ಕಾರ್ಪೆಂಟರ್ ಕೆಲಸದ ಜೊತೆ ಜೊತೆಗೆ ಸಿಂಗಲ್ ಬ್ಯಾರಲ್ ನಾಡಬಂದೂಕಗಳ ತಯಾರಿಸಿ ಪೊಲೀಸರ ಅತಿಥಿಯಾದ!
ತುಮಕೂರು: ಆತ ಕಾರ್ಪೆಂಟರ್ ಕೆಲಸ ಮಾಡಿಕೊಂಡಿದ್ದ ವ್ಯಕ್ತಿ, ತನ್ನ ಕೆಲಸ ತಾನು ಮಾಡಿಕೊಂಡು ಇದ್ದಿದ್ದರೇ ಇಂದು ಪೊಲೀಸರ ಅತಿಥಿಯಾಗುತ್ತಿರಲಿಲ್ಲ ಅನ್ನಿಸುತ್ತೆ, ಆದರೆ ಮಾಡಬಾರದ ಕೆಲಸ ಮಾಡಿ ಜೈಲಿಗೆ ಸೇರಿದ್ದಾನೆ. ಇಷ್ಟಕ್ಕೂ ಏನದು ಅಂತೀರಾ… ಮುಂದೆ ಓದಿ. ಹೌದು. ಕಾರ್ಪೆಂಟರ್ ಒಬ್ಬ ನಾಡಬಂದೂಕಗಳನ್ನ ತಯಾರಿಸಿ ಪೊಲೀಸರಿಗೆ ಸಿಕ್ಕಿಬಿದ್ದ ಘಟನೆ ತುಮಕೂರಿನಲ್ಲಿ ನಡೆದಿದೆ. ತುಮಕೂರಿನ ಕ್ಯಾತ್ಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯ ದುರ್ಗದಹಳ್ಳಿ ಗ್ರಾಮದಲ್ಲಿ ಕೃಷ್ಣಪ್ಪ ಎಂಬಾತ ಕಾರ್ಪೆಂಟರ್ ಕೆಲಸ ಮಾಡಿಕೊಂಡಿದ್ದಾನೆ. ಹಲವು ವರ್ಷಗಳಿಂದ ಕಾರ್ಪೆಂಟರ್ ಕೆಲಸ ಮಾಡಿಕೊಂಡಿದ್ದು ಮನೆಗಳ ವುಡ್ […]
ತುಮಕೂರು: ಆತ ಕಾರ್ಪೆಂಟರ್ ಕೆಲಸ ಮಾಡಿಕೊಂಡಿದ್ದ ವ್ಯಕ್ತಿ, ತನ್ನ ಕೆಲಸ ತಾನು ಮಾಡಿಕೊಂಡು ಇದ್ದಿದ್ದರೇ ಇಂದು ಪೊಲೀಸರ ಅತಿಥಿಯಾಗುತ್ತಿರಲಿಲ್ಲ ಅನ್ನಿಸುತ್ತೆ, ಆದರೆ ಮಾಡಬಾರದ ಕೆಲಸ ಮಾಡಿ ಜೈಲಿಗೆ ಸೇರಿದ್ದಾನೆ. ಇಷ್ಟಕ್ಕೂ ಏನದು ಅಂತೀರಾ… ಮುಂದೆ ಓದಿ. ಹೌದು. ಕಾರ್ಪೆಂಟರ್ ಒಬ್ಬ ನಾಡಬಂದೂಕಗಳನ್ನ ತಯಾರಿಸಿ ಪೊಲೀಸರಿಗೆ ಸಿಕ್ಕಿಬಿದ್ದ ಘಟನೆ ತುಮಕೂರಿನಲ್ಲಿ ನಡೆದಿದೆ. ತುಮಕೂರಿನ ಕ್ಯಾತ್ಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯ ದುರ್ಗದಹಳ್ಳಿ ಗ್ರಾಮದಲ್ಲಿ ಕೃಷ್ಣಪ್ಪ ಎಂಬಾತ ಕಾರ್ಪೆಂಟರ್ ಕೆಲಸ ಮಾಡಿಕೊಂಡಿದ್ದಾನೆ. ಹಲವು ವರ್ಷಗಳಿಂದ ಕಾರ್ಪೆಂಟರ್ ಕೆಲಸ ಮಾಡಿಕೊಂಡಿದ್ದು ಮನೆಗಳ ವುಡ್ ವರ್ಕ್ ಸೇರಿದಂತೆ ಬಾಗಿಲು ಕಿಟಕಿಗಳನ್ನು ತಯಾರು ಮಾಡುತ್ತಿದ್ದ. ಇದರ ಜೊತೆ ಜೊತೆಗೆ ನಾಡಬಂದೂಕಗಳನ್ನ ತಯಾರಿಸುವ ವಿದ್ಯೆಯನ್ನೂ ಕಲಿತಿದ್ದಾನೆ. ಅದರಂತೆ ಅಕ್ರಮವಾಗಿ ಸರಿಸುಮಾರು ಆರಕ್ಕೂ ಹೆಚ್ಚು ಸಿಂಗಲ್ ಬ್ಯಾರಲ್ ನಾಡಬಂದೂಕಗಳನ್ನ ತಯಾರಿಸಿ ಆರು ಜನರಿಗೆ ಮಾರಾಟ ಮಾಡಿದ್ದಾನೆ ಎನ್ನಲಾಗಿದೆ.
