TV9 Impact: ಖಾಲಿ ಬೆಡ್ ಕಳ್ಳಾಟ ಅಭಿಯಾನಕ್ಕೆ ಗೆಲುವು, ಯಾವುದೇ ರೋಗಿಯನ್ನು ವಾಪಸ್ ಕಳಿಸುವಂತಿಲ್ಲ
ಬೆಂಗಳೂರು: ಬೆಡ್ ಖಾಲಿ ಇದೆ ಅಂತಾ ಸರ್ಕಾರ ಹೇಳ್ತಿದೆ. ರೋಗಿಗಳು ಒದ್ದಾಡ್ತಿದ್ದಾರೆ. ಕೊರೊನಾ ಸೋಂಕಿತರಿಗೆ ನರಕ ದರ್ಶನವಾಗ್ತಿದೆ. ಹಾದಿ ಬೀದಿಯಲ್ಲಿ ರೋಗಿಗಳು ಪ್ರಾಣ ಬಿಡ್ತಿದ್ದಾರೆ. ಇತ್ತ ಯಾವುದೇ ಆಸ್ಪತ್ರೆಗೆ ಹೋದ್ರೂ ಬೆಡ್ ಇಲ್ಲ ಅನ್ನೋ ಮಾತು. ರೋಗಿಗಳನ್ನ ಯಾರೂ ಕೂಡ ಅಡ್ಮಿಟ್ ಮಾಡಿಕೊಳ್ತಿಲ್ಲ. ನಿಜಕ್ಕೂ ಆಸ್ಪತ್ರೆಗಳಲ್ಲಿ ಬೆಡ್ಗಳೇ ಇಲ್ವಾ? ರಾಜ್ಯ ಸರ್ಕಾರ ಹೇಳ್ತಿರೋದು ಸುಳ್ಳಾ? ಆಸ್ಪತ್ರೆಗಳು ಮತ್ತು ಸರ್ಕಾರದ ಮಧ್ಯೆ ಸಮನ್ವಯತೆ ಇಲ್ವಾ? ಯಾವುದು ಸತ್ಯ? ಯಾವುದೂ ಮಿಥ್ಯ? ಖಾಲಿ ಬೆಡ್ ಕಳ್ಳಾಟದ ಬಗ್ಗೆ ನಿಮ್ಮ ಟಿವಿ9 […]
ಬೆಂಗಳೂರು: ಬೆಡ್ ಖಾಲಿ ಇದೆ ಅಂತಾ ಸರ್ಕಾರ ಹೇಳ್ತಿದೆ. ರೋಗಿಗಳು ಒದ್ದಾಡ್ತಿದ್ದಾರೆ. ಕೊರೊನಾ ಸೋಂಕಿತರಿಗೆ ನರಕ ದರ್ಶನವಾಗ್ತಿದೆ. ಹಾದಿ ಬೀದಿಯಲ್ಲಿ ರೋಗಿಗಳು ಪ್ರಾಣ ಬಿಡ್ತಿದ್ದಾರೆ. ಇತ್ತ ಯಾವುದೇ ಆಸ್ಪತ್ರೆಗೆ ಹೋದ್ರೂ ಬೆಡ್ ಇಲ್ಲ ಅನ್ನೋ ಮಾತು. ರೋಗಿಗಳನ್ನ ಯಾರೂ ಕೂಡ ಅಡ್ಮಿಟ್ ಮಾಡಿಕೊಳ್ತಿಲ್ಲ. ನಿಜಕ್ಕೂ ಆಸ್ಪತ್ರೆಗಳಲ್ಲಿ ಬೆಡ್ಗಳೇ ಇಲ್ವಾ? ರಾಜ್ಯ ಸರ್ಕಾರ ಹೇಳ್ತಿರೋದು ಸುಳ್ಳಾ? ಆಸ್ಪತ್ರೆಗಳು ಮತ್ತು ಸರ್ಕಾರದ ಮಧ್ಯೆ ಸಮನ್ವಯತೆ ಇಲ್ವಾ? ಯಾವುದು ಸತ್ಯ? ಯಾವುದೂ ಮಿಥ್ಯ? ಖಾಲಿ ಬೆಡ್ ಕಳ್ಳಾಟದ ಬಗ್ಗೆ ನಿಮ್ಮ ಟಿವಿ9 ಎಳೆ ಎಳೆಯಾಗಿ ಬಿತ್ತಿರಿಸಿತ್ತು. ಸಾಕ್ಷ್ಯ ಸಮೇತ ಸರ್ಕಾರ ಕಿವಿ ಹಿಂಡಿತ್ತು. ಇದ್ರಿಂದ ಸರ್ಕಾರ ಅಲರ್ಟ್ ಆಗಿದೆ. ಟಿವಿ9 ಅಭಿಯಾನಕ್ಕೆ ಮಹಾ ಗೆಲುವು ದಕ್ಕಿದೆ.
