ಅರ್ಚಕ ನೇಮಕಾತಿ: ತುರುವೇಕೆರೆ ದೇವಸ್ಥಾನದ ಪ್ರಾಂಗಣದಲ್ಲೂ ಮೂಗಿಗೆ ಬಡಿಯುತ್ತಿದೆ ರಾಜಕೀಯ ದುರ್ನಾತ!

ಸಂಕ್ರಾಂತಿ ಮುಂಚಿನ ದಿನವೇ ದೇವಸ್ಥಾನದಲ್ಲಿ ಅರ್ಚಕರನ್ನು ಬದಲಿಸಲಾಗಿದೆ. ಕೃಷ್ಣಮೂರ್ತಿ ಬದಲಾಗಿ ಗೋವಿಂದರಾಜು ಪೂಜಾ ಕೈಂಕರ್ಯ ಮಾಡುತ್ತಿದ್ದಾರೆ. ಧರ್ಮದ ಸ್ಥಳ ದೇವಸ್ಥಾನದಲ್ಲೂ ಅಧರ್ಮದ ರಾಜಕಾರಣ ನುಸುಳಿದ್ದು ಮಾತ್ರ ಆಘಾತಕಾರಿಯಾಗಿದೆ.

ಅರ್ಚಕ ನೇಮಕಾತಿ: ತುರುವೇಕೆರೆ ದೇವಸ್ಥಾನದ ಪ್ರಾಂಗಣದಲ್ಲೂ ಮೂಗಿಗೆ ಬಡಿಯುತ್ತಿದೆ ರಾಜಕೀಯ ದುರ್ನಾತ!
ತುರುವೇಕೆರೆ ದೇವಸ್ಥಾನದ ಪ್ರಾಂಗಣದಲ್ಲೂ ಮೂಗಿಗೆ ಬಡಿಯುತ್ತಿದೆ ರಾಜಕೀಯ ದುರ್ನಾತ!
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jan 19, 2023 | 3:54 PM

ತುಮಕೂರು ಗ್ರಾಮಾಂತರದಲ್ಲಿ ದೇವರ ಉತ್ಸವಕ್ಕಾಗಿ ಜೆಡಿಎಸ್, ಬಿಜೆಪಿ ಮುಖಂಡರು ಕಿತ್ತಾಟ ಮಾಡಿಕೊಂಡ ಘಟನೆ ಬೆನ್ನಲ್ಲೇ ತುರುವೇಕೆರೆ (turuvekere) ಕ್ಷೇತ್ರದಲ್ಲೂ ಇಂಥದ್ದೇ ಒಂದು ಘಟನೆ ಬೆಳಕಿಗೆ ಬಂದಿದೆ. ದೇವಸ್ಥಾನವೊಂದರ (temple) ಅರ್ಚಕ ಜೆಡಿಎಸ್ ಬೆಂಬಲಿತನಾಗಿದ್ದು ಆತನನ್ನು ಪದಚ್ಚುತಿಗೊಳಿಸಿ ಬಿಜೆಪಿ ಶಾಸಕ ತಮ್ಮ ಬೆಂಬಲಿಗನಿಗೆ ಅರ್ಚಕ ಹುದ್ದೆ (archaka) ಕೊಡಿಸಿದ್ದಾರೆ ಎಂಬ ಆರೋಪ ತೀವ್ರ ಸಂಚಲನ ಮೂಡಿಸಿದೆ. ಹೌದು, ‌ಚುನಾವಣೆ ಸಮೀಪಿಸುತಿದ್ದಂತೆ ರಾಜಕೀಯದ ಸೋಂಕು ಪ್ರತಿ ಕ್ಷೇತ್ರಕ್ಕೂ ಜೋರಾಗಿ ಅಂಟಿಕೊಳ್ಳುತಿದೆ. ಗುಡಿಯಲ್ಲಿರುವ ದೇವರಿಗೂ ಪಕ್ಷದ ಪಟ್ಟ ಕಟ್ಟಲಾಗುತ್ತಿದೆ. ಮೊನ್ನೆ ಮಂಗಳವಾರ ತುಮಕೂರಿನ ಗ್ರಾಮಾಂತರದಲ್ಲಿ ಜೆಡಿಎಸ್ (jds) ಮತ್ತು ಬೆಜೆಪಿ (bjp) ಮುಖಂಡರುಗಳು ಪ್ರತ್ಯೇಕವಾಗಿ ದೇವಸ್ಥಾನ ಕಟ್ಟಿ ಉತ್ಸವಕ್ಕಾಗಿ ಕಿತ್ತಾಟ ಮಾಡಿಕೊಂಡ ಘಟನೆ ನಮ್ಮ ಕಣ್ಣಮುಂದೆ ಇದೆ.

