ತುಮಕೂರು: ವಿಶೇಷಚೇತನೆ ಮೇಲೆ ಅತ್ಯಾಚಾರ ಎಸಗಿದ್ದ ಎಎಸ್​ಐಗೆ ಜೈಲುಶಿಕ್ಷೆ ವಿಧಿಸಿ ಆದೇಶ

| Updated By: ganapathi bhat

Updated on: Jan 31, 2022 | 10:49 PM

ರಾಷ್ಟ್ರಮಟ್ಟದಲ್ಲಿ ಸಂಚಲನ ಮೂಡಿಸಿದ್ದ ಎಎಸ್​ಐ ರೇಪ್​ ಕೇಸ್​ ಸಂಬಂಧ ಸರ್ಕಾರಿ ಅಭಿಯೋಜಕಿ ವಿ.ಎ.ಕವಿತಾ ವಾದ ಮಂಡಿಸಿದ್ದರು. ಎಎಸ್​ಐ ಉಮೇಶಯ್ಯಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ನೀಡಲಾಗಿದೆ. ಜಡ್ಜ್​ ಹೆಚ್.ಎಸ್. ಮಲ್ಲಿಕಾರ್ಜುನಸ್ವಾಮಿಯಿಂದ ಶಿಕ್ಷೆ ಪ್ರಕಟ ಮಾಡಲಾಗಿದೆ.

ತುಮಕೂರು: ವಿಶೇಷಚೇತನೆ ಮೇಲೆ ಅತ್ಯಾಚಾರ ಎಸಗಿದ್ದ ಎಎಸ್​ಐಗೆ ಜೈಲುಶಿಕ್ಷೆ ವಿಧಿಸಿ ಆದೇಶ
ಪ್ರಾತಿನಿಧಿಕ ಚಿತ್ರ
Follow us on

ತುಮಕೂರು: ವಿಶೇಷಚೇತನೆ ಮೇಲೆ ಅತ್ಯಾಚಾರವೆಸಗಿದ್ದ ಎಎಸ್​ಐಗೆ ಜೈಲು ಶಿಕ್ಷೆ ವಿಧಿಸಿ ತುಮಕೂರಿನ 2ನೇ ಹೆಚ್ಚುವರಿ ಸೆಷನ್ಸ್​ ಕೋರ್ಟ್ ಆದೇಶ ನೀಡಿದೆ. ಎಎಸ್​ಐ ಉಮೇಶಯ್ಯಗೆ 20 ವರ್ಷ ಜೈಲು, 1 ಲಕ್ಷ ದಂಡ ವಿಧಿಸಲಾಗಿದೆ. ದಂಡದ ಮೊತ್ತ ಸಂತ್ರಸ್ತೆಗೆ ಪರಿಹಾರವಾಗಿ ನೀಡಲು ಸೂಚನೆ ಕೊಡಲಾಗಿದೆ. 2017 ರ ಜ.15 ರಂದು ASI ಉಮೇಶಯ್ಯ ಅತ್ಯಾಚಾರವೆಸಗಿದ್ದ. ತುಮಕೂರಿನ ಅಂತರಸನಹಳ್ಳಿ ಸೇತುವೆ ಬಳಿ ಕೃತ್ಯವೆಸಗಿದ್ದ. ತುಮಕೂರು ಗ್ರಾಮಾಂತರ ಠಾಣೆ ಎಎಸ್​ಐ ಆಗಿದ್ದ ಉಮೇಶಯ್ಯ ದುಷ್ಕೃತ್ಯಕ್ಕೆ ಕೋರ್ಟ್ ಶಿಕ್ಷೆ ವಿಧಿಸಿದೆ.

ಡ್ರಾಪ್​ ಕೊಡುವ ನೆಪದಲ್ಲಿ ಕರೆದೊಯ್ದು ಅತ್ಯಾಚಾರವೆಸಗಿದ್ದ ಘಟನೆ ಅಂದು ನಡೆದಿತ್ತು. ಬೊಲೆರೊ ವಾಹನದಲ್ಲಿ ಕರೆದೊಯ್ದು ಅತ್ಯಾಚಾರ ಎಸಗಲಾಗಿತ್ತು. ಸಂತ್ರಸ್ತ ವಿಶೇಷಚೇತನೆಯ ಸಂಬಂಧಿಕರು ಈ ಬಗ್ಗೆ ದೂರು ನೀಡಿದ್ದರು. ರಾಷ್ಟ್ರಮಟ್ಟದಲ್ಲಿ ಸಂಚಲನ ಮೂಡಿಸಿದ್ದ ಎಎಸ್​ಐ ರೇಪ್​ ಕೇಸ್​ ಸಂಬಂಧ ಸರ್ಕಾರಿ ಅಭಿಯೋಜಕಿ ವಿ.ಎ.ಕವಿತಾ ವಾದ ಮಂಡಿಸಿದ್ದರು. ಎಎಸ್​ಐ ಉಮೇಶಯ್ಯಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ನೀಡಲಾಗಿದೆ. ಜಡ್ಜ್​ ಹೆಚ್.ಎಸ್. ಮಲ್ಲಿಕಾರ್ಜುನಸ್ವಾಮಿಯಿಂದ ಶಿಕ್ಷೆ ಪ್ರಕಟ ಮಾಡಲಾಗಿದೆ.

