ತಮಿಳುನಾಡಿನ ಶಾಲಾ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣದ ತನಿಖೆ ಸಿಬಿಐಗೆ : ಮದ್ರಾಸ್ ಹೈಕೋರ್ಟ್

Tamil Nadu 12 ನೇ ತರಗತಿಯ ವಿದ್ಯಾರ್ಥಿನಿ ಜನವರಿ 9 ರಂದು ತಂಜಾವೂರಿನ ತನ್ನ ಮನೆಯಲ್ಲಿ ವಿಷ ಸೇವಿಸಿದ ಕೆಲವೇ ದಿನಗಳಲ್ಲಿ ಸಾವನ್ನಪ್ಪಿದ್ದಳು. ಕಳೆದ ವಾರ ಹಾಸ್ಟೆಲ್ ವಾರ್ಡನ್​​ನನ್ನು ಬಂಧಿಸಲಾಗಿತ್ತು

ತಮಿಳುನಾಡಿನ ಶಾಲಾ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣದ ತನಿಖೆ ಸಿಬಿಐಗೆ : ಮದ್ರಾಸ್ ಹೈಕೋರ್ಟ್
ಮದ್ರಾಸ್ ಹೈಕೋರ್ಟ್​
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Jan 31, 2022 | 3:27 PM

ಚೆನ್ನೈ: ಹಾಸ್ಟೆಲ್ ವಾರ್ಡನ್ ಕಿರುಕುಳದಿಂದ ತಮಿಳುನಾಡಿನಲ್ಲಿ (Tamilnadu) 17 ವರ್ಷದ ಶಾಲಾ ವಿದ್ಯಾರ್ಥಿನಿ ಆತ್ಮಹತ್ಯೆ (suicide) ಮಾಡಿಕೊಂಡ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸುವಂತೆ ಮದ್ರಾಸ್ ಹೈಕೋರ್ಟ್ (Madras High Court) ಸೋಮವಾರ ಆದೇಶಿಸಿದೆ. 12 ನೇ ತರಗತಿಯ ವಿದ್ಯಾರ್ಥಿನಿ ಜನವರಿ 9 ರಂದು ತಂಜಾವೂರಿನ ತನ್ನ ಮನೆಯಲ್ಲಿ ವಿಷ ಸೇವಿಸಿದ ಕೆಲವೇ ದಿನಗಳಲ್ಲಿ ಸಾವನ್ನಪ್ಪಿದ್ದಳು. ಕಳೆದ ವಾರ ಹಾಸ್ಟೆಲ್ ವಾರ್ಡನ್​​ನನ್ನು ಬಂಧಿಸಲಾಗಿತ್ತು. ಕಳೆದ ವಾರ ಕಾಣಿಸಿಕೊಂಡ ವಿಡಿಯೊದಲ್ಲಿ ಆ ವಿದ್ಯಾರ್ಥಿನಿ ತನ್ನ ವಾರ್ಡನ್‌ ಕೊಠಡಿಗಳನ್ನು ಸ್ವಚ್ಛಗೊಳಿಸಲು, ಇತರ ಕೆಲಸ ಮಾಡಲು ಬಲವಂತಪಡಿಸಿದ್ದರಿಂದ ತನಗೆ ಸರಿಯಾಗಿ ಅಧ್ಯಯನ ಮಾಡಲು ಸಾಧ್ಯವಾಗಲಿಲ್ಲ. ಕಲಿಕೆಯ ಗುಣಮಟ್ಟ ಕಡಿಮೆ ಆಗುತ್ತಾ ಬರುತ್ತಿದ್ದುದ್ದಕ್ಕೆ ಭಯವಾಗುತ್ತಿತ್ತು ಎಂದು ಹೇಳಿದ್ದಳು. “ನನಗೆ ನನ್ನ ಅಧ್ಯಯನದ ಮೇಲೆ ಕೇಂದ್ರೀಕರಿಸಲು ಸಾಧ್ಯವಾಗಲಿಲ್ಲ. ನನ್ನ ಅಂಕಗಳು ಕಡಿಮೆಯಾಗುತ್ತವೆ ಎಂದು ನಾನು ವಿಷ ಸೇವಿಸಿದ್ದೇನೆ” ಎಂದು ಹುಡುಗಿ ವಿಡಿಯೊದಲ್ಲಿ ಹೇಳಿದ್ದಳು. ಆಕೆಯ ಮರಣದ ನಂತರ ಕಾಣಿಸಿಕೊಂಡ ಹಿಂದಿನ ವಿಡಿಯೊದಲ್ಲಿ, ಆಕೆಯ ಪೋಷಕರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳಲು ನಿರಾಕರಿಸಿದ್ದರಿಂದ ಕಿರುಕುಳ ಮತ್ತು ನಿಂದನೆಗೆ ಒಳಗಾಗಿದ್ದೆ ಎಂದು ಹೇಳಿದ್ದಳು.

