AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತುಮಕೂರಿನಲ್ಲಿ ಗೃಹಿಣಿ ಸಾವು, 12 ವರ್ಷಗಳ ದಾಂಪತ್ಯಕ್ಕೆ ತಿಲಾಂಜಲಿ ಇಟ್ಟನಾ ಗಂಡ?

12 ವರ್ಷ ಹಿಂದೆ ಮಣವಿನಕುರಿಕೆ ಗ್ರಾಮದ ಅಫೀಜಾ ಬಾನು, ತುಮಕೂರಿನ ಅಬ್ದುಲ್ ಸತ್ತಾರ್ ಶೇಖ್ ಗೆ ಮದುವೆ ಆಗಿತ್ತು. ಗ್ಯಾರೇಜ್ ಇದೆ ಅಂತಾ ಸುಳ್ಳು ಹೇಳಿ ಅಬ್ದುಲ್ ಸತ್ತಾರ್ ಮದುವೆ ಮಾಡಿಕೊಂಡಿದ್ದರಂತೆ. ಅಲ್ಲದೇ ವರದಕ್ಷಿಣೆ ಪಡೆದು ಮದುವೆಯಾದ ದಿನದಿಂದಲೂ ಒಂದಿಲ್ಲದ ಒಂದು ರೀತಿಯಲ್ಲಿ ಕಿರುಕುಳ ನೀಡಿದ್ದನಂತೆ.

ತುಮಕೂರಿನಲ್ಲಿ ಗೃಹಿಣಿ ಸಾವು, 12 ವರ್ಷಗಳ ದಾಂಪತ್ಯಕ್ಕೆ ತಿಲಾಂಜಲಿ ಇಟ್ಟನಾ ಗಂಡ?
ತುಮಕೂರಿನಲ್ಲಿ ಗೃಹಿಣಿ ಸಾವು
ಮಹೇಶ್ ಇ, ಭೂಮನಹಳ್ಳಿ
| Updated By: ಸಾಧು ಶ್ರೀನಾಥ್​|

Updated on:Aug 09, 2023 | 8:42 AM

Share

ಅವರು 12 ವರ್ಷಗಳ ಹಿಂದೆ ಮದುವೆಯಾಗಿದ್ದ ಜೋಡಿ,ತನ್ನ ಮಗಳು ಸುಖವಾಗಿ ಬಾಳಲಿ ಅಂತಾ ತಂದೆ ತಾಯಿ ಒಂದು ಲಕ್ಷ ಹಣ ಜೊತೆಗೆ ಬೈಕ್ ನೀಡಿ ಗ್ರಾಂಡ್ ಆಗಿ ಮದುವೆ ಮಾಡಿಕೊಟ್ಟಿದ್ದರು,ಆದರೆ ಆ ಗಂಡ ಮಾತ್ರ ಮಾಡಿದ್ದು ಬೇರೆ,ಕಟ್ಟಿಕೊಂಡ ಪತ್ನಿಗೆ ಇನ್ನಿಲ್ಲದ ಕಿರುಕುಳ ನೀಡಿ ಪತ್ನಿಯನ್ನ ಸಾಯುವಂತೆ ಮಾಡಿದ್ದಾನೆ. ಅಂದಹಾಗೇ ತುಮಕೂರಿನ (Tumkur) ನಜರಬಾದ್ ನಲ್ಲಿ ವಾಸವಿದ್ದ ಗೃಹಿಣಿ (woman) ಅಫೀಜಾ ಬಾನು ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಾಳೆ.ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು ಕುಟುಂಬಸ್ಥರು ಕೊಲೆ ಮಾಡಿರುವ ಶಂಕೆ ವ್ಯಕ್ತಪಡಿಸಿದ್ದಾರೆ.

