ಉತ್ತರ ಕರ್ನಾಟಕ ಸ್ಪೇಷಲ್ ಕೊಬ್ಬರಿ ಕಡ್ಡಿ; ಈ ತಿಂಡಿ ಮಾಡುವುದು ತುಂಬಾ ಸುಲಭ
ದಿನಕ್ಕೊಂದು ಹೊಸ ರೀತಿಯ ಅಡುಗೆ ಮಾಡುವುದು ಮತ್ತು ಆ ಮೂಲಕ ಮನೆಯವರನ್ನು ಸಂತೋಷಪಡಿಸುವುದು ಹೇಗೆ ಎಂಬ ಗೊಂದಲದಲ್ಲಿರುವವರಿಗಾಗಿ ಇಂದಿನ ಅಡುಗೆ. ಹಾಗಿದ್ದರೆ ಉತ್ತರ ಕರ್ನಾಟಕ ಸ್ಪೇಷಲ್ ಕೊಬ್ಬರಿ ಕಡ್ಡಿ ಮಾಡುವುದು ಹೇಗೆ ಎಂದು ತಿಳಿದುಕೊಳ್ಳೋಣ.
ಮನೆಯಲ್ಲಿ ಹೊಸತೇನಾದರೂ ತಿಂಡಿ ಮಾಡಿ ಮಕ್ಕಳಿಗೆ ಬಡಿಸಬೇಕು ಎಂಬ ಆಸೆ ಎಲ್ಲಾ ಅಮ್ಮಂದಿರದ್ದು, ಹೀಗಾಗಿ ಮಕ್ಕಳಿಗೆ ಹಿಡಿಸುವ ಹಾಗೆ ಸದಾ ನೂತನ ಶೈಲಿಯ ಮೊರೆ ಹೋಗುತ್ತಾರೆ. ತರಕಾರಿ ಇಷ್ಟ ಪಡದ ಮಕ್ಕಳಿಗೆ ಪೋಷಕಾಂಶ ದೊರೆಯುವಂತೆ ಮಾಡಬೇಕು ಎಂಬ ಹಂಬಲದಲ್ಲಿ ಮಾಡುವ ಅಡುಗೆಯನ್ನು ಹೆಚ್ಚು ಆಕರ್ಷಕವಾಗಿಸುತ್ತಾರೆ. ಹೇಗೆ ದಿನಕ್ಕೊಂದು ಹೊಸ ರೀತಿಯ ಅಡುಗೆ ಮಾಡುವುದು ಮತ್ತು ಆ ಮೂಲಕ ಮನೆಯವರನ್ನು ಸಂತೋಷಪಡಿಸುವುದು ಹೇಗೆ ಎಂಬ ಗೊಂದಲದಲ್ಲಿರುವವರಿಗಾಗಿ ಇಂದಿನ ಅಡುಗೆ. ಹಾಗಿದ್ದರೆ ಉತ್ತರ ಕರ್ನಾಟಕ ಸ್ಪೇಷಲ್ ಕೊಬ್ಬರಿ ಕಡ್ಡಿ ಮಾಡುವುದು ಹೇಗೆ ಎಂದು ತಿಳಿದುಕೊಳ್ಳೋಣ.
ಉತ್ತರ ಕರ್ನಾಟಕದ ಸ್ಪೇಷಲ್ ಕೊಬ್ಬರಿ ಕಡ್ಡಿ ಮಾಡಲು ಬೇಕಾಗುವ ಸಾಮಾಗ್ರಿಗಳು ಹಸಿ ಮೆಣಸಿನಕಾಯಿ, ಕೊಬ್ಬರಿ ತುರಿ, ಕೊತ್ತಂಬರಿ ಸೊಪ್ಪು, ಕರಿಬೇವು, ಶುಂಠಿ, ಬೆಳ್ಳುಳ್ಳಿ, ಜೀರಿಗೆ, ಕೊತ್ತಂಬರಿ ಕಾಳು, ಕಡಲೆ ಹಿಟ್ಟು, ಅಕ್ಕಿ ಹಿಟ್ಟು.
ಉತ್ತರ ಕರ್ನಾಟಕದ ಸ್ಪೇಷಲ್ ಕೊಬ್ಬರಿ ಕಡ್ಡಿ ಮಾಡುವ ವಿಧಾನ:
ಒಂದು ಮಿಕ್ಸಿ ಜಾರಿಗೆ ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಕರಿಬೇವು, ಶುಂಠಿ, ಬೆಳ್ಳುಳ್ಳಿ, ಜೀರಿಗೆ, ಕೊತ್ತಂಬರಿ ಕಾಳು, ಕೊಬ್ಬರಿ ತುರಿ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ಬಳಿಕ ಬೌಲ್ಗೆ ಕಡಲೆ ಹಿಟ್ಟು, ಅಕ್ಕಿ ಹಿಟ್ಟು. ಕೊತ್ತಂಬರಿ ಸೊಪ್ಪು, ಉಪ್ಪು, ರುಬ್ಬಿದ ಮಿಶ್ರಣ ಹಾಕಿ ಚೆನ್ನಾಗಿ ಕಲಸಿಟ್ಟುಕೊಳ್ಳಿ. ಬಳಿಕ ಕಡ್ಡಿ ಆಕಾರಕ್ಕೆ ಮಾಡಿ. ನಂತರ ಒಂದು ಬಣಾಲೆಗೆ ಅಡುಗೆ ಎಣ್ಣೆ ಹಾಕಿ ಅದು ಕಾದ ಮೇಲೆ, ಕಡ್ಡಿಗನ್ನು ಹಾಕಿ ಕರಿಯಿರಿ. ಈಗ ರುಚಿಕರವಾದ ಉತ್ತರ ಕರ್ನಾಟಕದ ಸ್ಪೇಷಲ್ ಕೊಬ್ಬರಿ ಕಡ್ಡಿ ಸವಿಯಲು ಸಿದ್ಧ.
ಇದನ್ನೂ ಓದಿ:
ಖಾರ ಕಾಳು ಕಡುಬು; ಸಂಜೆ ಹೊತ್ತಿಗೆ ಮಾಡಿ ಕುಟುಂಬದವರ ಜತೆ ಸವಿಯಿರಿ