ಎರಡು ವರ್ಷಗಳ ಹಿಂದೆ ಅವರು ನನಗೆ ಮತ್ತು ನನ್ನ ಪೋಷಕರಿಗೆ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುವಂತೆ ಕೇಳಿಕೊಂಡರು. ಅವರು ನನ್ನ ಶಿಕ್ಷಣವನ್ನು ನೋಡಿಕೊಳ್ಳುತ್ತಾರೆ ಎಂದು ಹೇಳಿರುವುದಾಗಿ ಹುಡುಗಿ ವಿಡಿಯೊದಲ್ಲಿ ಹೇಳಿದ್ದಾಳೆ. ಅವಳು ಮತಾಂತರಗೊಳ್ಳದಿರಲು ಒತ್ತಾಯವಿತ್ತೇ ಎಂಬ ನಿರ್ದಿಷ್ಟ ಪ್ರಶ್ನೆಗೆ, ಆಕೆ “ಬಹುಶಃ” ಎಂದು ಹೇಳಿದ್ದಳು.

ಈ ವಿಡಿಯೊಗಳನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಲಾಗಿದ್ದು, ಇದೀಗ ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ. ವಿಡಿಯೋಗಳನ್ನು ನ್ಯಾಯಾಲಯಕ್ಕೆ ಹಸ್ತಾಂತರಿಸಲಾಗಿದ್ದು, ಮೊಬೈಲ್ ಫೋನ್‌ನಲ್ಲಿ ರೆಕಾರ್ಡ್ ಮಾಡಿದ ವ್ಯಕ್ತಿಗೆ ಕಿರುಕುಳ ನೀಡಬೇಡಿ ಮತ್ತು ತನಿಖೆಯತ್ತ ಗಮನಹರಿಸಿ ಎಂದು ನ್ಯಾಯಾಲಯ ಪೊಲೀಸರಿಗೆ ತಿಳಿಸಿದೆ. ಪೊಲೀಸರು ಅಥವಾ ಆಕೆಯ ಪೋಷಕರು ಈ ಹಿಂದೆ ಪೊಲೀಸರಿಗೆ ಅಥವಾ ಮ್ಯಾಜಿಸ್ಟ್ರೇಟ್‌ ಮುಂದೆ ಯಾವುದೇ ಮತಾಂತರವನ್ನು ಆಪಾದಿಸಿಲ್ಲ ಎಂದು ಪೊಲೀಸರು ಹೇಳುತ್ತಾರೆ.

ಆಕೆಯ ಪೋಷಕರ ಹೇಳಿಕೆಯನ್ನು ದಾಖಲಿಸಿಕೊಳ್ಳುವಂತೆ ನ್ಯಾಯಾಲಯ ಮ್ಯಾಜಿಸ್ಟ್ರೇಟ್‌ಗೆ ಆದೇಶಿಸಿತ್ತು.

ಬಿಜೆಪಿಯ ತಮಿಳುನಾಡು ಘಟಕವು ಈ ಪ್ರಕರಣವನ್ನು ಬಲವಂತದ ಮತಾಂತರಕ್ಕೆ ಉದಾಹರಣೆ ಎಂದು ಪರಿಗಣಿಸಿ ಕ್ರಮಕ್ಕೆ ಒತ್ತಾಯಿಸಿದೆ.

ಇದನ್ನೂ ಓದಿ: ತಮಿಳುನಾಡಿನಲ್ಲಿ ಬಾಲಕಿಯ ಆತ್ಮಹತ್ಯೆ: ಹಾಸ್ಟೆಲ್​​​ನಲ್ಲಿ ಹೆಚ್ಚಿನ ಕೆಲಸ ಮಾಡಲು ಒತ್ತಾಯಿಸುತ್ತಿದ್ದರು ಎಂದು ಆರೋಪಿಸಿರುವ ವಿಡಿಯೊ ಬಹಿರಂಗ