ಹುಡುಗಿ ಮೊಬೈಲ್​ ವೈರಲ್​ ಮಾಡಿದ ವಿಚಾರ: ತಡರಾತ್ರಿ ಪೊಲೀಸರ ಭಯದಿಂದ ಮನೆಯಲ್ಲಿ ಯುವಕ ನೇಣಿಗೆ ಶರಣು

| Updated By: ಸಾಧು ಶ್ರೀನಾಥ್​

Updated on: Jun 02, 2021 | 2:01 PM

ತುಮಕೂರು: ಹುಡುಗಿಯ ಮೊಬೈಲ್​ ವೈರಲ್​ ಮಾಡಿದ ವಿಚಾರಕ್ಕೆ ಯುವಕನೊಬ್ಬ ನೇಣಿಗೆ ಶರಣಾಗಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ದೊಡ್ಡಗುಣಿ ಗ್ರಾಮದಲ್ಲಿ ನಡೆದಿದೆ. ಮೊಬೈಲ್ ಅಂಗಡಿ ಬಾಡಿಗೆ ವಿಚಾರಕ್ಕೆ ಆರಂಭವಾಗಿದ್ದ ಮನಸ್ತಾಪ ಯುವಕನ ಪ್ರಾಣಕ್ಕೆ ಕುತ್ತು ತಂದಿದೆ. ಎರಡು ವರ್ಷಗಳ ಹಿಂದೆ ದೊಡ್ಡಗುಣಿ ಗ್ರಾಮದಲ್ಲಿ ಮೊಬೈಲ್ ಅಂಗಡಿಯೊಂದನ್ನು ಯುವಕ ಬಾಡಿಗೆಗೆ ಪಡೆದಿದ್ದ. ಆದರೆ ಏಕಾಏಕಿ ಮಾಲೀಕರು ಅಂಗಡಿಯನ್ನು ವಾಪಸ್ ಪಡೆದಿದ್ದರು. ಇದರಿಂದ ಕೋಪಗೊಂಡ ಯುವಕ ಅಂಗಡಿ ಮಾಲೀಕರ ಹುಡುಗಿಯ ಪೋನ್ ನಂಬರ್ ಅನ್ನು ವೈರಲ್ ಮಾಡಿದ್ದ ಎನ್ನಲಾಗಿದೆ. […]

ಹುಡುಗಿ ಮೊಬೈಲ್​ ವೈರಲ್​ ಮಾಡಿದ ವಿಚಾರ: ತಡರಾತ್ರಿ ಪೊಲೀಸರ ಭಯದಿಂದ ಮನೆಯಲ್ಲಿ ಯುವಕ ನೇಣಿಗೆ ಶರಣು
ಹುಡುಗಿ ಮೊಬೈಲ್​ ವೈರಲ್​ ಮಾಡಿದ ವಿಚಾರ: ತಡರಾತ್ರಿ ಪೊಲೀಸರ ಭಯದಿಂದ ಮನೆಯಲ್ಲಿ ಯುವಕ ನೇಣಿಗೆ ಶರಣು
Follow us on

ತುಮಕೂರು: ಹುಡುಗಿಯ ಮೊಬೈಲ್​ ವೈರಲ್​ ಮಾಡಿದ ವಿಚಾರಕ್ಕೆ ಯುವಕನೊಬ್ಬ ನೇಣಿಗೆ ಶರಣಾಗಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ದೊಡ್ಡಗುಣಿ ಗ್ರಾಮದಲ್ಲಿ ನಡೆದಿದೆ. ಮೊಬೈಲ್ ಅಂಗಡಿ ಬಾಡಿಗೆ ವಿಚಾರಕ್ಕೆ ಆರಂಭವಾಗಿದ್ದ ಮನಸ್ತಾಪ ಯುವಕನ ಪ್ರಾಣಕ್ಕೆ ಕುತ್ತು ತಂದಿದೆ. ಎರಡು ವರ್ಷಗಳ ಹಿಂದೆ ದೊಡ್ಡಗುಣಿ ಗ್ರಾಮದಲ್ಲಿ ಮೊಬೈಲ್ ಅಂಗಡಿಯೊಂದನ್ನು ಯುವಕ ಬಾಡಿಗೆಗೆ ಪಡೆದಿದ್ದ. ಆದರೆ ಏಕಾಏಕಿ ಮಾಲೀಕರು ಅಂಗಡಿಯನ್ನು ವಾಪಸ್ ಪಡೆದಿದ್ದರು. ಇದರಿಂದ ಕೋಪಗೊಂಡ ಯುವಕ ಅಂಗಡಿ ಮಾಲೀಕರ ಹುಡುಗಿಯ ಪೋನ್ ನಂಬರ್ ಅನ್ನು ವೈರಲ್ ಮಾಡಿದ್ದ ಎನ್ನಲಾಗಿದೆ.

ಯುವಕ ವರುಣ ನಿನ್ನೆ ಹುಡುಗಿಯ ಪೋನ್ ನಂಬರ್ ಅನ್ನು ವೈರಲ್ ಮಾಡಿದ್ದ. ‘ಇದು ಆಂಟಿಯ ಫೋನ್​ ನಂಬರ್. ಕಾಲ್ ಮಾಡಿದರೆ ಬರ್ತಾಳೆ’ ಅಂತಾ ಮಾಲೀಕರ ಹುಡುಗಿಯ ನಂಬರ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ವರುಣ ವೈರಲ್ ಮಾಡಿದ್ದ.

ಇದರ ವಿರುದ್ಧ ಯುವತಿಯ ಪೋಷಕರು ಗುಬ್ಬಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ವರುಣನನ್ನು ಠಾಣೆಗೆ ಕರೆಸಿ, ಪೊಲೀಸರು ಥಳಿಸಿದ್ದಾರೆ ಎಂಬ ಆರೋಪ ಈಗ ಕೇಳಿಬಂದಿದೆ. ಮನೆಯಲ್ಲಿ ವಿಚಾರ ತಿಳಿಯಿತು ಅಂತಾ, ಜೊತೆಗೆ ಪೊಲೀಸರ ಭಯದಿಂದ ಹೆದರಿ ತಡರಾತ್ರಿ ಯುವಕ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ. ಗುಬ್ಬಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

(youth commits suicide over making girl mobile number viral in Gubbi taluq tumkur)

ಅಮ್ಮನ ಮೊಬೈಲ್​ಗಾಗಿ ಮಗಳ ಪರದಾಟ ಪ್ರಕರಣ; ಆಸ್ಪತ್ರೆಯಲ್ಲೂ ಸಿಗದ ಮೊಬೈಲ್