ಅಪ್ರಾಪ್ತ ವಯಸ್ಸಿನ ಪತ್ನಿಯ ಕೊಂದು ಪರಾರಿಯಾಗಿದ್ದ ಆರೋಪಿಯ ಸೆರೆ
ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಆವಲಯ್ಯನ ಪಾಳ್ಯದ ನಿವಾಸಿ, 16 ವರ್ಷದ ಶೋಭಾ, ಕಳೆದ ತಿಂಗಳು 5ನೇ ತಾರೀಖು ಮನೆಯಲ್ಲಿ ಕೊಲೆಗೀಡಾಗಿದ್ದಳು. ಮನೆಯಲ್ಲಿ ಜಗಳ ತೆಗೆದು ಕತ್ತು ಹಿಸುಕಿ ಕೊಲೆ ಮಾಡಲಾಗಿತ್ತು. ಕೊಲೆ ಮಾಡಿದ್ದ ಆರೋಪದ ಮೇಲೆ ಪತಿ ಲಕ್ಷ್ಮೀಪತಿಯನ್ನ ಪೊಲೀಸರು ಬಂಧಿಸಿದ್ದಾರೆ.
ತುಮಕೂರು: ಅಪ್ರಾಪ್ತ ವಯಸ್ಸಿನ ಪತ್ನಿಯ ಕೊಂದು ಪರಾರಿಯಾಗಿದ್ದ ಆರೋಪಿಯನ್ನು ಪೋಕ್ಸೋ ಕಾಯಿದೆ ಅಡಿ ತುಮಕೂರು ಪೊಲೀಸರು ಬಂಧಿಸಿದ್ದಾರೆ. ಎಸ್ಎಸ್ಎಲ್ಸಿ ವ್ಯಾಸಂಗ ಮಾಡುತ್ತಿದ್ದ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಮದುವೆಯಾಗಿದ್ದ ಭೂಪನೊಬ್ಬ, ಕ್ಷುಲ್ಲಕ ಕಾರಣಕ್ಕೆ ಮನೆಯಲ್ಲಿ ಜಗಳ ತೆಗೆದು ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಕುಟುಂಬ ಸಮೇತ ಪರಾರಿಯಾಗಿದ್ದ. ಆರೋಪಿಯನ್ನ ಪೊಲೀಸರು ಇದೀಗ ಬಂಧಿಸಿದ್ದಾರೆ.
ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಆವಲಯ್ಯನ ಪಾಳ್ಯದ ನಿವಾಸಿ, 16 ವರ್ಷದ ಶೋಭಾ, ಕಳೆದ ತಿಂಗಳು 5ನೇ ತಾರೀಖು ಮನೆಯಲ್ಲಿ ಕೊಲೆಗೀಡಾಗಿದ್ದಳು. ಮನೆಯಲ್ಲಿ ಜಗಳ ತೆಗೆದು ಕತ್ತು ಹಿಸುಕಿ ಕೊಲೆ ಮಾಡಲಾಗಿತ್ತು. ಕೊಲೆ ಮಾಡಿದ್ದ ಆರೋಪದ ಮೇಲೆ ಪತಿ ಲಕ್ಷ್ಮೀಪತಿಯನ್ನ ಪೊಲೀಸರು ಬಂಧಿಸಿದ್ದಾರೆ.
ಅಕ್ಕನ ಮಗಳನ್ನೆ ಕೊಂದಿದ್ದ ಲಕ್ಷ್ಮೀ‘ಪತಿ‘! ಇನ್ನು ಲಕ್ಷ್ಮೀಪತಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡಿಕೊಂಡಿದ್ದ. ಗ್ರಾಮದಲ್ಲಿಯೇ ಇದ್ದ ತನ್ನ ಅಕ್ಕನ ಮಗಳಾದ ಶೋಭಾಳನ್ನ ಇನ್ನೂ ಓದುತ್ತಿರುವಾಗಲೇ 2020 ನೇ ಮಾರ್ಚ್ 23 ರಂದು ಮದುವೆಯಾಗಿದ್ದ. ಈ ಬಗ್ಗೆ ಸ್ಥಳೀಯ ಅಂಗನವಾಡಿ ಆಶಾ ಕಾರ್ಯಕರ್ತೆ ಮತ್ತು ಆರೋಗ್ಯ ಕಿರಿಯ ಸಹಾಯಕಿ ಮನವರಿಕೆ ಮಾಡಿಕೊಟ್ಟಿದ್ದರು. 18 ವರ್ಷ ತುಂಬುವವರೆಗೂ ಬಾಲಕಿಗೆ ಮದುವೆ ಮಾಡುವುದಿಲ್ಲ ಅಂತಾ ಪೋಷಕರಿಂದ ಪತ್ರ ಬರೆಸಿ ಕೊಂಡಿದ್ದರು. ಆದರೂ ಅಧಿಕಾರಿಗಳ ಸೂಚನೆ ಧಿಕ್ಕರಿಸಿ ಮದುವೆ ಆಗಿತ್ತು ಎನ್ನಲಾಗಿದೆ.
ಲಕ್ಷ್ಮೀ ಪತಿ ವಿರುದ್ಧ ಕೊಲೆ ಹಾಗೂ ಪೋಕ್ಸೋ ದೂರು: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ನೀಡಿದ ದೂರಿನ ಅನ್ವಯ ಲಕ್ಷ್ಮೀಪತಿ ವಿರುದ್ಧ ಕೊಲೆ ಹಾಗೂ ಪೋಕ್ಸೋ ದೂರು ದಾಖಲಾಗಿದೆ. ಆತನ ತಂದೆ ಮತ್ತು ಬಾಲಕಿಯ ತಂದೆ ತಾಯಿ ವಿರುದ್ಧವೂ ಪೋಕ್ಸೋ ಕಾಯಿದೆ ಅಡಿ ಪ್ರಕರಣ ದಾಖಲಾಗಿದೆ. ಒಟ್ಟಾರೆ ಇನ್ನೂ ಓದುತ್ತಿದ್ದ ಬಾಲಕಿಯನ್ನ ಮದುವೆಯಾಗಿ ಜೀವ ತೆಗೆದಿರುವ ದರ್ಮಾರ್ಗಿಗೆ ತಕ್ಕ ಶಿಕ್ಷೆಯಾಗಬೇಕಿದೆ.
-ಮಹೇಶ್
(under aged girl killed by husband in koratagere tumkur police arrest the accused husband)