ಮುಡಾ ಸೈಟ್ ಕೇಸ್ ರದ್ದುಗೊಳಿಸಲು ಹೈಕೋರ್ಟ್ ನಕಾರ

ಮೇಲುಕೋಟೆ ಕ್ಷೇತ್ರದ ಶಾಸಕ ಸಿ.ಎಸ್.ಪುಟ್ಟರಾಜುಗೆ ಸಂಕಷ್ಟ ಎದುರಾಗಿದೆ. ಮುಡಾ ಸೈಟ್ ಕೇಸ್ ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ. ಕಾನೂನು ಬಾಹಿರವಾಗಿ ಮುಡಾ ಸೈಟ್ ಹಂಚಿಕೆ ಪಡೆದಿದ್ದರು. ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಪಡೆದಿದ್ದರು. ಪತ್ನಿ ಹೆಸರಲ್ಲಿ ಮೈಸೂರಿನಲ್ಲಿ ಮುಡಾ ಸೈಟ್ ಪಡೆದಿದ್ದರು. ಮಾಹಿತಿ ಮುಚ್ಚಿಟ್ಟು ಮಂಡ್ಯದಲ್ಲಿ‌ ನಿವೇಶನ ಪಡೆದಿದ್ದರು. ಸಿಬಿಐ ಪೊಲೀಸರು ಆರೋಪಪಟ್ಟಿ ದಾಖಲಿಸಿದ್ದರು. ವಂಚನೆ, ನಂಬಿಕೆ ದ್ರೋಹ ಕೇಸ್ ದಾಖಲಾಗಿತ್ತು. ಶಾಸಕ ಸಿ.ಎಸ್.ಪುಟ್ಟರಾಜು ಪ್ರಕರಣ ರದ್ದು ಕೋರಿದ್ದರು. ಸಿಬಿಐ ಎಸ್​ಪಿಪಿ ಪ್ರಸನ್ನ ಕುಮಾರ್ ಆಕ್ಷೇಪಣೆ ಸಲ್ಲಿಸಿದ್ದರು. ಇದೀಗ ಪ್ರಕರಣ ರದ್ದತಿಗೆ ನ್ಯಾ.ಸುನಿಲ್ ದತ್ ಯಾದವ್ ನಿರಾಕರಿಸಿದ್ದಾರೆ. ಪ್ರಕರಣದ‌ ವಿಚಾರಣೆಗೆ ಹೈಕೋರ್ಟ್ ಅನುಮತಿ ನೀಡಿದೆ.

ಸಭಾಪತಿ ಬಸವರಾಜ ಹೊರಟ್ಟಿ ವಿರುದ್ಧದ ಕೇಸ್​ಗೆ ತಡೆಯಾಜ್ಞೆ

ಸಭಾಪತಿ ಬಸವರಾಜ ಹೊರಟ್ಟಿ ವಿರುದ್ಧದ ಕೇಸ್​ಗೆ ತಡೆಯಾಜ್ಞೆ ಹಾಕಲಾಗಿದೆ. ಜಾತಿ ನಿಂದನೆ ಪ್ರಕರಣಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಲಾಗಿದೆ. ಹೈಕೋರ್ಟ್ ಏಕಸದಸ್ಯ ಪೀಠದಿಂದ ಈ ಬಗ್ಗೆ ಆದೇಶ ನೀಡಲಾಗಿದೆ. ಸರ್ವೋದಯ ಶಿಕ್ಷಣ ಸಂಸ್ಥೆ ವಿಚಾರದಲ್ಲಿ ವಿವಾದ ಉಂಟಾಗಿತ್ತು. ಧಾರವಾಡ ಗ್ರಾಮಾಂತರ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಘಟನಾ ಸ್ಥಳದಲ್ಲಿ ಇಲ್ಲದಿದ್ದರೂ ಜಾತಿನಿಂದನೆ ಕೇಸ್ ಹಾಕಲಾಗಿತ್ತು. ಬಸವರಾಜ ಹೊರಟ್ಟಿ ಪ್ರಕರಣ ರದ್ದು ಕೋರಿದ್ದರು.

ಇದನ್ನೂ ಓದಿ: ಹಿಜಾಬ್​ಗಾಗಿ ಹೈಕೋರ್ಟ್ ಮೆಟ್ಟಿಲೇರಿದ ಮುಸ್ಲಿಂ ವಿದ್ಯಾರ್ಥಿ; ಹಿಜಾಬ್ ಧರಿಸುವುದು ಮೂಲಭೂತ ಹಕ್ಕೆಂದು ರಿಟ್ ಅರ್ಜಿ

ಇದನ್ನೂ ಓದಿ: ತಮಿಳುನಾಡಿನ ಶಾಲಾ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣದ ತನಿಖೆ ಸಿಬಿಐಗೆ : ಮದ್ರಾಸ್ ಹೈಕೋರ್ಟ್