ಕಳೆದ 12 ವರ್ಷಗಳ ಹಿಂದೆ ಕೊರಟಗೆರೆ ತಾಲೂಕಿನ ಮಣವಿನಕುರಿಕೆ ಗ್ರಾಮದ ಅಫೀಜಾ ಬಾನು ಹಾಗೂ ತುಮಕೂರಿನ ಅಬ್ದುಲ್ ಸತ್ತಾರ್ ಶೇಖ್ ಗೆ ಮದುವೆ ಆಗಿತ್ತು. ಮೆಕಾನಿಕ್ ಕೆಲಸ ಗ್ಯಾರೇಜ್ ಇದೆ ಅಂತಾ ಸುಳ್ಳು ಹೇಳಿ ಅಬ್ದುಲ್ ಸತ್ತಾರ್ ಮದುವೆ ಮಾಡಿಕೊಂಡಿದ್ದರಂತೆ.ಅಲ್ಲದೇ ವರದಕ್ಷಿಣೆ ಪಡೆದು ಮದುವೆಯಾದ ದಿನದಿಂದಲೂ ಒಂದಿಲ್ಲದ ಒಂದು ರೀತಿಯಲ್ಲಿ ಕಿರುಕುಳ ನೀಡಿದ್ದಾನಂತೆ,ಜೊತೆಗೆ ಹಲವಾರು ಬಾರಿ ರಾಜೀ ಪಂಚಾಯತಿ ಮಾಡಿಸಿ ಬಿಟ್ಟು ಬಂದರೂ ಪತಿ ಕಾಟ ನೀಡುತ್ತಿದ್ದನಂತೆ.ಸದ್ಯ ಪತಿಯೇ ನೇಣಿಗೆ ಹಾಕಿ ಕೊಂದಿದ್ದಾರೆ ಎಂದು ಮುಜಾಯಿದ್ ಪಾಷ, ಮೃತಳ ಸಹೋದರ ಆರೋಪಿಸಿದ್ದಾರೆ.

ಮದುವೆ ಮಾಡಿಕೊಡುವಾಗ ಒಂದು ಲಕ್ಷ ಹಣ ಹಾಗೂ ಬೈಕ್ ಕೂಡ ಕೊಟ್ಟಿದ್ದರಂತೆ,ಆದರೂ ಮದುವೆಯಾದ ಬಳಿಕ ವರದಕ್ಷಿಣೆ ಕಿರುಕುಳ ನೀಡ್ತಿದ್ದ ಎನ್ನಲಾಗಿದೆ. 12 ವರ್ಷದಿಂದ ಕೂಡ ಆಫೀಜಾ ಬಾನು ಮನೆಯವರೇ ಪ್ರತಿಯೊಂದು ನೋಡಿಕೊಂಡು ಸಂಸಾರ ನಡೆಸಲು ಹಣ ನೀಡುತ್ತಿದ್ದರಂತೆ,ಮನೆಯೂ ಕೂಡ ಲೀಸ್ ಗೆ ಹಾಕಿಕೊಟ್ಟಿದ್ದರಂತೆ,ಕಿರುಕುಳ ಹೆಚ್ಚಾದಾಗ ನಾನು ಇಲ್ಲಿ ಇರಲ್ಲ ಅಂತಾ ಅಫೀಜಾ ಬಾನು ಹೇಳಿದಾಗ ಇಬ್ಬರು ಮಕ್ಕಳು ಇದ್ದಾರೆ, ಸಮಾಜದಲ್ಲಿ ಮರ್ಯಾದೆ ಹೋಗುತ್ತೆ, ಹೇಗೋ ಅನುಸರಿಸಿಕೊಂಡು ಹೋಗು ಅಂತಾ ಬುದ್ದಿವಾದ ಹೇಳಿ ಅಫೀಜಾ ಬಾನು ಮನೆಯವರು ಹೇಳಿಕಳಿಸಿದ್ದರಂತೆ, ಆದರೆ ಈಗ ಗಂಡನ ಕಾಟಕ್ಕೆ ಪತ್ನಿ ಸಾವನ್ನಪ್ಪಿದ್ದು ಆರೋಪಿಗೆ ತಕ್ಕ ಶಿಕ್ಷೆ ಆಗಬೇಕೆಂದು ಒತ್ತಾಯಿಸಿದ್ದಾರೆ ಮೃತಳ ತಾಯಿ‌ ಶಂಶಾಜ್ ಬಾನು.

Also  Read: ಧಾವಂತದಲ್ಲಿದ್ದ ರಾಮನಗರ ಆಯುಕ್ತ: ಹಿಂದಿನಿಂದ ಬೈಕ್​​ಗೆ ಗುದ್ದಿದ ಆಯುಕ್ತ ನಾಗೇಶ್ ಕಾರು, 21 ವರ್ಷದ ಯುವತಿ ಸ್ಥಳದಲ್ಲೇ ಸಾವು

ಒಟ್ಟಾರೆ ಪತಿಯ ಕಾಟಕ್ಕೆ ಪತ್ನಿ ಸಾವನ್ನಪ್ಪಿದ್ದು ಮೃತಳ ಕುಟುಂಬಸ್ಥರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ. ಸದ್ಯ ಮೇಲ್ನೋಟಕ್ಕೆ ಆತ್ಮಹತ್ಯೆ ಅಂತಾ ತಿಳಿದು ಬಂದಿದ್ದು ತಿಲಕ್ ಪಾರ್ಕ್ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಪತಿಯನ್ನು ವಶಕ್ಕೆ ಪಡೆಯಲಾಗಿದೆ.

ತುಮಕೂರು ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 8:36 am, Wed, 9 August 23