ಮುನ್ನೂರಕ್ಕಿಂತ ಹೆಚ್ಚು ಅಮಾಯಕ ನಾಯಿಗಳನ್ನು ಕೊಂದವರಿಗೆ ಕಠಿಣ ಶಿಕ್ಷೆಯಾಗಲೇ ಬೇಕು ಅನ್ನುತ್ತಿದ್ದಾರೆ ನೆಟ್ಟಿಗರು
ನಿಷ್ಕಾರಣವಾಗಿ ನಿಷ್ಕರುಣೆಯಿಂದ ನಾಯಿಗಳನ್ನು ಕೊಂದಿರುವವರು ಅವುಗಳ ಕಾಟ ಅಥವಾ ಸಂಖ್ಯೆ ಕಡಿಮೆ ಮಾಡಬೇಕು ಅಂತ ಅಂದುಕೊಂಡಿದ್ದರೆ, ಅವುಗಳಿಗೆ ಪಶುವೈದ್ಯರಿಂದ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿದ್ದರೆ ಅವರ ಉದ್ದೇಶ ಈಡೇರುತಿತ್ತು ಮತ್ತು ಪಾಪದ ನಾಯಿಗಳ ಜೀವವೂ ಉಳಿಯುತಿತ್ತು.
ಪಶ್ಚಿಮ ಗೋದಾವರಿ: ಇದೊಂದು ಬರ್ಬರ ಮತ್ತು ಅಮಾನವೀಯ ಕೃತ್ಯವೆಂದು ಜರಿದರೆ ಅದು ಅಂಡರ್-ಸ್ಟೇಟ್ಮೆಂಟ್ ಅನಿಸಿಕೊಳ್ಳುತ್ತದೆ. ಈ ಕೃತ್ಯವೆಸಗಿದವರಿಗೆ ಎಂಥ ಘೋರ ಶಿಕ್ಷೆ ವಿಧಿಸಿದರೂ ಅದು ಕಡಿಮೆಯೇ. ಆಂಧ್ರ ಪ್ರದೇಶದ ಪಶ್ಚಿಮ ಸಿಬ್ಬಂದಿ ಎಸಗಿರುವ ದುಷ್ಕೃತ್ಯ ಇದು. ಸದರಿ ಪಂಚಾಯತ್ ವ್ಯಾಪ್ತಿಯಲ್ಲಿ ನಾಯಿಗಳು ತಮ್ಮ ಪಾಡಿಗೆ ತಾವು ಬದುಕಿಕೊಂಡಿದ್ದವು. ಆದರೆ, ಪಂಚಾಯತ್ ಸಿಬ್ಬಂದಿ ಅವುಗಳ ಉಪಟಳ ಜಾಸ್ತಿಯಾಗಿದೆ ಎಂಬ ನೆಪ ಮುಂದೊಡ್ಡಿ ಆ ಪ್ರದೇಶದಲ್ಲಿದ್ದ 300 ಕ್ಕೂ ಹೆಚ್ಚು ನಾಯಿಗಳನ್ನು ವಿಷವಿಕ್ಕಿ ಕೊಂದಿದ್ದಾರೆ. ಹೌದು ಏನೂ ಅರಿಯದ ಮೂಕ ಪ್ರಾಣಿಗಳ ಸಾಮೂಹಿಕ ಹತ್ಯೆ ನಡೆದಿದೆ.
ನಿಷ್ಕಾರಣವಾಗಿ ನಿಷ್ಕರುಣೆಯಿಂದ ನಾಯಿಗಳನ್ನು ಕೊಂದಿರುವವರು ಅವುಗಳ ಕಾಟ ಅಥವಾ ಸಂಖ್ಯೆ ಕಡಿಮೆ ಮಾಡಬೇಕು ಅಂತ ಅಂದುಕೊಂಡಿದ್ದರೆ, ಅವುಗಳಿಗೆ ಪಶುವೈದ್ಯರಿಂದ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿದ್ದರೆ ಅವರ ಉದ್ದೇಶ ಈಡೇರುತಿತ್ತು ಮತ್ತು ಪಾಪದ ನಾಯಿಗಳ ಜೀವವೂ ಉಳಿಯುತಿತ್ತು. ಆದರೆ ಈ ಕಟುಕರಿಗೆ ಕೊಂದು ಕೆರೆ ಪಕ್ಕ ಹೂತು ಬಿಡುವುದೇ ಸುಲಭ ಅನಿಸಿದೆ.
ಪ್ರಾಣಿ ದಯಾಸಂಘದವರಿಗೆ ವಿಷಯ ತಡವಾಗಿ ಗೊತ್ತಾಗಿದೆ. ಕೂಡಲೇ ಕಾರ್ಯಪ್ರವೃತ್ತರಾದ ಅವರು ಲಿಂಗಪಾಳ್ಯಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದರಿ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ
ನೆಟ್ಟಿಗರು ನಾಯಿಗಳ ಮಾರಣಹೋಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ಪ್ರಾಣಿದಯಾ ಸಂಘದವರೇನು ಕಣ್ಣುಮುಚ್ಚಿಕೊಂಡು ಕೂತಿದ್ದಾರೆಯೇ ಅಂತ ಕೆಲವರು ಕೇಳಿದರೆ, ಬೇರೆಯವರು ಆಂಧ್ರ ಪ್ರದೇಶದ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರನ್ನು ಟ್ಯಾಗ್ ಮಾಡಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಿ ಅಂತ ಕೋರುತ್ತಿದ್ದಾರೆ.
ಇದನ್ನೂ ಓದಿ: Dudhsagar waterfalls: ಧುಮ್ಮಿಕ್ಕುತ್ತಿರುವ ದೂಧ್ಸಾಗರ್, ತೆರಳಲು ಸಾಧ್ಯವಾಗದೇ ಜಲಪಾತದೆದುರೇ ನಿಂತ ರೈಲು; ವಿಡಿಯೊ ನೋಡಿ