ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜತೆ ಟಿವಿ9 ಹಮ್ಮಿಕೊಂಡಿದ್ದ ಸಿಎಂ ಸ್ಪೀಕಿಂಗ್ Tv9 ವಿಶೇಷ ಕಾರ್ಯಕ್ರಮ ವಿಶೇಷ ಸಂದರ್ಶನದ ಫಲಶ್ರುತಿ ನಾಡಿನ ಜನರಿಗೆ ದೊರೆತಿದೆ. ಕಾರ್ಯಕ್ರಮದಲ್ಲಿ ತಮ್ಮ ಅಳಲು ದುಃಖ ದುಮ್ಮಾನ ತೋಡಿಕೊಂಡಿದ್ದ ಹಲವರಿಗೆ ತಕ್ಷಣವೇ ಪರಿಹಾರ ದೊರೆತಿದೆ. ಮುಖ್ಯಮಂತ್ರಿಗಳ ಜತೆಗೆ ಹಮ್ಮಿಕೊಂಡಿದ್ದ ವಿಶೇಷ ಕಾರ್ಯಕ್ರಮ ಗೌರಿ ಗಣೇಶ ಹಬ್ಬಕ್ಕೆ ಟಿವಿ9 ನೀಡಿದ ಉಡುಗೊರೆ ಎಂದೇ ಪರಿಹಾರ ಪಡೆದುಕೊಂಡವರು ವ್ಯಾಖ್ಯಾನಿಸಿದ್ದಾರೆ.
ಮುಖ್ಯಮಂತ್ರಿ ಪರಿಹಾರ ನಿಧಿ ಮಂಜೂರಾದರೂ ಕಳೆದ ಒಂದೂವರೆ ವರ್ಷದಿಂದಲೂ ಪರಿಹಾರ ದೊರೆಯದ ಎಲ್ಲಾ ಫಲಾನುಭವಿಗಳಿಗೆ ಲಿಂಗಸಗೂರ ತಹಶೀಲ್ದಾರ ಚಾಮರಸ ಪಾಟೀಲ್ ಚೆಕ್ ವಿತಣೆ ಮಾಡಿದ್ದಾರೆ. ಅಲ್ಲದೇ, ಪರಿಹಾರ ನಿಧಿಯಿಂದ ವಂಚಿತರಾದ ಇನ್ನೂ ಇಬ್ಬರಿಗೂ ಚೆಕ್ ವಿತರಣೆ ಮಾಡಲಾಗಿದೆ. ಟಿವಿ9 ಹಮ್ಮಿಕೊಂಡಿದ್ದ ವರದಿಯಿಂದ ಪರಿಹಾರ ಪಡೆದ ಸಂತ್ರಸ್ತರಲ್ಲಿ ಸಂತಸ ಮೂಡಿದೆ.
ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ನಂಜುಂಡೇಗೌಡ ಹಾಗೂ ಮಮತಾ ಕೊರೊನಾದಿಂದಾಗಿ ಸಾವಿಗೀಡಾಗಿ ಅವರ ಮಗು ಅನಾಥವಾಗಿತ್ತು. ಅಜ್ಜಿ ದೇವಮ್ಮ, ಸೋದರ ಮಾವ ಮಂಜುನಾಥ್ ರ ಆಶ್ರಯದಲ್ಲಿ ಬೆಳೆಯುತ್ತಿರುವ ಮಗುವಿಗೆ ಈಗ 4 ತಿಂಗಳು. ಟಿವಿ9 ನಲ್ಲಿ ಇಂದು ಪ್ರಸಾರವಾದ ಸಿಎಂ ಸ್ಪೀಕಿಂಗ್ ವಿಶೇಷ ಕಾರ್ಯಕ್ರಮದಲ್ಲಿ ಮಗುವಿನ ಆರೈಕೆ ಕುರಿತ ವರದಿ ಪ್ರಸಾರ ಮಾಡಲಾಗಿತ್ತು. ಮಗುವಿಗೆ ಈಗಾಗಲೇ ಸರ್ಕಾರದಿಂದ ಪ್ರತೀ ತಿಂಗಳು 3500 ರೂ ನೆರವು ಬರುತ್ತಿದೆ. ಜತೆಗೆ ಇಂದಿನ ಟಿವಿ9 ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ವಿಶೇಷ ಯೋಜನೆ ಘೋಷಣೆ ಮಾಡುವುದಾಗಿ ತಿಳಿಸಿದ್ದಾರೆ. ಹೀಗಾಗಿ Tv9 ಗೆ ದನ್ಯವಾದ ಅರ್ಪಿಸುತ್ತೇನೆ ಎಂದು ಮಗುವಿನ ಸೋದರ ಮಾವ ಮಂಜುನಾಥ್ ಕೃತಜ್ಞತೆ ಅರ್ಪಿಸಿದರು.