ಇದರ ಜೊತೆಗೆ ತುರುವೇಕೆರೆ ಕ್ಷೇತ್ರ ಸಿಎಸ್ ಪುರದ ಅವ್ವೇರಹಳ್ಳಿಯಲ್ಲೂ ದೇವಸ್ಥಾನದ ಪೂಜೆ ಮಾಡುವ ಅರ್ಚಕರಿಗೂ ಜೆಡಿಎಸ್ ಹಾಗೂ ಬಿಜೆಪಿ ಪಕ್ಷದ ಪಟ್ಟ ಕಟ್ಟಲಾಗಿದೆ. ಇಲ್ಲಿನ ನರಸಿಂಹಸ್ವಾಮಿ ಹಾಗೂ ಆಂಜನೇಯಸ್ವಾಮಿ ದೇವಸ್ಥಾನದ ಮೂಲ ಅರ್ಚಕ ಕೃಷ್ಣಮೂರ್ತಿ ಜೆಡಿಎಸ್ ಬೆಂಬಲಿತ ಅನ್ನೋ ಕಾರಣಕ್ಕೆ ಆ ಕುಟುಂಬದಿಂದ ಪೂಜೆ ಮಾಡುವ ಹಕ್ಕನ್ನು ಕಿತ್ತುಕೊಂಡು ಬಿಜೆಪಿ ಶಾಸಕ ಮಸಾಲಾ ಜಯರಾಮ್ ಅವರ ಬೆಂಬಲಿಗ ಗೋವಿಂದರಾಜು ಅನ್ನುವವರಿಗೆ ಕೊಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಜಿಲ್ಲಾಧಿಕಾರಿ ಹಾಗೂ ಸರ್ಕಾರದ ಮೇಲೆ ಪ್ರಭಾವ ಬೀರಿ ಶಾಸಕ ಮಸಾಲಾ ಜಯರಾಮ್ ಆದೇಶ ಹೊರಡಿಸಿ ತಮ್ಮ ಬೆಂಬಲಿಗರಿಗೆ ಪೂಜೆ ಮಾಡಲು ಅವಾಕಾಶ ಕೊಟ್ಟಿದ್ದಾರೆ ಎಂದು ಮೂಲ ಅರ್ಚಕ ಕೃಷ್ಣಮೂರ್ತಿ ಸುದ್ದಿಗೋಷ್ಠಿ ನಡೆಸಿ ಆರೋಪಿಸಿದ್ದಾರೆ.

ಇದನ್ನೂ ಓದಿ:

ಆನೆ ನಡೆದಿದ್ದೇ ದಾರಿ ಎಂದು ಸಾಗುತ್ತಿರುವ ಜನಾರ್ದನ ರೆಡ್ಡಿಗೆ ಈ ದಿಕ್ಕಿನಿಂದ ಪೀಕಲಾಟ ಶುರುವಾಗುತ್ತೆ ಎಂದು ನಿರೀಕ್ಷಿಸಿರಲಿಲ್ಲ! ಏನದು?

ಮೂಲ ಅರ್ಚಕ ಕೃಷ್ಣಮೂರ್ತಿ ಜೆಡಿಎಸ್ ಪರ ಮತ ಪ್ರಚಾರ ಮಾಡುತ್ತಿದ್ದರು, ದೇವಸ್ಥಾನಕ್ಕೆ ಬರುವ ಭಕ್ತಾದಿಗಳಲ್ಲೂ ಜೆಡಿಎಸ್ ಪರ ವಕಾಲತ್ತು ವಹಿಸುತಿದ್ದರು ಎಂಬ ಸುಳ್ಳು ಆರೋಪವನ್ನು ಮಾಡಲಾಗಿದೆಯಂತೆ. ಈ ಹಿಂದೆ ಒಮ್ಮೆ ಇಬ್ಬರೂ ಅರ್ಚಕರಿಗೂ ಒಂದೊಂದು ವರ್ಷ ಪೂಜೆಗೆ ಅವಾಕಶ ಕಲ್ಪಿಸಿ ಜಿಲ್ಲಾಧಿಗಳು ಆದೇಶ ಹೊರಡಿಸಿದ್ದರು.

