ವೈಕುಂಠ ಏಕಾದಶಿಯಂದು ದೇವಾಲಯಕ್ಕೆ 50 ಜನರ ಪ್ರವೇಶಕ್ಕೆ ಮಾತ್ರ ಅವಕಾಶ; ಕೊರೊನಾ ತಡೆಗೆ ಕಠಿಣ ಕ್ರಮ

Bengaluru News: ಟ್ರಯಾಜಿಂಗ್ ಸೆಂಟರ್ ನಲ್ಲಿ ಚಿಕಿತ್ಸೆ ನೀಡಿದ ನಂತರ ಅವ್ರಿಗೆ ಮುಂದಿನ ಚಿಕಿತ್ಸೆ ಕುರಿತು ಮಾಹಿತಿ ನೀಡಲಾಗುವುದು. ಆಸ್ಪತ್ರೆಗೆ ದಾಖಲಾಗಬೇಕು ಅಂದ್ರೆ ಫಿಜಿಕಲ್ ಟ್ರಯಾಜಿಂಗ್ ಸೆಂಟರ್ ಸರ್ಟಿಫಿಕೇಟ್ ಕಡ್ಡಾಯ ಎಂದು ತಿಳಿಸಿದ್ದಾರೆ.

ವೈಕುಂಠ ಏಕಾದಶಿಯಂದು ದೇವಾಲಯಕ್ಕೆ 50 ಜನರ ಪ್ರವೇಶಕ್ಕೆ ಮಾತ್ರ ಅವಕಾಶ; ಕೊರೊನಾ ತಡೆಗೆ ಕಠಿಣ ಕ್ರಮ
ಪ್ರಾತಿನಿಧಿಕ ಚಿತ್ರ

ಬೆಂಗಳೂರು: ವೈಕುಂಠ ಏಕಾದಶಿಯಂದು 50 ಜನರ ಪ್ರವೇಶಕ್ಕೆ ಮಾತ್ರ ಅವಕಾಶ ನೀಡಲಾಗುವುದು. ದೇವಸ್ಥಾನಕ್ಕೆ 50 ಜನರು ಮಾತ್ರ ತೆರಳಲು ಅವಕಾಶವಿದೆ. ಇದನ್ನು ಪಾಲಿಸಬೇಕು, ಹೆಚ್ಚು ಜನರು ಸೇರಬಾರದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಹೇಳಿಕೆ ನೀಡಿದ್ದಾರೆ. ವೀಕೆಂಡ್ ಕರ್ಫ್ಯೂ ವಿಸ್ತರಣೆ ಮಾಡುವುದು ಸೂಕ್ತವಾಗಿದೆ. ಪರಿಸ್ಥಿತಿಗೆ ತಕ್ಕಂತೆ ವಿಸ್ತರಣೆ ಮಾಡೋದು ಸೂಕ್ತ. ಕೊವಿಡ್ ಕೇಸ್ ಕಡಿಮೆ ಆಗದಿದ್ದರೆ ಕಠಿಣ ರೂಲ್ಸ್ ಜಾರಿ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.

ನಗರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗ್ತಿದೆ. ಹೀಗಾಗಿ ಪ್ರತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಫಿಜಿಕಲ್ ಟ್ರಯಾಜಿಂಗ್ ಸೆಂಟರ್ ಆರಂಭಕ್ಕೆ ಸಿದ್ಧತೆ ಮಾಡಲಾಗಿದೆ. ಸೋಂಕಿತರು ವಾಕಿಂಗ್ ಮೂಲಕ ಈ ಫಿಜಿಕಲ್ ಟ್ರಯಾಜಿಂಗ್ ಸೆಂಟರ್​ಗೆ ಬರಬಹುದು. ಆಸ್ಪತ್ರೆಗೆ ದಾಖಲಾಗುವ ಮೊದಲು ಫಿಜಿಕಲ್ ಟ್ರಯಾಜಿಂಗ್ ಸೆಂಟರ್​​ಗೆ ವಿಸಿಟ್ ಮಾಡಲೇಬೇಕು. ಟ್ರಯಾಜಿಂಗ್ ಸೆಂಟರ್ ನಲ್ಲಿ ಚಿಕಿತ್ಸೆ ನೀಡಿದ ನಂತರ ಅವ್ರಿಗೆ ಮುಂದಿನ ಚಿಕಿತ್ಸೆ ಕುರಿತು ಮಾಹಿತಿ ನೀಡಲಾಗುವುದು. ಆಸ್ಪತ್ರೆಗೆ ದಾಖಲಾಗಬೇಕು ಅಂದ್ರೆ ಫಿಜಿಕಲ್ ಟ್ರಯಾಜಿಂಗ್ ಸೆಂಟರ್ ಸರ್ಟಿಫಿಕೇಟ್ ಕಡ್ಡಾಯ ಎಂದು ತಿಳಿಸಿದ್ದಾರೆ.

