ತುಮಕೂರು: ಸಿದ್ದಗಂಗಾ ಮಠದಲ್ಲಿ ಶಿವಕುಮಾರ ಶ್ರೀಗಳ ಸ್ಮರಣಾರ್ಥದ ದಾಸೋಹ ಕಾರ್ಯಕ್ರಮ ರದ್ದು

| Updated By: ganapathi bhat

Updated on: Jan 11, 2022 | 3:49 PM

ಸರ್ಕಾರ ಸಭೆ, ಸಮಾರಂಭ, ಸಾರ್ವಜನಿಕ ಕಾರ್ಯಕ್ರಮಗಳಿಗೆ ಜನರ ಮಿತಿಯನ್ನು ಹೇರಿದೆ. ಈ ಹಿನ್ನೆಲೆಯಲ್ಲಿ ತುಮಕೂರು ಸಿದ್ದಗಂಗಾ ಮಠದಲ್ಲಿ ನಡೆಯಬೇಕಿದ್ದ ದಾಸೋಹ ಕಾರ್ಯಕ್ರಮವನ್ನು ಕೂಡ ರದ್ದುಗೊಳಿಸಲಾಗಿದೆ.

ತುಮಕೂರು: ಸಿದ್ದಗಂಗಾ ಮಠದಲ್ಲಿ ಶಿವಕುಮಾರ ಶ್ರೀಗಳ ಸ್ಮರಣಾರ್ಥದ ದಾಸೋಹ ಕಾರ್ಯಕ್ರಮ ರದ್ದು
ಶಿವಕುಮಾರ ಶ್ರೀಗಳು
Follow us on

ತುಮಕೂರು: ಇಲ್ಲಿನ ಕ್ಯಾತ್ಸಂದ್ರ ಬಳಿ ಇರುವ ಸಿದ್ದಗಂಗಾ ಮಠದಲ್ಲಿ ಜನವರಿ 21ರಂದು ನಡೆಯುವ ಶಿವಕುಮಾರ ಶ್ರೀಗಳ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಈ ಬಾರಿ ಸರಳವಾಗಿ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. ಸರಳ ಪೂಜೆ ಹಾಗೂ ಉತ್ಸವ ಮಾಡಲು ನಿರ್ಧಾರ ಮಾಡಲಾಗಿದೆ. ಅಲ್ಲದೆ, ಶಿವಕುಮಾರಶ್ರೀ ಸ್ಮರಣಾರ್ಥದ ದಾಸೋಹ ಕಾರ್ಯಕ್ರಮ ರದ್ದು ಮಾಡಲಾಗಿದೆ. ಸರ್ಕಾರದಿಂದ ದಾಸೋಹ ದಿನದ ಕಾರ್ಯಕ್ರಮ ನಡೆಯಬೇಕಿತ್ತು, ಅದನ್ನು ರದ್ದುಗೊಳಿಸಲಾಗಿದೆ. ಭಕ್ತಾದಿಗಳು ಸಹಕರಿಸುವಂತೆ ಸಿದ್ದಲಿಂಗ ಸ್ವಾಮೀಜಿ ಮನವಿ ಮಾಡಿಕೊಂಡಿದ್ದಾರೆ.

ಕರ್ನಾಟಕದಲ್ಲಿ ಕೊರೊನಾ ಸೋಂಕು ಹೆಚ್ಚಳ ಹಿನ್ನೆಲೆ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕರ್ನಾಟಕ ಸರ್ಕಾರ ಕೂಡ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಮುಂತಾದ ನಿರ್ಬಂಧಗಳನ್ನು ಹೇರಿದೆ. ಸಭೆ, ಸಮಾರಂಭ, ಸಾರ್ವಜನಿಕ ಕಾರ್ಯಕ್ರಮಗಳಿಗೆ ಜನರ ಮಿತಿಯನ್ನು ಹೇರಿದೆ. ಈ ಹಿನ್ನೆಲೆಯಲ್ಲಿ ತುಮಕೂರು ಸಿದ್ದಗಂಗಾ ಮಠದಲ್ಲಿ ನಡೆಯಬೇಕಿದ್ದ ದಾಸೋಹ ಕಾರ್ಯಕ್ರಮವನ್ನು ಕೂಡ ರದ್ದುಗೊಳಿಸಲಾಗಿದೆ.

ಶಾಸಕ ದೊಡ್ಡನಗೌಡ ಪಾಟೀಲ್ ಹಾಗೂ ಇಬ್ಬರು ಪುತ್ರಿಯರಿಗೆ ಕೊವಿಡ್ ದೃಢ

ಹುನಗುಂದ ಕ್ಷೇತ್ರದ ಬಿಜೆಪಿ ಶಾಸಕ ದೊಡ್ಡನಗೌಡ ಪಾಟೀಲ್ ಹಾಗೂ ಅವರ ಇಬ್ಬರು ಪುತ್ರಿಯರಿಗೆ ಕೊರೊನಾ ಸೋಂಕು ದೃಢವಾಗಿದೆ. ಕಳೆದ ಮೂರು ದಿನಗಳ ಹಿಂದೆ ಇಳಕಲ್​ನಿಂದ ಬೆಂಗಳೂರಿಗೆ ತೆರಳಿದ್ದರು. ಸ್ವಲ್ಪ ಜ್ವರ ಕಾಣಿಸಿಕೊಂಡ ಬಳಿಕ ಸ್ವಯಂ ಪ್ರೇರಿತರಾಗಿ ಕೊವಿಡ್ ಟೆಸ್ಟ್ ಮಾಡಿಸಿದ್ರು. ನಿನ್ನೆ ಶಾಸಕರಿಗೆ ಪಾಸಿಟಿವ್ ರಿಪೋರ್ಟ್ ಬಂದಿದೆ. ಬೆಂಗಳೂರಿನ ಮನೆಯಲ್ಲೇ ಶಾಸಕರು ಕ್ವಾರಂಟೈನ್ ಆಗಿದ್ದಾರೆ. ಶಾಸಕರ ಇಬ್ಬರು ಪುರತ್ರಿಯರಿಗೂ ಪಾಸಿಟಿವ್ ಆಗಿದೆ. ಸೋಂಕಿತರು ಬೆಂಗಳೂರಿನ ಮನೆಯಲ್ಲಿ ಹೋಮ್ ಐಸೋಲೇಷನ್ ಮಾಡಿಕೊಂಡಿದ್ದಾರೆ.

