ಒಮಿಕ್ರಾನ್​​ಗಿಂತಲೂ ಓ ಮಿತ್ರೋನ್​ ಭಯಂಕರ ಅಪಾಯಕಾರಿ, ರೂಪಾಂತರಗಳೂ ಡೇಂಜರ್​; ಅಪಹಾಸ್ಯ ಮಾಡಿದ ಶಶಿ ತರೂರ್​

ಜನವರಿ 29ರಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದ ಶಶಿ ತರೂರ್​,  ನೀವೆಲ್ಲ ಸೇರಿ ಈ ದೇಶಕ್ಕೆ ಎಷ್ಟು ಹಾನಿ ಮಾಡಿದ್ದೀರಿ ಎಂಬ ಬಗ್ಗೆ ನಿಮಗೆ ಅರಿವು ಇಲ್ಲ ಎಂದಿದ್ದರು.

ಒಮಿಕ್ರಾನ್​​ಗಿಂತಲೂ ಓ ಮಿತ್ರೋನ್​ ಭಯಂಕರ ಅಪಾಯಕಾರಿ, ರೂಪಾಂತರಗಳೂ ಡೇಂಜರ್​; ಅಪಹಾಸ್ಯ ಮಾಡಿದ ಶಶಿ ತರೂರ್​
ಶಶಿ ತರೂರ್​
Follow us
TV9 Web
| Updated By: Lakshmi Hegde

Updated on:Jan 31, 2022 | 1:17 PM

ಪ್ರಧಾನಿ ನರೇಂದ್ರ ಮೋದಿ (PM Modi) ಭಾಷಣ ಮಾಡುವ ಸಂದರ್ಭದಲ್ಲಿ, ದೇಶವನ್ನು ಉದ್ದೇಶಿಸಿ ಮಾತನಾಡುವಾಗ ನಾಗರಿಕರನ್ನು ಮಿತ್ರೋನ್​ ಎಂದು ಉಲ್ಲೇಖಿಸುತ್ತಾರೆ. ಇದೀಗ ಅದೇ ಶಬ್ದದ ಬಗ್ಗೆ ಕಾಂಗ್ರೆಸ್ ನಾಯಕ, ಸಂಸದ ಶಶಿ ತರೂರ್ (Congress MP Shashi Tharoor) ​ ವ್ಯಂಗ್ಯವಾಡಿದ್ದಾರೆ. ಒಮಿಕ್ರಾನ್ (Omicron)​ ಸೋಂಕಿಗಿಂತಲೂ ‘ಓ ಮಿತ್ರೋನ್​’ (O Mitron) ಎಂಬುದು ಇನ್ನಷ್ಟು ಅಪಾಯಕಾರಿ ಎಂದು ಅಪಹಾಸ್ಯ ಮಾಡಿದ್ದಾರೆ. ಟ್ವೀಟ್​ ಮಾಡಿರುವ ಶಶಿ ತರೂರ್​, ಓ ಮಿತ್ರೋನ್​ ಎಂಬುದು ಒಮಿಕ್ರಾನ್​​ಗಿಂತಲೂ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ. ಓ ಮಿತ್ರೋನ್​ ಪರಿಣಾಮಗಳನ್ನು ಪ್ರತಿದಿನ ನಾವು ನೋಡುತ್ತಿದ್ದೇವೆ. ಹೆಚ್ಚುತ್ತಿರುವ ಧ್ರುವೀಕರಣ, ದ್ವೇಷ ಮತ್ತು ಧರ್ಮಾಂಧತೆ, ಸಂವಿಧಾನದ ಮೇಲೆ ಆಗುತ್ತಿರುವ ದಮನಕಾರಿ ಆಕ್ರಮಣಗಳು, ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಪ್ರಯತ್ನಗಳಲ್ಲಿ ಓ ಮಿತ್ರಾನ್​ ತೊಡಗಿಕೊಂಡಿದೆ. ಈ ವೈರಸ್​​ಗೆ ಸೌಮ್ಯ ಲಕ್ಷಣವುಳ್ಳ ರೂಪಾಂತರ ಇಲ್ಲವೇ ಇಲ್ಲ ಎಂದು ಶಶಿ ತರೂರ್​ ಹೇಳಿದ್ದಾರೆ.  

ಶಶಿ ತರೂರ್​ ತಮ್ಮ ಇಂಗ್ಲಿಷ್​ ಮತ್ತು ವಿಭಿನ್ನ ಟ್ವೀಟ್​ಗಳ ಮೂಲಕವೇ ಹೆಸರಾದವರು. ಕಳೆದ ಕೆಲವು ದಿನಗಳಿಂದಲೂ ಭಾರತೀಯ ಜನತಾ ಪಾರ್ಟಿ ವಿರುದ್ಧ ಮಾತನಾಡುತ್ತಿದ್ದು, ಅದರ ನಾಯಕರನ್ನು ಸೂಕ್ಷ್ಮವಾಗಿಯೇ ಕೆಣಕುತ್ತಿದ್ದಾರೆ. ಜನವರಿ 29ರಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದ ಶಶಿ ತರೂರ್​,  ನೀವೆಲ್ಲ ಸೇರಿ ಈ ದೇಶಕ್ಕೆ ಎಷ್ಟು ಹಾನಿ ಮಾಡಿದ್ದೀರಿ ಎಂಬ ಬಗ್ಗೆ ನಿಮಗೆ ಅರಿವು ಇಲ್ಲ. ಇಡೀ ದೇಶವನ್ನು ಸ್ಮಶಾನದಂತೆ ಮಾಡಿದ್ದೀರಿ ಎಂದು ಕ್ಯಾಪ್ಷನ್​ ಬರೆದಿದ್ದರು.  ಅದಕ್ಕೂ ಮೊದಲು ಜನವರಿ 26ರಂದು ಬಿಜೆಪಿ ವಿರುದ್ಧ ಟ್ವೀಟ್ ಮಾಡಿದ್ದ ಶಶಿ ತರೂರ್​, ಕಾಂಗ್ರೆಸ್​ ಮುಕ್ತ ಭಾರತ ನಿರ್ಮಾಣ ಎಂದು ಪ್ರಧಾನಿ ಮೋದಿ ಘೋಷಿಸಿದ್ದಾರೆ. ಆದರೆ ಬಿಜೆಪಿಯೀಗ ಕಾಂಗ್ರೆಸ್​ಯುಕ್ತ ಪಕ್ಷವಾಗಿದೆ ಎಂದು ಹೇಳಿದ್ದರು.

ಇದನ್ನೂ ಓದಿ: ‘ಬಿಗ್​ ಬಾಸ್​ 15’ ಗೆದ್ದ ಸುಂದರಿ ತೇಜಸ್ವಿ ಪ್ರಕಾಶ್; ಇಲ್ಲಿವೆ ಖ್ಯಾತ ನಟಿಯ ಮನಮೋಹಕ ಫೋಟೋಗಳು

Published On - 1:17 pm, Mon, 31 January 22