‘ಖಾಲಿ ಬೆಡ್ ಕಳ್ಳಾಟ’ ಅಭಿಯಾನಕ್ಕೆ ಮಹಾ ಗೆಲುವು! ಜನ ಸಂಕಷ್ಟದಲ್ಲಿದ್ರೆ ಆಸ್ಪತ್ರೆ, ಸರ್ಕಾರದ ಇಡೀ ವ್ಯವಸ್ಥೆ ಮಾಡ್ತಿರೋದೇನು. ಆಸ್ಪತ್ರೆಗಳಲ್ಲಿ ಬೆಡ್ ಖಾಲಿ ಇದ್ರೂ ಟ್ರೀಟ್ಮೆಂಟ್ ಕೊಡ್ತಿಲ್ವಾ? ವಾಸ್ತವ ಪರಿಸ್ಥಿತಿ ಸರ್ಕಾರಕ್ಕೆ ಗೊತ್ತೇ ಇಲ್ವಾ? ರಾಜ್ಯದಲ್ಲಿ ಪರಿಸ್ಥಿತಿ ಕೈ ಮೀರಿ ಹೋಗ್ತಿರೋದಕ್ಕೆ ಕಾರಣವೇನು? ಹೀಗೆ ಹಸಿ, ಹಸಿ ಸುಳ್ಳುಗಳನ್ನ ಎಳೆ ಎಳೆಯಾಗಿ ಟಿವಿ9 ಬಿಚ್ಚಿಡ್ತಾ ಹೋಯ್ತು.
ಕರ್ನಾಟಕದಲ್ಲಿ ಕಳೆದೊಂದು ವಾರದಲ್ಲಿ ಉಸಿರಾಟದ ಸಮಸ್ಯೆಗೆ ಹಲವರು ಬಲಿಯಾಗಿದ್ದಾರೆ. ರೋಗಿ ಒಂದಲ್ಲ, ಎರಡಲ್ಲ 12 ಆಸ್ಪತ್ರೆ ಸುತ್ತಿದ್ರೂ ಬೆಡ್ ಸಿಕ್ಕಿಲ್ಲ. 12ಗಂಟೆಗಳ ಕಾಲ ಹೆರಿಗೆಗಾಗಿ ತುಂಬು ಗರ್ಭಿಣಿಯ ಅಲೆದಾಟ. ಹಾರ್ಟ್ ಅಟ್ಯಾಕ್ ಆದ್ರೂ ಆಸ್ಪತ್ರೆ ಒಳಗೆ ಯಾರೂ ಸೇರಿಸಿಕೊಂಡಿಲ್ಲ. ಆಕ್ಸಿಜನ್ ಸಿಗದೇ ಸಾವನ್ನಪ್ಪಿದ ತಾಯಿ. ವೆಂಟಿಲೇಟರ್‌ನಲ್ಲಿ ಇರಬೇಕಾದವರು ಌಂಬುಲೆನ್ಸ್ನಲ್ಲೇ ಮಲಗಿದ್ದ ದೃಶ್ಯ. ಹೀಗೆ ಒಂದೊಂದೇ ಕೇಸ್ ಸ್ಟಡಿಗಳನ್ನ ಟಿವಿ9 ಸರ್ಕಾರದ ಮುಂದಿಟ್ಟಿತ್ತು. ರಕ್ತಕಣ್ಣೀರ ಕಥೆಗಳನ್ನ ಬಿಚ್ಚಿಟ್ಟಿತ್ತು. ಇವೆಲ್ಲವನ್ನು ಕಣ್ಬಿಟ್ಟು ನೋಡಿರೋ ಸರ್ಕಾರ ಕೊನೆಗೂ ಎಚ್ಚೆತ್ತಿದೆ. ಟಿವಿ9 ಸರ್ಕಾರದ ಕಿವಿ ಹಿಂಡುತ್ತಿದ್ದಂತೆ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ. ಇದು ಟಿವಿ9 ಬಿಗ್ ಇಂಪ್ಯಾಕ್ಟ್.
