TV9 Big Impact | ಟಿವಿ9 ರಹಸ್ಯ ಕಾರ್ಯಾಚರಣೆ ವರದಿ ಫಲಶ್ರುತಿ: ಜೈಲು ಅಕ್ರಮದಲ್ಲಿದ್ದ ಅಧಿಕಾರಿಗಳು ಸಸ್ಪೆಂಡ್!
ನಿಮ್ಮ ಸುದ್ದಿವಾಹಿನಿ ಟಿವಿ9 ನಡೆಸಿದ್ದ ರಹಸ್ಯ ಕಾರ್ಯಾಚರಣೆ (TV9 Sting operation) ವರದಿಯ ಫಲಶ್ರುತಿಯಾಗಿ ಜೈಲು ಅಕ್ರಮದಲ್ಲಿದ್ದ 6 ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ ಎಂದು ಟಿವಿ9ಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರು: ನಿಮ್ಮ ಸುದ್ದಿವಾಹಿನಿ ಟಿವಿ9 ನಡೆಸಿದ್ದ ರಹಸ್ಯ ಕಾರ್ಯಾಚರಣೆ (TV9 Sting operation) ವರದಿಯ ಫಲಶ್ರುತಿಯಾಗಿ ಜೈಲು ಅಕ್ರಮದಲ್ಲಿದ್ದ 6 ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ ಎಂದು ಟಿವಿ9ಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
‘ಪಾಪಿ ಪ್ರಪಂಚ’ ಎಂಬ ಹೆಸರಿನಲ್ಲಿ ಟಿವಿ9 ರಹಸ್ಯ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ, ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆಯುತ್ತಿದ್ದ ಅಕ್ರಮಗಳನ್ನ ನಿಮ್ಮ ಸುದ್ದಿವಾಹಿನಿ ಬಯಲು ಮಾಡಿತ್ತು. ಇದೀಗ, ಟಿವಿ9 ವರದಿಯ ಫಲಶ್ರುತಿಯಾಗಿ ಅಕ್ರಮದಲ್ಲಿ ಭಾಗಿಯಾಗಿದ್ದ ಜೈಲಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ. ಬೆಂಗಳೂರು ಸೆಂಟ್ರಲ್ ಜೈಲಿನ ನಾಲ್ವರು ಅಧಿಕಾರಿಗಳು ಹಾಗೂ ಬೆಳಗಾವಿ ಸೆಂಟ್ರಲ್ ಜೈಲಿನ ಇಬ್ಬರು ಅಧಿಕಾರಿಗಳು ಸಸ್ಪೆಂಡ್ ಆಗಿದ್ದಾರೆ ಎಂದು ಟಿವಿ9ಗೆ ಬಸವರಾಜ್ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ.
ಅಮಾನತುಗೊಂಡ ಅಧಿಕಾರಿಗಳು ಜೈಲಿನಲ್ಲಿ ಕೈದಿಗಳಿಗೆ ಲಕ್ಸುರಿ ಸೌಲಭ್ಯ ಒದಗಿಸುತ್ತಿದ್ದರು. ಸಿಬ್ಬಂದಿ ಲಕ್ಷ ಲಕ್ಷ ಹಣ ಪಡೆದು ಕೈದಿಗಳಿಗೆ ಲಕ್ಸುರಿ ಸೌಲಭ್ಯ ನೀಡಿದ್ದರು. ಸೆಂಟ್ರಲ್ ಜೈಲಲ್ಲಿ ಕೈದಿಗಳಿಗೆ ಲಕ್ಸುರಿ ಸೌಲಭ್ಯ ನೀಡಲು ಲಂಚ ಪಡೆದಿದ್ದರು.
ಇದಲ್ಲದೆ, ಜೈಲಿನಲ್ಲೇ ಕುಳಿತು ಕೆಲ ಕೈದಿಗಳು ಫೈನಾನ್ಸ್ ದಂಧೆ ಸಹ ನಡೆಸುತ್ತಿದ್ದರು. ಜೊತೆಗೆ, ಜೈಲಿನಲ್ಲೇ ಕುಳಿತು ಕೊಲೆಗೆ ಸ್ಕೆಚ್ ಹಾಕುತ್ತಿದ್ದರು. ಜೈಲಿನ ರೂಂಗಳಿಗೆ ತಿಂಗಳಿಗೆ 3.5 ಲಕ್ಷ, 5 ಲಕ್ಷ ಬಾಡಿಗೆ ಪಡೆದು ಕೈದಿಗಳಿಗೆ ಲಕ್ಸುರಿ ಸೌಲಭ್ಯ ಒದಗಿಸಲಾಗುತ್ತಿತ್ತು. ಟಿವಿ9 ನಡೆಸಿದ್ದ ರಹಸ್ಯ ಕಾರ್ಯಾಚರಣೆಯಲ್ಲಿ ಇವೆಲ್ಲಾ ಅಕ್ರಮಗಳು ಬಯಲಾಗಿತ್ತು. ಇದೀಗ, ‘ಪಾಪಿ ಪ್ರಪಂಚ’ ಹೆಸರಿನಲ್ಲಿ ಟಿವಿ9 ಪ್ರಸಾರ ಮಾಡಿದ್ದ ಎಕ್ಸ್‌ಕ್ಲ್ಯೂಸಿವ್ ಸ್ಟೋರಿ ಫಲಶ್ರುತಿಯಾಗಿ ಅಕ್ರಮದಲ್ಲಿದ್ದ 6ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.