಾರಿತನಕ್ಕೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಕ್ರಮ ಮಣ್ಣು ಗಣಿಗಾರಿಕೆಗೆ ಅಧಿಕಾರಿಗಳು ಕಡಿವಾಣ ಹಾಕದಕ್ಕೆ ದುರಂತ ನಡೆದಿದೆ ಅಂತ ಕಿಡಿಕಾರಿದ್ದಾರೆ.
ಇದನ್ನೂ ಓದಿ
ಅಮ್ಮ ಸ್ಕೂಟರ್ ಕೊಡಿಸಿಲ್ಲವೆಂದು ತಂಗಿಯ ಮಗುವನ್ನು ಕೊಂದವ ಅರೆಸ್ಟ್; 8 ತಿಂಗಳ ಮಗುವನ್ನು ಗೋಡೆಗೆ ಎಸೆದು ಹತ್ಯೆ
Petrol Price Today: ಬೆಂಗಳೂರಿನಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ? ಇಲ್ಲಿದೆ ನೋಡಿ
Published On - 9:12 am, Sat, 30 April 22