ತುಮಕೂರು: 4 ಸಹಕಾರಿ ಬ್ಯಾಂಕ್‌ಗಳಲ್ಲಿ ಹಣ ವಿಥ್‌ಡ್ರಾಗೆ ನಿರ್ಬಂಧ ವಿಧಿಸಿದ ಆರ್‌ಬಿಐ

| Updated By: ಸಾಧು ಶ್ರೀನಾಥ್​

Updated on: Jul 09, 2022 | 6:52 PM

withdrawal limit: ಈ ನಾಲ್ಕು, ಸಹಕಾರಿ ಬ್ಯಾಂಕ್‌ಗಳ ಹದಗೆಡುತ್ತಿರುವ ಹಣಕಾಸಿನ ಸ್ಥಿತಿಗತಿಗಳನ್ನು ಗಮನಿಸಿ ಕೇಂದ್ರೀಯ ಬ್ಯಾಂಕ್ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ, 1949ರ ಅಡಿಯಲ್ಲಿ ಈ ನಿರ್ಬಂಧಗಳನ್ನು ಹಾಕಿದೆ. ತುಮಕೂರಿನ ಶಾರದಾ ಮಹಿಳಾ ಸಹಕಾರಿ ಬ್ಯಾಂಕ್ ಗ್ರಾಹಕರು ಗರಿಷ್ಠ ಏಳು ಸಾವಿರ ವಿತ್ ಡ್ರಾ ಮಾಡಬಹುದಾಗಿದೆ.

ತುಮಕೂರು: 4 ಸಹಕಾರಿ ಬ್ಯಾಂಕ್‌ಗಳಲ್ಲಿ ಹಣ ವಿಥ್‌ಡ್ರಾಗೆ ನಿರ್ಬಂಧ ವಿಧಿಸಿದ ಆರ್‌ಬಿಐ
ತುಮಕೂರು: 4 ಸಹಕಾರಿ ಬ್ಯಾಂಕ್‌ಗಳ ಗ್ರಾಹಕರಿಗೆ ಹಣ ವಿಥ್‌ಡ್ರಾಗೆ ನಿರ್ಬಂಧ ವಿಧಿಸಿದ ಆರ್‌ಬಿಐ
Follow us on

ತುಮಕೂರು: ಬ್ಯಾಂಕ್‌ಗಳ ಹದಗೆಡುತ್ತಿರುವ ಹಣಕಾಸಿನ ಸ್ಥಿತಿಗತಿ ಗಮನಿಸಿ ಭಾರತೀಯ ರಿಸರ್ವ್​​ ಬ್ಯಾಂಕ್ ನಾಲ್ಕು ಸಹಕಾರಿ ಬ್ಯಾಂಕ್‌ಗಳ ಗ್ರಾಹಕರಿಗೆ ಹಣ ವಿಥ್‌ಡ್ರಾಗೆ ನಿರ್ಬಂಧ ವಿಧಿಸಿದೆ. ತುಮಕೂರಿನ ಶಾರದಾ ಮಹಿಳಾ ಸಹಕಾರಿ ಬ್ಯಾಂಕ್‌ ಲಿಮಿಟೆಡ್ ಸೇರಿದಂತೆ ಬ್ಯಾಂಕ್‌ಗಳ ಗ್ರಾಹಕರಿಗೆ ಹಣ ವಾಪಸಾತಿಗೆ ನಿರ್ಬಂಧ ವಿಧಿಸಲಾಗಿದೆ. ಇತರೆ ಮೂರು ಬ್ಯಾಂಕುಗಳೆಂದರೆ ನವದೆಹಲಿಯಲ್ಲಿರುವ ರಾಮ್‌ಗರ್ಹಿಯಾ ಸಹಕಾರಿ ಬ್ಯಾಂಕ್, ಮುಂಬೈನ ಸಾಹೇಬರಾವ್‌ ದೇಶಮುಖ ಸಹಕಾರಿ ಬ್ಯಾಂಕ್ ಮತ್ತು ಮುಂಬೈನ ಸಾಂಗಿ ಸಹಕಾರಿ ಬ್ಯಾಂಕ್‌.

ತುಮಕೂರು ಬ್ಯಾಂಕ್ ಗ್ರಾಹಕರು ಗರಿಷ್ಠ 7,000 ವಿತ್ ಡ್ರಾ ಮಾಡಬಹುದಷ್ಟೇ:

ಆರ್‌ಬಿಐನಿಂದ ಆರು ತಿಂಗಳವರೆಗೆ ಈ ನಿರ್ಬಂಧಗಳನ್ನು ವಿಧಿಸಲಾಗಿದೆ. ಇದರಲ್ಲಿ ಠೇವಣಿದಾರರಿಗೆ ಹಿಂಪಡೆಯುವ ಮಿತಿ ಸಹ ನಿಗದಿಪಡಿಸಲಾಗಿದೆ. ಈ ನಾಲ್ಕು, ಸಹಕಾರಿ ಬ್ಯಾಂಕ್‌ಗಳ ಹದಗೆಡುತ್ತಿರುವ ಹಣಕಾಸಿನ ಸ್ಥಿತಿಗತಿಗಳನ್ನು ಗಮನಿಸಿ ಕೇಂದ್ರೀಯ ಬ್ಯಾಂಕ್ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ, 1949ರ ಅಡಿಯಲ್ಲಿ ಈ ನಿರ್ಬಂಧಗಳನ್ನು ಹಾಕಿದೆ. ತುಮಕೂರಿನ ಶಾರದಾ ಮಹಿಳಾ ಸಹಕಾರಿ ಬ್ಯಾಂಕ್ ಗ್ರಾಹಕರು ಗರಿಷ್ಠ ಏಳು ಸಾವಿರ ವಿತ್ ಡ್ರಾ ಮಾಡಬಹುದಾಗಿದೆ.