ಟಿವಿ9 ಇಂಪ್ಯಾಕ್ಟ್ ನಂ.1 ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನಿರಾಕರಿಸುವಂತಿಲ್ಲ! ಖಾಸಗಿ ಆಸ್ಪತ್ರೆಗಳಿಂದ ಬೆಡ್ ಪಡೆಯೋದ್ರಲ್ಲಿ ಸರ್ಕಾರ ಕಂಪ್ಲೀಟ್ ಫೇಲ್ ಆಗಿದೆ. ಖುದ್ದು ಸಿಎಂ ಬಿ.ಎಸ್. ಯಡಿಯೂರಪ್ಪನವರೇ ಮೀಟಿಂಗ್ ಮಾಡಿ ಹೇಳಿದ್ರೂ ಫಲ ಸಿಕ್ಕಿಲ್ಲ. ಕೊರೊನಾ ಚಿಕಿತ್ಸೆಗೆ ದರ ನಿಗದಿ ಮಾಡಿದ್ರೂ ಹಗ್ಗಜಗ್ಗಾಟ ನಿಂತಿಲ್ಲ. ಸರ್ಕಾರ ಮತ್ತು ಖಾಸಗಿ ಆಸ್ಪತ್ರೆಗಳ ನಡುವೆ ಮುಸುಕಿನ ಗುದ್ದಾಟ ನಡೀತಿದೆ.
ಬೆಡ್ ಸಿಗದೆ ಪೇಷಂಟ್‌ಗಳು ಪ್ರಾಣ ಬಿಡ್ತಿದ್ರೂ ಖಾಸಗಿ ಆಸ್ಪತ್ರೆಗಳು ಕ್ಯಾರೇ ಅಂತಿಲ್ಲ. ಇವೆಲ್ಲವನ್ನೂ ಟಿವಿ9 ಸಾಕ್ಷ್ಯ ಸಮೇತ ರಾಜ್ಯದ ಜನರ ಮುಂದಿಡ್ತು. ಅದ್ಯಾವಾಗ ಟಿವಿ9ನಲ್ಲಿ ಸುದ್ದಿ ಬಿತ್ತರವಾಯ್ತೋ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಅಲರ್ಟ್ ಆದ್ರೂ. ಯಾವುದೇ ರೋಗಿಗಳು ಆಸ್ಪತ್ರೆಗೆ ಬಂದ್ರೆ ಚಿಕಿತ್ಸೆ ನಿರಾಕರಿಸುವಂತಿಲ್ಲ. ಅದ್ರಲ್ಲೂ ಕೊವಿಡ್ ರೋಗಿಗಳಿಗೆ ಟ್ರೀಟ್ಮೆಂಟ್ ನಿರಾಕರಿಸಿದ್ರೆ ಕಠಿಣ ಕ್ರಮ ಅಂತ ಸಚಿವ ಸುಧಾಕರ್ ಖಡಕ್ ವಾರ್ನಿಂಗ್ ಮಾಡಿದ್ದಾರೆ. ಖಾಲಿ ಬೆಡ್ ಕಳ್ಳಾಟದ ವಿರುದ್ಧ ಅಭಿಯಾನಕ್ಕೆ ರಾಜ್ಯ ಸರ್ಕಾರ ಸ್ಪಂದಿಸಿದೆ.