ಫಿಜಿಕಲ್ ಟ್ರಯಾಜಿಂಗ್ ಸೆಂಟರ್ ಯಾಕೆ? ಮನೆ ಮನೆಗೂ ಹೋಗಿ ಮೊಬೈಲ್ ಫಿಜಿಕಲ್ ಟ್ರಯಾಜಿಂಗ್ ಮಾಡಲಾಗುವುದು. ವಿನಾಕಾರಣ ಆಸ್ಪತ್ರೆಗೆ ದಾಖಲಾಗುವುದು ಕಡಿಮೆಯಾಗುವುದು. ಪ್ರತಿ ದಿನ ಸೋಂಕಿನ ಕುರಿತು ಮಾನಿಟರ್ ಮಾಡಲಾಗುವುದು. ಎಷ್ಟು ಜನ ದಾಖಲಾಗ್ತಿದ್ದಾರೆ, ಐಸಿಯು ಸೇರುತ್ತಿದ್ದಾರೆ ಅನ್ನೋದರ ಮಾನಿಟರ್ ಮಾಡಲಾಗುವುದು. ಫಿಜಿಕಲ್ ಟ್ರಯಾಜಿಂಗ್ ಸೆಂಟರ್ ನಲ್ಲೂ ಬೆಡ್ ಬುಕಿಂಗ್ ವ್ಯವಸ್ಥೆ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ವೀಕೆಂಡ್ ಕರ್ಫ್ಯೂ ವಿಸ್ತರಣೆ ಮಾಡುವುದು ಸೂಕ್ತವಾಗಿದೆ. ಪರಿಸ್ಥಿತಿ ಗೆ ತಕ್ಕಂತೆ ವಿಸ್ತರಣೆ ಮಾಡೋದು ಅಗತ್ಯವಾಗಿದೆ. ಜೀವಕ್ಕೆ ಆತಂಕ ಬರುತ್ತೆ ಅಂತ ಅಂದ್ರೆ ಲಾಕ್ ಡೌನ್ ನಂಥಹ ಕಠಿಣ ಕ್ರಮ ಅನಿವಾರ್ಯ. ಕೇಸ್ ಕಡಿಮೆ ಆಗಲಿಲ್ಲ ಅಂದ್ರೆ ಇನ್ನಷ್ಟು ಕಠಿಣ ನಿಯಮ ಅನಿವಾರ್ಯ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ.

ಇದನ್ನೂ ಓದಿ: ಕೊರೊನಾ ಸೋಂಕಿತರ ಸಂಪರ್ಕಕ್ಕೆ ಬಂದ ಎಲ್ಲರನ್ನೂ ತಪಾಸಣೆ ಮಾಡುವ ಅಗತ್ಯವಿಲ್ಲ; ಹೊಸ ಮಾರ್ಗಸೂಚಿ ಪ್ರಕಟಿಸಿದ ಐಸಿಎಂಆರ್​

ಇದನ್ನೂ ಓದಿ: ದೇಶದಲ್ಲಿಂದು 1,68,063 ಕೊರೊನಾ ಕೇಸ್​ ದಾಖಲು; ಸಕ್ರಿಯ ಪ್ರಕರಣಗಳ ಸಂಖ್ಯೆ 8,21,446ಕ್ಕೆ ಏರಿಕೆ, 277 ಮಂದಿ ಸಾವು

Click on your DTH Provider to Add TV9 Kannada