ತುಂಗಭದ್ರಾ ಜಲಾಶಯಕ್ಕೆ ಹೊಸ ಗೇಟ್​ ಭಾಗ್ಯ ಯಾವಾಗ? ಡಿಕೆ ಶಿವಕುಮಾರ್ ಕೊಟ್ರು ಬಿಗ್​ ಅಪ್ಡೇಟ್​

ತುಂಗಭದ್ರಾ ಜಲಾಶಯದ ಏಳು ಗೇಟ್‌ಗಳು ಹಾನಿಗೊಳಗಾಗಿವೆ. ಹೊಸ ಗೇಟ್‌ಗಳ ಅಳವಡಿಕೆಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ವಿಧಾನಸಭೆಯಲ್ಲಿ ತಿಳಿಸಿದ್ದಾರೆ. ಹೊಸ ಗೇಟ್‌ಗಳ ತಯಾರಿಕೆ ಪ್ರಗತಿಯಲ್ಲಿದೆ ಮತ್ತು ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಜಲಾಶಯದಲ್ಲಿ ಹೂಳು ತುಂಬಿರುವುದರಿಂದ ಪರ್ಯಾಯ ಜಲಾಶಯ ನಿರ್ಮಾಣಕ್ಕೆ ಪ್ಲಾನ್​ ಮಾಡಿದ್ದೇವೆ ಎಂದು ಹೇಳಿದರು.

ತುಂಗಭದ್ರಾ ಜಲಾಶಯಕ್ಕೆ ಹೊಸ ಗೇಟ್​ ಭಾಗ್ಯ ಯಾವಾಗ? ಡಿಕೆ ಶಿವಕುಮಾರ್ ಕೊಟ್ರು ಬಿಗ್​ ಅಪ್ಡೇಟ್​
ತುಂಗಭದ್ರಾ ಡ್ಯಾಂ, ಡಿಕೆ ಶಿವಕುಮಾರ್
Edited By:

Updated on: Aug 20, 2025 | 7:16 PM

ಕೊಪ್ಪಳ, ಆಗಸ್ಟ್​ 20: ಕೊಪ್ಪಳ (Koppal) ತಾಲೂಕಿನ ಮುನಿರಾಬಾದ್ ಬಳಿ ಇರುವ ತುಂಗಭದ್ರಾ ಜಲಾಶಯದ (Tungabhadra Dam) ಏಳು ಗೇಟ್​ಗಳು ಡ್ಯಾಮೇಜ್ ಆಗಿದೆ​ ಎಂದು ಡ್ಯಾಂ ಸೇಫ್ಟಿ ರೀವಿವ್ ಕಮೀಟಿ ವರದಿ ನೀಡಿತ್ತು. ಈ ಬಗ್ಗೆ ವಿಧಾನಸಭೆಯಲ್ಲಿ ವಿಪಕ್ಷಗಳು ಸರ್ಕಾರವನ್ನು ಪ್ರಶ್ನಿಸಿದ್ದವು. ವಿಪಕ್ಷಗಳ ಪ್ರಶ್ನೆಗೆ ನೀರಾವರಿ ಸಚಿವ ಡಿಕೆ ಶಿವಕುಮಾರ್ (DK Shivakumar)​ ಉತ್ತರ ನೀಡಿದ್ದಾರೆ. ತುಂಗಭದ್ರಾ ಡ್ಯಾಂ ಗೇಟ್​ಗಳ ಬದಲಾವಣೆಗೆ ಬೇಡಿಕೆ ಇದೆ. ಹೊಸ ಗೇಟ್​ಗಳ ಅಳವಡಿಕೆಗೆ ಕೆಲಸ ಪ್ರಾರಂಭ ಮಾಡಿದ್ದೇವೆ. ಹೊಸ ಗೇಟ್ ಅಳವಡಿಕೆಗೆ ಟೆಂಡರ್ ಕರೆದಿದ್ದೇವೆ ಎಂದು ಹೇಳಿದರು.

ಆರು ಹೊಸ ಗೇಟಗಳನ್ನು ಸಿದ್ದಪಡಿಸಲು ಬೇಕಾದ ಸಾಮಾಗ್ರಿಗಳನ್ನು ಅಹಮದಾಬಾದ್​ನ​ ಸಂಸ್ಥೆಯಿಂದ ಖರೀದಿಸುತ್ತಿದ್ದೇವೆ. ಈಗಾಗಲೇ ಆರ್ಡರ್​ ಕೊಟ್ಟಿದ್ದೇವೆ. ಮೂರು ಕಡೆಗಳಲ್ಲಿ ಹೊಸ ಗೇಟ್​ ತಯಾರಾಗುತ್ತಿವೆ. ಜಿಂದಾಲ್​ ಕಂಪನಿಯವರು ಕಬ್ಬಿಣ ಕೊಟ್ಟಿದ್ದಾರೆ. ಗೇಟ್ ಬದಲಾವಣೆಗೆ 250 ಕೋಟಿ ರೂ. ಬೇಕಿದೆ ಎಂದು ತಿಳಿಸಿದರು.