ಈ ಬಗ್ಗೆ ಮಾಹಿತಿ ತಿಳಿದ ಕ್ಯಾತ್ಸಂದ್ರ ಪೊಲೀಸರು ಮೊನ್ನೆ ರಾತ್ರಿ ದುರ್ಗದಹಳ್ಳಿ ಗ್ರಾಮದ ಕೃಷ್ಣಪ್ಪ ನಿವಾಸದ ಮೇಲೆ ದಾಳಿ ಮಾಡಿದ್ದಾರೆ. ದಾಳಿ ವೇಳೆ ಒಂದು ನಾಡಬಂದೂಕು, ಬಂದೂಕು ತಯಾರಿಸುವ ಸಾಮಾಗ್ರಿಗಳನ್ನು ಹಾಗೂ ಅಕ್ರಮವಾಗಿ ಬಂದೂಕು ತಯಾರಿಸುತ್ತಿದ್ದ ಕೃಷ್ಣಪ್ಪನನ್ನ ಬಂಧಿಸಿ, ಕರೆತಂದಿದ್ದಾರೆ.
ಸದ್ಯ ಆರು ಜನರಿಗೆ ಬಂದೂಕುಗಳನ್ನು ಮಾರಾಟ ಮಾಡಿದ್ದಾನೆ ಎನ್ನಲಾಗಿದೆ. ಅದರಲ್ಲಿ ಮೂವರನ್ನ ವಶಕ್ಕೆ ಪಡೆದಿದ್ದು, ಇನ್ನುಳಿದ ಮೂವರಿಗಾಗಿ ಶೋಧ ಮುಂದುವರೆದಿದೆ. ಆರು ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಮೇಲ್ನೋಟಕ್ಕೆ ಪ್ರಾಣಿ, ಪಕ್ಷಿಗಳ ಬೇಟೆಯಾಡಲು ನಾಡಬಂದೂಕಗಳನ್ನ ಬಳಸಲು ಹೀಗೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಸದ್ಯ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದು ಉಳಿದ ಆರೋಪಿಗಳಿಗಾಗಿ ಶೋಧ ನಡೆಸಿದ್ದಾರೆ. ಅಕ್ರಮವಾಗಿ ನಾಡಬಂದೂಕಗಳನ್ನ ತಯಾರಿಸಿ ಮಾರಾಟ ಮಾಡುತ್ತಿದ್ದ ಕೃಷ್ಣಪ್ಪ ವಿಚಾರಣೆ ನಡೆಸಿದ್ದು, ಆತ ಕಳೆದ ಒಂದೂವರೆ ವರ್ಷದಿಂದ ಹೀಗೆ ಮಾಡುತ್ತಾ ಬಂದಿದ್ದಾನೆ ಎನ್ನಲಾಗಿದೆ. ಇತ್ತ ಕೃಷ್ಣಪ್ಪನ ಮನೆಯವರು ಪ್ರಕರಣದಿಂದ ಗಾಬರಿಯಾಗಿದ್ದಾರೆ.
– ಮಹೇಶ್, ಟಿವಿ9, ತುಮಕೂರು