ದೇಶದಲ್ಲಿಂದು 1,68,063 ಕೊರೊನಾ ಕೇಸ್​ ದಾಖಲು; ಸಕ್ರಿಯ ಪ್ರಕರಣಗಳ ಸಂಖ್ಯೆ 8,21,446ಕ್ಕೆ ಏರಿಕೆ, 277 ಮಂದಿ ಸಾವು

ಕೇವಲ ಕೊವಿಡ್​ 19 ಪ್ರಕರಣಗಳಲ್ಲದೆ, ಒಮಿಕ್ರಾನ್​ ಕೂಡ ಏರಿಕೆಯಾಗುತ್ತಿದೆ. ಭಾರತದಲ್ಲಿ ಕಳೆದ 24ಗಂಟೆಯಲ್ಲಿ 400 ಒಮಿಕ್ರಾನ್​ ಸೋಂಕಿನ ಪ್ರಕರಣಗಳು ದಾಖಲಾಗಿವೆ. ಅಲ್ಲಿಗೆ ದೇಶದಲ್ಲಿ ಒಟ್ಟಾರೆ ಕೊರೊನಾ ಸೋಂಕಿತರ ಸಂಖ್ಯೆ 4,461ಕ್ಕೆ ಏರಿಕೆಯಾಗಿದೆ.

ದೇಶದಲ್ಲಿಂದು 1,68,063 ಕೊರೊನಾ ಕೇಸ್​ ದಾಖಲು; ಸಕ್ರಿಯ ಪ್ರಕರಣಗಳ ಸಂಖ್ಯೆ 8,21,446ಕ್ಕೆ ಏರಿಕೆ, 277 ಮಂದಿ ಸಾವು
ಪ್ರಾತಿನಿಧಿಕ ಚಿತ್ರ

ಕಳೆದ ಕೆಲವು ದಿನಗಳಿಂದಲೂ ಭಾರತದಲ್ಲಿ ಒಂದೇ ಸಮನೆ ಏರಿಕೆಯಾಗುತ್ತಿದ್ದ ಕೊರೊನಾ ಕೇಸ್​ಗಳಲ್ಲಿ ಇಂದು ಸ್ವಲ್ಪ ಇಳಿಕೆ ಕಂಡುಬಂದಿದೆ. 24 ಗಂಟೆಯಲ್ಲಿ 1,68,063 ಕೊರೊನಾ ಕೇಸ್​ಗಳು ದಾಖಲಾಗಿವೆ. ನಿನ್ನೆ 1,79,723 ಸೋಂಕಿನ ಪ್ರಕರಣಗಳು ದಾಖಲಾಗಿದ್ದವು.  ಹಾಗೇ, 24 ಗಂಟೆಯಲ್ಲಿ 277 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ. ಜನವರಿ 10ರಂದು 146 ಮಂದಿ ಸಾವನ್ನಪ್ಪಿದ್ದರು. ಭಾರತದಲ್ಲಿ ಕೊರೊನಾ ಕೇಸ್​ಗಳ ಸಂಖ್ಯೆ 35,875,790ಕ್ಕೆ ತಲುಪಿದ್ದು, ಒಟ್ಟಾರೆ ಸಾವಿನ ಸಂಖ್ಯೆ 484,213 ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.   ದೇಶದಲ್ಲಿ ದೈನಿಕ ಪಾಸಿಟಿವಿಟಿ ದರ ಶೇ.10.64ಕ್ಕೆ ಏರಿಕೆಯಾಗಿದೆ. 24ಗಂಟೆಯಲ್ಲಿ ಸಕ್ರಿಯ ಪ್ರಕರಣಗಳಲ್ಲಿ 97,827 ಹೆಚ್ಚಾಗಿದ್ದು, ದೇಶದಲ್ಲಿ ಒಟ್ಟು ಸಕ್ರಿಯ ಕೇಸ್​ಗಳ ಸಂಖ್ಯೆ 8,21,446.  ಹಾಗೇ, ಕಳೆದ 24ಗಂಟೆಯಲ್ಲಿ 69,959 ಮಂದಿ ಚೇತರಿಸಿಕೊಂಡು ಡಿಸ್​ಚಾರ್ಜ್​ ಆಗಿದ್ದಾರೆ. ಅಲ್ಲಿಗೆ ದೇಶದಲ್ಲಿ ಒಟ್ಟು ಕೊರೊನಾದಿಂದ ಚೇತರಿಕೆ ಕಂಡವರ ಸಂಖ್ಯೆ 34,570,131.