ಈ ಆದೇಶ ಪ್ರಶ್ನಿಸಿ ಕೃಷ್ಣಮೂರ್ತಿ ಕುಟುಂಬವು ಕಮಿಷನರ್ ಕೋರ್ಟ್ ಮೇಟ್ಟಿಲೇರಿದೆ. ಅದರ ವಿಚಾರಣೆ ಕೂಡ ನಡೆಯುತ್ತಿದೆ. ಇದರ ನಡುವೆ ಜಿಲ್ಲಾಧಿಕಾರಿಗಳ ಆದೇಶದ ಪ್ರತಿ ತೋರಿಸಿ ತಹಶಿಲ್ದಾರ್ ಕಚೇರಿಯ ಸಿಬ್ಬಂದಿ ನರಸಿಂಹಸ್ವಾಮಿ ಹಾಗೂ ಆಂಜನೇಯಸ್ವಾಮಿ ದೇವಸ್ಥಾನದ ಬೀಗ ಒಡೆದಿದ್ದಾರೆ. ಪೂಜೆ ಮಾಡುವ ಹಕ್ಕನ್ನು ಶಾಸಕ ಮಸಾಲಾ ಜಯರಾಮ ಬೆಂಬಲಿತ ಗೋವಿಂದರಾಜುಗೆ ಕೊಟ್ಟಿದ್ದಾರೆ ಎಂದು ಮೂಲ ಅರ್ಚಕರು ಆರೋಪಿಸಿದ್ದಾರೆ.

ಸಂಕ್ರಾಂತಿ ಮುಂಚಿನ ದಿನವೇ ದೇವಸ್ಥಾನದಲ್ಲಿ ಅರ್ಚಕರನ್ನು ಬದಲಿಸಲಾಗಿದೆ. ಕೃಷ್ಣಮೂರ್ತಿ ಬದಲಾಗಿ ಗೋವಿಂದರಾಜು ಪೂಜಾ ಕೈಂಕರ್ಯ ಮಾಡುತ್ತಿದ್ದಾರೆ. ಧರ್ಮದ ಸ್ಥಳ ದೇವಸ್ಥಾನದಲ್ಲೂ ಅಧರ್ಮದ ರಾಜಕಾರಣ ನುಸುಳಿದ್ದು ಮಾತ್ರ ಆಘಾತಕಾರಿಯಾಗಿದೆ. ಇನ್ನು ಇದೆಲ್ಲಾ ಸುಳ್ಳು ಎಂದು ಶಾಸಕ ಮಸಾಲೆ ಜಯರಾಂ ಮಾಹಿತಿ ನೀಡಿದ್ದಾರೆ.