ಟಿವಿ9 ಇಂಪ್ಯಾಕ್ಟ್ ನಂ.2 ಸರ್ಕಾರ ನಿಗದಿ ಮಾಡಿರುವ ಹಣಕ್ಕಿಂತ ಹೆಚ್ಚು ಪಡೆದ್ರೆ ಕ್ರಮ! ಇಷ್ಟೇ ಅಲ್ಲ, ಕೊರೊನಾ ಸೋಂಕಿತರು ಕೆಲವು ಆಸ್ಪತ್ರೆಗಳಿಗೆ ಅಡ್ಮಿಟ್ ಆಗಿ ಹಣವಿಲ್ಲದೆ ಪರದಾಡ್ತಿದ್ದಾರೆ. ಬಡ ರೋಗಿಗಳ ರಕ್ತ ಹಿಂಡುತ್ತಿರೋ ಖಾಸಗಿ ಆಸ್ಪತ್ರೆಗಳು ಸುಲಿಗೆ ಮಾಡ್ತಿವೆ. ಇಂಥದ ಆಸ್ಪತ್ರೆಗಳ ನಿಜಬಣ್ಣವನ್ನ ಟಿವಿ9 ಬಟಾಬಯಲು ಮಾಡಿತ್ತು. ಸೋಂಕಿತರ ಕುಟುಂಬಸ್ಥರ ಕಣ್ಣೀರ ಕಥೆಯನ್ನ ಟಿವಿ9 ಬಿತ್ತಿರಿಸಿತ್ತು. ಇದ್ರಿಂದ ಸರ್ಕಾರ ಎಚ್ಚೆತ್ತಿದೆ. ಯಾವುದೇ ಆಸ್ಪತ್ರೆಗಳಲ್ಲಿ ರಾಜ್ಯ ಸರ್ಕಾರ ನಿಗದಿ ಮಾಡಿರುವ ಹಣಕ್ಕಿಂತ ಹೆಚ್ಚು ಪಡೆದ್ರೆ ಕಠಿಣ ಕ್ರಮದ ಕೈಗೊಳ್ಳೋದಾಗಿ ಸಚಿವರು ಎಚ್ಚೆರಿಗೆ ರವಾನಿಸಿದ್ದಾರೆ. ಇಷ್ಟೇ ಅಲ್ಲ, ಹೆಚ್ಚು ಹಣ ವಸೂಲಿ ಮಾಡಿದರೆ ಮೊದಲಿಗೆ ಇಂತಹ ಆಸ್ಪತ್ರೆಗಳ ಒಪಿಡಿಯನ್ನು ನಿಲ್ಲಿಸುತ್ತೇವೆ. ಅಲ್ಲದೇ, ಆಸ್ಪತ್ರೆಗಳ ಮಾನ್ಯತೆ ರದ್ದು ಮಾಡೋ ಬಗ್ಗೆಯೂ ಚಿಂತನೆ ನಡೆದಿದೆ ಅಂತ ಸಚಿವ ಸುಧಾಕರ್ ವಾರ್ನ್ ಮಾಡಿದ್ದಾರೆ.