ಒಮಿಕ್ರಾನ್​​ನಲ್ಲಿ ಏರಿಕೆ ಕೇವಲ ಕೊವಿಡ್​ 19 ಪ್ರಕರಣಗಳಲ್ಲದೆ, ಒಮಿಕ್ರಾನ್​ ಕೂಡ ಏರಿಕೆಯಾಗುತ್ತಿದೆ. ಭಾರತದಲ್ಲಿ ಕಳೆದ 24ಗಂಟೆಯಲ್ಲಿ 400 ಒಮಿಕ್ರಾನ್​ ಸೋಂಕಿನ ಪ್ರಕರಣಗಳು ದಾಖಲಾಗಿವೆ. ಅಲ್ಲಿಗೆ ದೇಶದಲ್ಲಿ ಒಟ್ಟಾರೆ ಕೊರೊನಾ ಸೋಂಕಿತರ ಸಂಖ್ಯೆ 4,461ಕ್ಕೆ ಏರಿಕೆಯಾಗಿದೆ. ಸದ್ಯ ದೇಶದ ಒಟ್ಟಾರೆ 28 ಕೇಂದ್ರಾಡಳಿತ ಪ್ರದೇಶಗಳು/ರಾಜ್ಯಗಳಲ್ಲಿ ಈ ಸೋಂಕು ಪತ್ತೆಯಾಗಿದೆ. ಒಟ್ಟಾರೆ ಪ್ರಕರಣಗಳ ಪೈಕಿ 1711 ಮಂದಿ ಚೇತರಿಸಿಕೊಂಡು, ಆಸ್ಪತ್ರೆಗಳಿಂದ ಡಿಸ್​ಚಾರ್ಜ್​ ಆಗಿದ್ದಾರೆ. ಒಮಿಕ್ರಾನ್​ ಅತ್ಯಂತ ಸೌಮ್ಯ ಲಕ್ಷಣಗಳನ್ನು ಹೊಂದಿದ್ದರೂ, ಪ್ರಸ್ತುತ ಇರುವ ಕೊವಿಡ್ 19 ಲಸಿಕೆಗಳು ಈ ಸೋಂಕಿಗೆ ಸಾಕಾಗುವುದಿಲ್ಲ.  ಒಮಿಕ್ರಾನ್​ ಸೋಂಕಿತರು ಶೇ.5-10 ಮಂದಿ ಆಸ್ಪತ್ರೆಗೆ ಸೇರಬೇಕಾಗಿರಬಹುದು. ಹಾಗಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್​ ಭೂಷಣ್​ ತಿಳಿಸಿದ್ದಾರೆ.  ಒಮಿಕ್ರಾನ್​ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ, ಆಸ್ಪತ್ರೆಗೆ ದಾಖಲಾಗುವವರು, ಮನೆಯಲ್ಲೇ ಐಸೋಲೇಟ್​ ಆಗುವವರು, ಆಮ್ಲಜನಕ ಸಪೋರ್ಟ್​ನಲ್ಲಿರುವವರು, ಐಸಿಯು, ವೆಂಟಿಲೇಟರ್​​ನಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆಯ ಮೇಲೆ ನಿಗಾ ಇಡಿ ಎಂದು ರಾಜೇಶ್​ ಭೂಷಣ್​ ಅವರು ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳಿಗೆ ಸೂಚನೆ ನೀಡಿದ್ದಾರೆ.

ಈ ಮಧ್ಯೆ ದೇಶದಲ್ಲಿ ಕೊರೊನಾ ಲಸಿಕೆ ಅಭಿಯಾನವರೂ ವೇಗವಾಗಿ ಸಾಗುತ್ತಿದೆ. ಒಟ್ಟಾರೆ 152 ಕೋಟಿ ಡೋಸ್​ ಲಸಿಕೆ ನೀಡಲಾಗಿದೆ. ಅಲ್ಲದೆ ಸೋಮವಾರದಿಂದ ಆರೋಗ್ಯ ಕಾರ್ಯಕರ್ತರು,  ಕೊವಿಡ್​ 19 ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿರುವವರು ಮತ್ತು 60 ವರ್ಷ ಮೇಲ್ಪಟ್ಟು ಇತರ ರೋಗಗಳಿಂದ ಬಳಲುತ್ತಿರುವವರಿಗೆ ಮುನ್ನೆಚ್ಚರಿಕಾ ಡೋಸ್​ ನೀಡುವ ಅಭಿಯಾನವೂ ಶುರುವಾಗಿದೆ.

ಇದನ್ನೂ ಓದಿ: ತಬ್ಲಿಘಿಗಳು ಕೊವಿಡ್ ಮೊದಲ ಅಲೆಗೆ ಕಾರಣರಾದರೆ, ಕಾಂಗ್ರೆಸ್‌ 3ನೇ ಅಲೆಗೆ ಕಾರಣವಾಗುತ್ತಿದ್ದಾರೆ: ರಾಜ್ಯ ಬಿಜೆಪಿ ಟ್ವೀಟ್

Published On - 1:41 pm, Tue, 11 January 22

Click on your DTH Provider to Add TV9 Kannada