ವರದಿ: ಮಹೇಶ್, ಟಿವಿ 9, ತುಮಕೂರು

Published On - 3:50 pm, Thu, 19 January 23

ಸಿಎಂ ಇಬ್ರಾಹಿಂ ಮತ್ತು ಜಿಟಿ ದೇವೇಗೌಡ ನೊಂದಜೀವಿ ಮತ್ತು ಸಮಾನಮನಸ್ಕರು
ಸಿಎಂ ಇಬ್ರಾಹಿಂ ಮತ್ತು ಜಿಟಿ ದೇವೇಗೌಡ ನೊಂದಜೀವಿ ಮತ್ತು ಸಮಾನಮನಸ್ಕರು
‘ಯಾರೂ ನನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಂಗಿಲ್ಲ’: ಉಗ್ರಂ ಮಂಜು ಆಜ್ಞೆ
‘ಯಾರೂ ನನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಂಗಿಲ್ಲ’: ಉಗ್ರಂ ಮಂಜು ಆಜ್ಞೆ
ಕುಮಾರಸ್ವಾಮಿ ಹೇಳಿದ್ದರಲ್ಲಿ ತಪ್ಪಿಲ್ಲ, ಮುಸ್ಲಿಂ ಮತದಾರ ಕೈಬಿಟ್ಟ: ಅಶೋಕ
ಕುಮಾರಸ್ವಾಮಿ ಹೇಳಿದ್ದರಲ್ಲಿ ತಪ್ಪಿಲ್ಲ, ಮುಸ್ಲಿಂ ಮತದಾರ ಕೈಬಿಟ್ಟ: ಅಶೋಕ
ನಾನಿಲ್ಲದಿದ್ದರೂ ಕಾಂಗ್ರೆಸ್ ಅಸ್ತಿತ್ವಕ್ಕೆ ಯಾವುದೇ ತೊಂದರೆಯಿಲ್ಲ: ಡಿಕೆಶಿ
ನಾನಿಲ್ಲದಿದ್ದರೂ ಕಾಂಗ್ರೆಸ್ ಅಸ್ತಿತ್ವಕ್ಕೆ ಯಾವುದೇ ತೊಂದರೆಯಿಲ್ಲ: ಡಿಕೆಶಿ
ಕ್ಯಾಪ್ಟನ್​ ಆಗೋಕೆ ಬಿಗ್ ಬಾಸ್ ಬೆಡ್​ರೂಂನಲ್ಲಿ ದೊಡ್ಡ ಡೀಲಿಂಗ್
ಕ್ಯಾಪ್ಟನ್​ ಆಗೋಕೆ ಬಿಗ್ ಬಾಸ್ ಬೆಡ್​ರೂಂನಲ್ಲಿ ದೊಡ್ಡ ಡೀಲಿಂಗ್
ಸಾಯೋವರೆಗೂ ಕುಮಾರಣ್ಣ ಮತ್ತು ದೇವೇಗೌಡರ ಜೊತೆ ಇರ್ತೀವಿ :ಸಾರಾ ಮಹೇಶ್
ಸಾಯೋವರೆಗೂ ಕುಮಾರಣ್ಣ ಮತ್ತು ದೇವೇಗೌಡರ ಜೊತೆ ಇರ್ತೀವಿ :ಸಾರಾ ಮಹೇಶ್
ನೋಡ ನೋಡ್ತಿದ್ದಂತೆಯೇ ಹತ್ತಾರು ಲೀಟರ್ ಹಾಲು ರಸ್ತೆಗೆ ಸುರಿದರು!
ನೋಡ ನೋಡ್ತಿದ್ದಂತೆಯೇ ಹತ್ತಾರು ಲೀಟರ್ ಹಾಲು ರಸ್ತೆಗೆ ಸುರಿದರು!
ವಕ್ಫ್ ಬೋರ್ಡ್ ವಿರುದ್ಧ 5 ಜಿಲ್ಲೆಗಳಲ್ಲಿ ನಡೆಯಲಿದೆ ಯತ್ನಾಳ್ ತಂಡದ ಅಭಿಯಾನ
ವಕ್ಫ್ ಬೋರ್ಡ್ ವಿರುದ್ಧ 5 ಜಿಲ್ಲೆಗಳಲ್ಲಿ ನಡೆಯಲಿದೆ ಯತ್ನಾಳ್ ತಂಡದ ಅಭಿಯಾನ
ಪಾರ್ಕಿಂಗ್ ವಿಚಾರವಾಗಿ ಜಗಳ, ವ್ಯಕ್ತಿಗೆ ಮನಬಂದಂತೆ ಥಳಿಸಿದ ಗುಂಪು
ಪಾರ್ಕಿಂಗ್ ವಿಚಾರವಾಗಿ ಜಗಳ, ವ್ಯಕ್ತಿಗೆ ಮನಬಂದಂತೆ ಥಳಿಸಿದ ಗುಂಪು
ಜನಪ್ರತಿನಿಧಿಗಳ ನಿರ್ಲಕ್ಷ್ಯ ಜಲಾಶಯದಲ್ಲಿ ಸೋರುವಿಕೆಗೆ ಕಾರಣವಾಯಿತೆ?
ಜನಪ್ರತಿನಿಧಿಗಳ ನಿರ್ಲಕ್ಷ್ಯ ಜಲಾಶಯದಲ್ಲಿ ಸೋರುವಿಕೆಗೆ ಕಾರಣವಾಯಿತೆ?