ಟೀ ಶರ್ಟ್, ಬರ್ಮುಡಾ ಧರಿಸಿ ಮಧ್ಯರಾತ್ರಿ ಠಾಣೆಗೆ ಬಂದ ಪೊಲೀಸ್ ವರಿಷ್ಠಾಧಿಕಾರಿ; ಗುರುತು ತಿಳಿಯದೇ ಸಿಬ್ಬಂದಿ ತಬ್ಬಿಬ್ಬು

ಬಳಿಕ ದೂರು ನೀಡಲು ಬಂದಿದ್ದ ದೂರುದಾರರನ್ನು ವಿಚಾರಣೆ ನಡೆಸಿ, ಸತತ ಒಂದು ಗಂಟೆಗಳ ಕಾಲ ಮಹಿಳಾ ಠಾಣೆಯಲ್ಲೇ ಇದ್ದು, ಸಿಬ್ಬಂದಿಯ ಕಾರ್ಯ ವೈಖರಿಗಳ ಪರಿಶೀಲನೆ ನಡೆಸಿದ್ದಾರೆ. ಜತೆಗೆ ಸಿಬ್ಬಂದಿಯ ಸಮಸ್ಯೆಗಳನ್ನ ಆಲಿಸಿದ ತುಮಕೂರು ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‌ಕುಮಾರ್, ಮಧ್ಯರಾತ್ರಿ 2 ಗಂಟೆಗೆ ಮನೆಗೆ ಹಿಂತಿರುಗಿದ್ದಾರೆ.

ಟೀ ಶರ್ಟ್, ಬರ್ಮುಡಾ ಧರಿಸಿ ಮಧ್ಯರಾತ್ರಿ ಠಾಣೆಗೆ ಬಂದ ಪೊಲೀಸ್ ವರಿಷ್ಠಾಧಿಕಾರಿ; ಗುರುತು ತಿಳಿಯದೇ ಸಿಬ್ಬಂದಿ ತಬ್ಬಿಬ್ಬು
ಮಧ್ಯರಾತ್ರಿ ಪೊಲೀಸ್ ಠಾಣೆಗೆ ಆಗಮಿಸಿದ ತುಮಕೂರು ಎಸ್​ಪಿ

ತುಮಕೂರು: ಟೀ ಶರ್ಟ್, ಬರ್ಮುಡಾ ಧರಿಸಿ ಅಪರಿಚಿತ ದೂರುದಾರರಂತೆ ಪೊಲೀಸ್ ಠಾಣೆಗೆ ತೆರಳಿದ ತುಮಕೂರು ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‌ ಕುಮಾರ್, (Tumkur SP) ಠಾಣೆಯ ಪರಿಶೀಲನೆ ನಡೆಸಿದ್ದಾರೆ. ತುಮಕೂರು ಹೊರವಲಯದ ಮಹಿಳಾ ಠಾಣೆ ಪರಿಶೀಲನೆ ನಡೆಸಿದ ಅವರ ವೇಶ ಭೂಷಣ ಗಮನಿಸಿ ದೂರುದಾರ ಎಂದೇ ಠಾಣೆಯ ಸಿಬ್ಬಂದಿ ಭಾವಿಸಿದ್ದರು. ಆದರೆ ಕೆಲಹೊತ್ತಿನ ಬಳಿಕ ಟೀ ಶರ್ಟ್ ಮತ್ತು ಬರ್ಮುಡಾ ಧರಿಸಿ ಬಂದವರು ತುಮಕೂರು ಪೊಲೀಸ್ ವರಿಷ್ಠಾಧಿಕಾರಿ ಎಂದು ತಿಳಿದ ಪೊಲೀಸ್ ಸಿಬ್ಬಂದಿ ತಬ್ಬಿಬ್ಬಾಗಿದ್ದಾರೆ. ಬಳಿಕ ಕೆಲಹೊತ್ತಿನವರೆಗೆ ಠಾಣೆಯಲ್ಲೇ ಇದ್ದು ಎಸ್‌ಪಿ ರಾಹುಲ್ ಕುಮಾರ್ ಪರಿಶೀಲನೆ ನಡೆಸಿದ್ದಾರೆ. ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಈ ಘಟನೆಯ ವಿಡಿಯೋ ಹಂಚಿಕೊಂಡು ಸ್ಥಳೀಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಬಳಿಕ ದೂರು ನೀಡಲು ಬಂದಿದ್ದ ದೂರುದಾರರನ್ನು ವಿಚಾರಣೆ ನಡೆಸಿ, ಸತತ ಒಂದು ಗಂಟೆಗಳ ಕಾಲ ಮಹಿಳಾ ಠಾಣೆಯಲ್ಲೇ ಇದ್ದು, ಸಿಬ್ಬಂದಿಯ ಕಾರ್ಯ ವೈಖರಿಗಳ ಪರಿಶೀಲನೆ ನಡೆಸಿದ್ದಾರೆ. ಜತೆಗೆ ಸಿಬ್ಬಂದಿಯ ಸಮಸ್ಯೆಗಳನ್ನು ಆಲಿಸಿದ ತುಮಕೂರು ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‌ಕುಮಾರ್, ಮಧ್ಯರಾತ್ರಿ 2 ಗಂಟೆಗೆ ಮನೆಗೆ ಹಿಂತಿರುಗಿದ್ದಾರೆ.

ಇದನ್ನೂ ಓದಿ: 

Arvind Bellad: ನಾಳೆ ಧಾರವಾಡ ಬಂದ್ ಇಲ್ಲ; ಶಾಸಕ ಅರವಿಂದ ಬೆಲ್ಲದಗೆ ಸಚಿವ ಸ್ಥಾನ ದೊರೆಯದ್ದಕ್ಕೆ ಬಂದ್ ಎಂದು ವೈರಲ್ ಆದದ್ದು ಸುಳ್ಳುಸುದ್ದಿ 

ತುಮಕೂರು: ಲಾಕ್​ಡೌನ್ ವೇಳೆ 80 ಶಿಶುಗಳು.. 18 ತಾಯಂದಿರ ಮರಣ, ಆಸ್ಪತ್ರೆಗೆ ಹೋಗಲು ಹಿಂಜರಿದು ಸಾವಿನ ಮನೆಗೆ ಪ್ರಯಾಣ

(Tumkur SP arrived at the station at midnight wearing a T shirt and a Bermuda)

Click on your DTH Provider to Add TV9 Kannada