ತುಂಗಭದ್ರ ಜಲಾಶಯ 132 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ತುಂಗಭದ್ರಾ ಜಲಾಶಯದಲ್ಲಿ ಬಹಳಷ್ಟು ಹೂಳು ತುಂಬಿದೆ. ಪರ್ಯಾಯ ಜಲಾಶಯ ನಿರ್ಮಾಣಕ್ಕೆ ಪ್ಲಾನ್​ ಮಾಡಲಾಗಿದೆ. ತುಂಗಭದ್ರಾ ಮಂಡಳಿಗೆ ಪ್ರಸ್ತಾವನೆ ನೀಡಲಾಗಿದೆ. ಇನ್ನೂವರೆಗೂ ಯಾವುದೇ ಪ್ರತಿಕ್ರಿಯೆ ಮಂಡಳಿಯಿಂದ ಬಂದಿಲ್ಲ ಎಂದು ಹೇಳಿದ್ದಾರೆ.

ಹೊಸ ಗೇಟ್ ಅಳವಡಿಕೆ ಸಂಬಂಧ ಆಂಧ್ರ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಲು ಪ್ರಯತ್ನಿಸುತಿದ್ದೇವೆ. ಹೊಸ ಗೇಟ್ ಅಳವಡಿಕೆಗೆ ಆಂಧ್ರ ಸರ್ಕಾರ ಬಜೆಟ್​ನಲ್ಲಿ ಹಣ ಮೀಸಲು ಇಟ್ಟಿಲ್ಲ. ನಮ್ಮ ಸರ್ಕಾರ ಹಣ ನೀಡಲು ಸಿದ್ದವಾಗಿತ್ತು. ಆದರೆ, ಆಂಧ್ರ ಸರ್ಕಾರ ಹಣ ಪಡೆಯುತ್ತಿಲ್ಲ ಎಂದರು.

ಇದನ್ನೂ ಓದಿ: ಶಾಕಿಂಗ್​ ನ್ಯೂಸ್​: ತುಂಗಭದ್ರಾ ಡ್ಯಾಂನ 7 ಗೇಟ್​ಗಳಿಗೆ ಡ್ಯಾಮೇಜ್​; ಸಚಿವ ಶಿವರಾಜ್​ ತಂಗಡಗಿ

ವಿಪಕ್ಷ ನಾಯಕರ ಪ್ರಶ್ನೆ

ಕ್ರೆಸ್ಟ್​ ಗೇಟ್​ 19 ತುಂಡಾಗಿ ಸಾಕಷ್ಟು ಸಮಸ್ಯೆ ಆಯಿತು. ರೈತರಿಗೆ ಸಮಸ್ಯೆ ಆದಾಗ ನಾವು ರಾಜಕೀಯ ಟೀಕೆ ಮಾಡಿಲ್ಲ. ರೈತರ ಪರವಾಗಿ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಿದ್ದೇವೆ. ಜಲಾಶಯಕ್ಕೆ ಸಮಸ್ಯೆಯಾದರೆ ನಮ್ಮ ರೈತರಿಗೂ ಸಮಸ್ಯೆ ಆಗುತ್ತೆ. ಕೇಂದ್ರಕ್ಕೆ ಒತ್ತಡ ಹಾಕಬೇಕು, ಅದನ್ನು ನಾವು ಮಾಡುತ್ತೇವೆ ಎಂದು ಬಿಜೆಪಿ ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು  ಆರು ಹೊಸ ಗೇಟ್​​ಗಳು ತಯಾರಾಗುತ್ತಿವೆ  ಎಂದಿದ್ದಾರೆ. 2ನೇ ಬೆಳೆಗೆ ನೀರು ಹರಿಸಿದಿದ್ದರೇ ಯಾರಿಗೂ ನಿದ್ದೆ ಬರಲ್ಲ. ಸಂಪೂರ್ಣ ತುಂಗಭದ್ರಾ ಡ್ಯಾಮ್ ತಯಾರು ಮಾಡುವುದು ಮುಖ್ಯವಾಗಿದೆ ಎಂದು ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಹೇಳಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:15 pm, Wed, 20 August 25