ಧಾರವಾಡದ ಒಂದೇ ಶಾಲೆಯ 11 ವಿದ್ಯಾರ್ಥಿಗಳಿಗೆ ಕೊರೊನಾ, ಚಿಕ್ಕಬಳ್ಳಾಪುರದಲ್ಲಿ ಶಾಲೆಯ ಅಡುಗೆ ಸಹಾಯಕಿಗೆ ಕೊವಿಡ್

ಧಾರವಾಡದ ಒಂದೇ ಶಾಲೆಯ 11 ವಿದ್ಯಾರ್ಥಿಗಳಿಗೆ ಕೊರೊನಾ ಕಂಡುಬಂದಿದೆ. ಇಲ್ಲಿನ ಅಮ್ಮಿನಬಾವಿ ಗ್ರಾಮದ ಅನುದಾನಿತ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢವಾಗಿದೆ. ಅಮ್ಮಿನಬಾವಿ ಗ್ರಾಮದ ಓರ್ವ ಮಹಿಳೆಗೆ ಕೊರೊನಾ ಪಾಸಿಟಿವ್ ಆಗಿದೆ. ಚಿಕ್ಕಬಳ್ಳಾಪುರದ ಸರ್ಕಾರಿ ಶಾಲೆಯ ಅಡುಗೆ ಸಹಾಯಕಿಗೆ ಕೊರೊನಾ ಪಾಸಿಟಿವ್ ಆಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 3 ದಿನ ರಜೆ ಘೋಷಿಸಲಾಗಿದೆ.

ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಇಂದು ತುರ್ತು ಸಭೆ

ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಇಂದು ತುರ್ತು ಸಭೆ ಹಿನ್ನೆಲೆ ಸಭೆಗೂ ಮುನ್ನ ಆರೋಗ್ಯ ಇಲಾಖೆ ಅಧಿಕಾರಿಗಳಿಂದ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಮಾಹಿತಿ ಪಡೆದುಕೊಂಡಿದ್ದಾರೆ. ಕೊವಿಡ್ ಕೇಸ್‌ಗಳ ಬಗ್ಗೆ ಜಿಲ್ಲಾವಾರು ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದಾರೆ. ಯಾವ ಯಾವ ಜಿಲ್ಲೆಯಲ್ಲಿ ಎಷ್ಟು ಪಾಸಿಟಿವಿಟಿ ದರ ಇದೆ. ಆಸ್ಪತ್ರೆ, ಐಸಿಯುಗಳಲ್ಲಿ ಎಷ್ಟು ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಲ್ಲೆಲ್ಲಿ ಮತ್ತಷ್ಟು ಬಿಗಿ ಕ್ರಮಕೈಗೊಂಡ್ರೆ ಸೂಕ್ತ ಎಂಬ ಮಾಹಿತಿ ಪಡೆದಿದ್ದಾರೆ.

ಬಳಿಕ, ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ತುರ್ತು ಸಭೆ ಆರಂಭವಾಗಿದೆ. ಆರ್.ಟಿ.ನಗರದ ಖಾಸಗಿ ನಿವಾಸದಿಂದ ವರ್ಚುವಲ್ ಸಭೆ ನಡೆಸುತ್ತಿದ್ದಾರೆ. ಕೊವಿಡ್ ಸೋಂಕು ಹೆಚ್ಚಳ ಹಿನ್ನೆಲೆ ಸಚಿವರು, ಅಧಿಕಾರಿಗಳು, ತಾಂತ್ರಿಕ ಸಲಹಾ ಸಮಿತಿ ಸದಸ್ಯರ‌ ಜತೆ ಬೊಮ್ಮಾಯಿ ಸಭೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಜನಾರ್ದನ ರೆಡ್ಡಿ ಹುಟ್ಟುಹಬ್ಬ: ಅಭಿಮಾನಿಗಳಿಂದ 55 ಬೆಳ್ಳಿ -55 ಬಂಗಾರದ ನಾಣ್ಯಗಳಿಂದ ತುಲಾಭಾರ, ಕೊವಿಡ್ ರೂಲ್ಸ್ ಬ್ರೇಕ್

ಇದನ್ನೂ ಓದಿ: ವೈಕುಂಠ ಏಕಾದಶಿಯಂದು ದೇವಾಲಯಕ್ಕೆ 50 ಜನರ ಪ್ರವೇಶಕ್ಕೆ ಮಾತ್ರ ಅವಕಾಶ; ಕೊರೊನಾ ತಡೆಗೆ ಕಠಿಣ ಕ್ರಮ

Published On - 3:48 pm, Tue, 11 January 22