ಚಿಕಿತ್ಸೆ ಫಲಿಸದೇ ತುಮಕೂರು ವಾರ್ತಾ ಇಲಾಖೆ ಉಪನಿರ್ದೇಶಕ ಮಂಜುನಾಥ್​ ಕೊರೊನಾ ಸೋಂಕಿಗೆ ಬಲಿ

|

Updated on: May 09, 2021 | 11:02 AM

ತುಮಕೂರು ಜಿಲ್ಲೆಯ ವಾರ್ತಾ ಇಲಾಖೆ ಉಪನಿರ್ದೇಶಕ ಮಂಜುನಾಥ್​ ಕೊರೊನಾಗೆ ಬಲಿಯಾಗಿದ್ದಾರೆ. ಕಳೆದವಾರ ಕೊರೊನಾ ಪಾಸಿಟಿವ್​ ಹಿನ್ನೆಯಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೇ ಇಂದು ಕೊನೆಯುಸಿರೆಳೆದಿದ್ದಾರೆ.

ಚಿಕಿತ್ಸೆ ಫಲಿಸದೇ ತುಮಕೂರು ವಾರ್ತಾ ಇಲಾಖೆ ಉಪನಿರ್ದೇಶಕ ಮಂಜುನಾಥ್​ ಕೊರೊನಾ ಸೋಂಕಿಗೆ ಬಲಿ
ಕೊರೊನಾ ವೈರಸ್
Follow us on

ತುಮಕೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕು ಭೀತಿ ಹೆಚ್ಚುತ್ತಿದ್ದು, ಸಾವಿಗೀಡಾಗುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇಂದು ಜಿಲ್ಲೆಯ ವಾರ್ತಾ ಇಲಾಖೆ ಉಪನಿರ್ದೇಶಕ ಮಂಜುನಾಥ್​ ಕೊರೊನಾಗೆ ಬಲಿಯಾಗಿದ್ದಾರೆ. ಕಳೆದ ವಾರ ಕೊರೊನಾ ಪಾಸಿಟಿವ್​ ಹಿನ್ನೆಲೆಯಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೇ ಇಂದು ಕೊನೆಯುಸಿರೆಳೆದಿದ್ದಾರೆ.

ಕೊರೊನಾ ಪಾಸಿಟಿವ್​ ವರದಿಯಾದ ಹಿನ್ನೆಲೆಯಲ್ಲಿ ಬೆಂಗಳೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ಮಂಜುನಾಥ್ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವಿಗೀಡಾಗಿದ್ದಾರೆ.

ತುಮಕೂರಿನಲ್ಲಿ ವಿದ್ಯುತ್ ಇಲ್ಲದೆ ಕಾರಿನ ಬೆಳಕಿನಲ್ಲಿ ಅಂತ್ಯಕ್ರಿಯೆ
ವಿದ್ಯುತ್​​ ಇಲ್ಲದೇ ಕಾರಿನ ಲೈಟ್​ ಬೆಳಕಿನಲ್ಲಿ ಅಂತ್ಯಕ್ರಿಯೆ ನೆರವೇರಿಸಿದ ಘಟನೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಮುಕ್ತಿಧಾಮದಲ್ಲಿ ಕಳೆದ ರಾತ್ರಿ ನಡೆದಿದೆ.

ಹುಳಿಯಾರಿನ ರಂಗಲಕ್ಷ್ಮಮ್ಮ ಎನ್ನುವರು ಚಿಕ್ಕನಾಯಕನಹಳ್ಳಿಯ ಆಸ್ಪತ್ರೆ ಯಲ್ಲಿ ನಿಧನರಾಗಿದ್ದರು. ಮೃತದೇಹ ತರುವಷ್ಟರಲ್ಲಿ ರಾತ್ರಿಯಾಗಿತ್ತು. ವಿದ್ಯುತ್ ಇಲ್ಲದ ಕಾರಣ ಸಂಬಂಧಿಕರ ಕಾರಿನ ಹೆಡ್​ಲೈಟ್ ಮೂಲಕ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ರಾತ್ರೋರಾತ್ರಿ ವಿದ್ಯುತ್​ ಇಲ್ಲದೇ ಜನರು ಪರದಾಡುವ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ವಿದ್ಯುತ್ ವ್ಯವಸ್ಥೆ ಕಲ್ಪಿಸುವಂತೆ ಜನರು ಆಗ್ರಹಿದ್ದಾರೆ.

ಇದನ್ನೂ ಓದಿ: 24 ಗಂಟೆಯಲ್ಲಿ 4,092 ಮಂದಿ ಕೊರೊನಾ ಸೋಂಕಿನಿಂದ ಸಾವು; 4 ಲಕ್ಷಕ್ಕೂ ಅಧಿಕ ಹೊಸ ಪ್ರಕರಣಗಳು ದಾಖಲು

ಕೊರೊನಾ ಸೋಂಕಿತರಿಗೆ ಧೈರ್ಯ ತುಂಬಿದ ಬೀದರ್​ ಜಿಲ್ಲಾಸ್ಪತ್ರೆಯ ವೈದ್ಯರು

Published On - 11:00 am, Sun, 9 May 21