ತುಮಕೂರು: ಲಾಕ್ಡೌನ್ ವೇಳೆ 80 ಶಿಶುಗಳು.. 18 ತಾಯಂದಿರ ಮರಣ, ಆಸ್ಪತ್ರೆಗೆ ಹೋಗಲು ಹಿಂಜರಿದು ಸಾವಿನ ಮನೆಗೆ ಪ್ರಯಾಣ
ತುಮಕೂರು ಜಿಲ್ಲೆಯಲ್ಲಿ ಏಪ್ರಿಲ್ನಿಂದ ಲಾಕ್ಡೌನ್ ಆಗಿದ್ದ ವೇಳೆ 80 ನವಜಾತ ಶಿಶುಗಳು, 18 ತಾಯಂದಿರು ಮೃತಪಟ್ಟಿದ್ದಾರೆ. ಹೀಗಂತಾ ಇವರು ಕೊವಿಡ್ಗೆ ಬಲಿಯಾಗಿಲ್ಲ. ಬದಲಾಗಿ ಲಾಕ್ಡೌನ್ ವೇಳೆ ಸರಿಯಾದ ಚಿಕಿತ್ಸೆ ಸಿಗದೇ, ಆಸ್ಪತ್ರೆಗೆ ಹೋಗಲು ಹಿಂಜರಿದಿದ್ದರಿಂದ ಮೃತಪಟ್ಟಿದ್ದಾರೆ. ಈ ಸಾವಿನ ಅಂಕಿ-ಸಂಖ್ಯೆ ಕೇಳಿ ಜಿಲ್ಲೆಯ ಜನ ಆತಂಕಕ್ಕೆ ಒಳಗಾಗಿದ್ದಾರೆ.
ತುಮಕೂರು: ಜಿಲ್ಲೆಯಲ್ಲಿ ಕೊರೊನಾ(Coronavirus) ಸೋಂಕಿಗೆ ಹಲವಾರು ಮಂದಿ ಬಲಿಯಾಗಿದ್ದಾರೆ. ಇದರ ನಡುವೆ ಲಾಕ್ಡೌನ್(Lockdown) ಆಗಿದ್ದ ಮೂರು ತಿಂಗಳಲ್ಲಿ ಬರೋಬ್ಬರಿ 80 ನವಜಾತ ಶಿಶುಗಳು(Infant), 18 ತಾಯಂದಿರು(Mothers) ಮೃತಪಟ್ಟಿದ್ದಾರೆ. ಅರಿವಿನ ಕೊರತೆ, ಸಮಯಕ್ಕೆ ಸರಿಯಾಗಿ ಸಿಗದ ವೈದ್ಯಕೀಯ ಸೇವೆ, ಕಡಿಮೆ ತೂಕ, ಅಪೌಷ್ಠಿಕತೆ, ಹೃದಯ ಸಂಬಂಧಿ ಸಮಸ್ಯೆ, ಅವಧಿಗೆ ಮುಂಚೆ ಹೆರಿಗೆ ಸೇರಿ ಹಲವು ಕಾರಣಗಳಿಂದ ತಾಯಿ ಮತ್ತು ಶಿಶುಗಳು ಮೃತಪಟ್ಟಿದ್ದಾರೆ.
ಕಳೆದ ಏಪ್ರಿಲ್, ಮೇ, ಜೂನ್ನಲ್ಲಿ ನವಜಾತ ಶಿಶುಗಳ ಮರಣ ಪ್ರಮಾಣ ಏರಿಕೆಯಾಗಿದೆ. ಏಪ್ರಿಲ್ನಲ್ಲಿ 20, ಮೇನಲ್ಲಿ 32, ಜೂನ್ನಲ್ಲಿ 28 ಶಿಶುಗಳು ಮೃತಪಟ್ಟಿವೆ. ಲಾಕ್ಡೌನ್ ಹಾಗೂ ಕೊವಿಡ್ ಹಿನ್ನೆಲೆಯಲ್ಲಿ ಜಿಲ್ಲಾ ಆಸ್ಪತ್ರೆ ಸೇರಿದಂತೆ ಖಾಸಗಿ ಆಸ್ಪತ್ರೆಗಳಲ್ಲೂ ಕೊವಿಡ್ ಚಿಕಿತ್ಸೆಗೆ ಹೆಚ್ಚಿನ ಒತ್ತು ಕೊಡಲಾಗಿತ್ತು. ಕೊವಿಡ್ ಚಿಕಿತ್ಸೆ ನೀಡುತ್ತಿದ್ದ ಆಸ್ಪತ್ರೆಗೆ ನಾನ್ ಕೋವಿಡ್ ರೋಗಿಗಳು ಹೋಗಲು ಹಿಂದೇಟು ಹಾಕ್ತಿದ್ರು. ಹೀಗಾಗಿ ನವಜಾತ ಶಿಶುಗಳು ಮತ್ತು ತಾಯಂದಿರ ಮರಣ ಪ್ರಮಾಣ ಏರಿಕೆಯಾಗಿದೆ. ಹೀಗಾಗಿ ಯಾವುದೇ ಹಿಂಜರಿಕೆಯಿಲ್ಲದೇ ಆಸ್ಪತ್ರೆಗೆ ಬನ್ನಿ ಅಂತಾ ಡಿಹೆಚ್ಒ ಜನರಲ್ಲಿ ಮನವಿ ಮಾಡಿದ್ದಾರೆ.
ನವಜಾತ ಶಿಶುಗಳ ರೀತಿಯಲ್ಲೇ ಗರ್ಭಿಣಿಯರು, ಬಾಣಂತಿಯರ ಮರಣ ಪ್ರಮಾಣವೂ ಹೆಚ್ಚಳವಾಗಿದೆ. ನವಜಾತ ಶಿಶುಗಳು, ಗರ್ಭಿಣಿಯರು, ಬಾಣಂತಿಯ ಮರಣ ತಡೆಗೆ ಸರ್ಕಾರ ನಾನಾ ಕಾರ್ಯಕ್ರಮಗಳನ್ನು ಜಾರಿಗೆ ತಂದರೂ ಜಿಲ್ಲೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮರಣ ಪ್ರಮಾಣ ಇಳಿಕೆಯಾಗ್ತಿಲ್ಲ. ಅದರಲ್ಲೂ ಕೊವಿಡ್ ಉಲ್ಬಣವಾದ ಬಳಿಕ ತಾಯಿ ಮತ್ತು ನವಜಾತಶಿಶುಗಳ ಮರಣ ಪ್ರಮಾಣ ಹೆಚ್ಚಾಗಿದ್ದು ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ.
ಇದನ್ನೂ ಓದಿ: ಉತ್ತರ ಕರ್ನಾಟಕ ಸ್ಪೇಷಲ್ ಕೊಬ್ಬರಿ ಕಡ್ಡಿ; ಈ ತಿಂಡಿ ಮಾಡುವುದು ತುಂಬಾ ಸುಲಭ
(during lockdown more than 80 Infant and 18 mother died over no treatment in tumkur says report)
Published On - 7:47 am, Tue, 3 August 21