Tumakuru News: ಚರಂಡಿ ನೀರು ಹರಿದುಹೋಗುವ ವಿಚಾರಕ್ಕೆ 2 ಕುಟುಂಬಗಳ ನಡುವೆ ಗಲಾಟೆ, ಯುವಕ ಸಾವು
ಚರಂಡಿ ನೀರು ವಿಚಾರಕ್ಕೆ ಬಸವಲಿಂಗಯ್ಯ ಕುಟುಂಬದವರು ಶಿವಬಸವಯ್ಯ ಕುಟುಂಬದ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದು ಗಲಾಟೆ ವೇಳೆ ಗಾಯಗೊಂಡಿದ್ದ ಶಿವಬಸವಯ್ಯ ಪುತ್ರ ವಸಂತ್ ಮೃತಪಟ್ಟಿದ್ದಾರೆ.
ತುಮಕೂರು: ಚರಂಡಿ ನೀರು ಹರಿದುಹೋಗುವ ವಿಚಾರಕ್ಕೆ 2 ಕುಟುಂಬದ ನಡುವೆ ಗಲಾಟೆ ನಡೆದಿದ್ದು ಗಲಾಟೆಯಲ್ಲಿ ಗಾಯಗೊಂಡಿದ್ದ ವಸಂತ್ಕುಮಾರ್(24) ಮೃತಪಟ್ಟಿದ್ದಾರೆ. ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಕನ್ನುಘಟ್ಟ ಗ್ರಾಮದಲ್ಲಿ ಚರಂಡಿ ನೀರು ಹರಿದುಹೋಗುವ ವಿಚಾರಕ್ಕೆ ಶಿವಬಸವಯ್ಯ ಮತ್ತು ಬಸವಲಿಂಗಯ್ಯ ಕುಟುಂಬದ ನಡುವೆ ಮಾರಾಮಾರಿ ನಡೆದಿದೆ.
ಈ ವೇಳೆ ಬಸವಲಿಂಗಯ್ಯ ಕುಟುಂಬದವರು ಶಿವಬಸವಯ್ಯ ಕುಟುಂಬದ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದು ಗಲಾಟೆ ವೇಳೆ ಗಾಯಗೊಂಡಿದ್ದ ಶಿವಬಸವಯ್ಯ ಪುತ್ರ ವಸಂತ್ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಬಸವಲಿಂಗಯ್ಯ, ಕುಮಾರ್, ವಿಜಯ್ ಸೇರಿ 8 ಜನರ ವಿರುದ್ಧ ನೊಣವಿನಕೆರೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಇದನ್ನೂ ಓದಿ: Bengaluru: ಮದ್ಯದ ದರ ಹೆಚ್ಚಳದ ಬಗ್ಗೆ ಅಬಕಾರಿ ಸಚಿವರ ಶಾಕಿಂಗ್ ರಿಯಾಕ್ಷನ್ ಹೀಗಿದೆ
ರಸ್ತೆ ಅಪಘಾತದಲ್ಲಿ ಆಸ್ಪತ್ರೆ ಸೇರಿದ್ದ ವೃದ್ಧೆ ಸಾವು
ಬೆಂಗಳೂರಿನ ಕೆಂಗೇರಿಯ ವಿದ್ಯಾಪೀಠ ರಸ್ತೆಯಲ್ಲಿ ಕಳೆದ ತಿಂಗಳು 26ರಂದು ರಸ್ತೆ ದಾಟುವಾಗ ಲಕ್ಷ್ಮಮ್ಮ ಎಂಬ 70 ವರ್ಷದ ವೃದ್ಧೆಯ ಕಾಲಿನ ಮೇಲೆ ಲಾರಿ ಹರಿದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಲಕ್ಷ್ಮಮ್ಮರನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದ್ದಾರೆ. ಈ ಬಗ್ಗೆ ಕೆಂಗೇರಿ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
5 ವರ್ಷ ಪ್ರೀತಿಸಿ, ತಾಳಿ ಕಟ್ಟಿಸಿಕೊಂಡ ನಂತರ ಇಷ್ಟವಿಲ್ಲ ಎಂದಿದ್ದ ತಂಗಿ; ಸಹೋದರಿ ತಪ್ಪಿಗೆ ಅಣ್ಣನ ಕೊಲೆ
ಮೈಸೂರು: ನಿನ್ನೆ(ಜೂ.16) ತಾಲೂಕಿನ ಬೆಳವಾಡಿ ಗ್ರಾಮದಲ್ಲಿ ಹೇಮಂತ್ ಅಲಿಯಾಸ್ ಸ್ವಾಮಿ(23) ಎಂಬಾತನನ್ನ ಕಲ್ಲಿನಿಂದ ಜಜ್ಜಿ, ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ (Murder) ಮಾಡಲಾಗಿತ್ತು. ಇದೀಗ ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ತಂಗಿಯ ವಿಷಯವಾಗಿ ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ. ಹೌದು ಕೊಲೆಯಾದ ಯುವಕನ ತಂಗಿ, ಆರೋಪಿ ಸಾಗರ್ನನ್ನು 5 ವರ್ಷ ಪ್ರೀತಿ ಮಾಡಿ ತಾಳಿ ಕಟ್ಟಿಸಿಕೊಂಡು, ನಂತರ ಇಷ್ಟವಿಲ್ಲ ಎಂದಿದ್ದಳು. ಮದುವೆ ನಂತರವೂ ಪ್ರೀತಿ ಮಾಡಿದವಳು ಸಿಗದ ಕೋಪದಲ್ಲಿ ಸಾಗರ್ ಜೊತೆಗೆ ತನ್ನ ಸ್ನೇಹಿತರಾದ ಪ್ರತಾಪ್, ಮಂಜು ಎಂಬುವವರು ಸೇರಿ ಬರ್ಬರವಾಗಿ ಹತ್ಯೆ ಮಾಡಿ, ಪರಾರಿಯಾಗಿದ್ದಾರೆ. ಈ ಕುರಿತು ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