ಟಿವಿ9 ಇಂಪ್ಯಾಕ್ಟ್ ನಂ.3 2-3 ದಿನದಲ್ಲಿ 10 ಸಾವಿರ ಬೆಡ್ಗಳನ್ನು ಸಿದ್ಧಪಡಿಸ್ತೀವಿ! ಇನ್ನೊಂದೆಡೆ ಸಿಲಿಕಾನ್ ಸಿಟಿ ಬೆಂಗಳೂರಿನ ಆಸ್ಪತ್ರೆಗಳಲ್ಲಿ ಯಾವುದೇ ರೋಗಿಗಳು ಹೋದ್ರೂ ಅಡ್ಮಿಟ್ ಮಾಡಿಕೊಳ್ತಿಲ್ಲ. ಕೊರೊನಾ ಸೋಂಕಿತರು ಹೋದ್ರೆ ಕಡೆಗಣಿಸ್ತಿದ್ದಾರೆ. ಈ ಬಗ್ಗೆ ಎಚ್ಚೆತ್ತಿರೋ ಸರ್ಕಾರ ಬೆಂಗಳೂರಲ್ಲಿ ಕೊವಿಡ್ ಕೇರ್ ಸೆಂಟರ್ ಮೂಲಕ 2-3 ದಿನದಲ್ಲಿ 10 ಸಾವಿರ ಬೆಡ್ಗಳನ್ನು ಸಿದ್ಧಪಡಿಸುತ್ತೇವೆ. ಅಲ್ಲದೇ ಖಾಸಗಿ ಆಸ್ಪತ್ರೆಗಳು ತಮ್ಮ ಸಾಮರ್ಥ್ಯದ ಅರ್ಧದಷ್ಟು ಬೆಡ್ ಸರ್ಕಾರಕ್ಕೆ ನೀಡುವುದಾಗಿ ಹೇಳಿದ್ವು. ಇದೇ ಲೆಕ್ಕದಲ್ಲಿ ನಮಗೆ 3 ಸಾವಿರ ಬೆಡ್ಗಳು ಲಭ್ಯವಿದೆ. ಡೋಂಟ್ ವರಿ ಇನ್ಮುಂದೆ ಬೆಡ್ಗಳ ಸಮಸ್ಯೆ ಆಗೋದಿಲ್ಲ ಅಂತ ಸಚಿವ ಸುಧಾಕರ್ ಭರವಸೆಯ ನುಡಿಗಳನ್ನಾಡಿದ್ದಾರೆ.
ಒಟ್ನಲ್ಲಿ ಬೆಂಗಳೂರಿನ ಆಸ್ಪತ್ರೆಗಳ ಅವ್ಯವಸ್ಥೆ. ಸೋಂಕಿತರ ನರಕಯಾತನೆ. ಬೆಡ್ಗಳು ಇಲ್ಲದೆ ರೋಗಿಗಳು ಪಡ್ತಿದ್ದ ಯಮಯಾತನೆ.. ಪರದಾಟ.. ನರಳಾಟ.. ಗೋಳಾಟವನ್ನ ಟಿವಿ9 ಸಾಕ್ಷ್ಯ ಸಮೇತ ಎಕ್ಸ್ಪೋಸ್ ಮಾಡಿತ್ತು. ಬೆಂಗಳೂರಲ್ಲಿ ಬೆಡ್ ಇಲ್ಲ, ಅಡ್ಮಿಟ್ ಮಾಡಿಕೊಳ್ತಿಲ್ಲ. ಹೀಗಾದ್ರೆ ಇದಕ್ಕೆ ಯಾರು ಹೊಣೆ. ಸರ್ಕಾರ ಹೇಳ್ತಿರೋದು ಸತ್ಯನಾ..
ಆಸ್ಪತ್ರೆಯವ್ರು ಹೇಳ್ತಿರೋದು ಸತ್ಯನಾ? ಅನ್ನೋದನ್ನೇ ಟಿವಿ9 ಜನರ ಪರವಾಗಿ ಧ್ವನಿ ಎತ್ತಿತ್ತು. ಕೊನೆಗೂ ಟಿವಿ9 ಮಹಾ ಅಭಿಯಾನಕ್ಕೆ ಗೆಲುವು ದಕ್ಕಿದೆ. ಸೋಂಕಿತರ ಪರದಾಟಕ್ಕೆ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ. ಇದು ಟಿವಿ9 ವರದಿಯ ಬಿಗ್ ಇಂಪ್ಯಾಕ್ಟ್. ಜನರ ಪರ ಧ್ವನಿಯಾಗಿ ಉತ್ತಮ ಸಮಾಜಕ್ಕಾಗಿ ದುಡಿಯುತ್ತಿರುವ ಟಿವಿ9ಗೆ ಸಿಕ್ಕ ಮಹಾ ಗೆಲುವು. ಬಡವರ ಪರ.. ಸಂಕಷ್ಟದಲ್ಲಿರೋರ ಪರ ಟಿವಿ9 ಇಂದು.. ಮುಂದು.. ಎಂದೆಂದೂ ನಿಲ್ಲಲಿದೆ..
Published On - 7:43 am, Tue, 7 July 20