ಕೊರೊನಾದಲ್ಲಿ ಮೃತಪಟ್ಟ ಕುಟುಂಬಕ್ಕೆ ಮುಖ್ಯಮಂತ್ರಿಗಳು ಪರಿಹಾರ ಕೊಡುವುದಾಗಿ ಹೇಳಿದ್ದಾರೆ. ಟಿವಿ9 ವಾಹಿನಿಯ ಮೂಲಕ ನಮಗೆ ಭರವಸೆ ಸಿಕ್ಕಿದೆ. ಕುಟುಂಬ ಬಹಳ ಆರ್ಥಿಕ ಸಂಕಷ್ಟದಲ್ಲಿದೆ. ಶಿವರಾಮ ಗಾಣಿಗರ ಕುಟುಂಬಕ್ಕೆ ಭದ್ರತೆಯ ಭರವಸೆ ಸಿಕ್ಕಿದೆ. ಸೊಸೆಗೆ ಉದ್ಯೋಗ ನೀಡಿದರೆ ಬಹಳ ಉಪಯೋಗವಾಗುತ್ತದೆ. ಕುಟುಂಬ ಈಗಾಗಲೇ ಹಲವು ಕಡೆ ಸಾಲ ಮಾಡಿದೆ. ಶಿವರಾಮ ಗಾಣಿಗರು ಹೃದಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕುಟುಂಬಕ್ಕೆ ಆರ್ಥಿಕ ಶಕ್ತಿಯ ಜೊತೆ ಆರೋಗ್ಯದ ವ್ಯವಸ್ಥೆಗಳ ಅವಶ್ಯಕತೆ ಇದೆ ಎಂದು ಉಡುಪಿಯ ಸಮಾಜಸೇವಕಿ ನಾಗರತ್ನ ಟಿವಿ9ಗೆ ಧನ್ಯವಾದ ಅರ್ಪಿಸಿದ್ದಾರೆ.
ಟಿವಿ9ಗೆ ಸೈಕ್ಲಿಂಗ್ ಕ್ರೀಡಾಪಟು ಪವಿತ್ರಾ ಕುರ್ತಕೋಟಿ ಸಹಾಯಕ್ಕಾಗಿ ಮನವಿ ಮಾಡಿದ್ದರು. ಸಾಧನೆ ಶಿಖರವೇರಲು ಹೊರಟ ಛಲಗಾರ್ತಿಗೆ ಬಡತನ ಅಡ್ಡಿಯಾಗಿದ್ದು, ಸೈಕಲ್ ಕೊಡಿಸಿ ಎಂದು ಆಕೆ ಮನವಿ ಮಾಡಿದ್ದರು. ಹಳ್ಳಿಗಾಡಲ್ಲಿ ಅರಳಿದ ಹೂವಿಗೆ ಸರ್ಕಾರ ನೆರವಿನ ಭರವಸೆ ನೀಡಿದೆ. ಬಾಲಕಿಗೆ ₹10 ಲಕ್ಷ ಮೌಲ್ಯದ ಸೈಕಲ್ ಕೊಡಿಸುವ ಭರವಸೆಯನ್ನು ಸಿಎಂ ನೀಡಿದ್ದಾರೆ. ಕ್ರೀಡಾ ಇಲಾಖೆ ಜತೆ ಚರ್ಚಿಸಿ ಹಣಕಾಸು ನೆರವು ನೀಡುತ್ತೇವೆ ಎಂದು ತಿಳಿಸಿರುವ ಬೊಮ್ಮಾಯಿ, ಕೇವಲ ಸೈಕಲ್ ಮಾತ್ರವಲ್ಲ, ಎಲ್ಲ ಸೌಲಭ್ಯ ಒದಗಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ. ಕಾರ್ಯಕ್ರಮದ ನಂತರ ಜಿಲ್ಲಾಧಿಕಾರಿ ಟಿರ್ವ9 ವರದಿಗೆ ಮೆಚ್ಚುಗೆ ವ್ಯಕ್ತಪಡಿಸಿ. ಜಿಲ್ಲಾಡಳಿತದ ವತಿಯಿಂದ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.
ಇದನ್ನೂ ಓದಿ:
CM Bommai Interview: ಟಿವಿ9 ವೇದಿಕೆಯಲ್ಲಿ ಜನ ಸಾಮಾನ್ಯರ ಕಷ್ಟಕ್ಕೆ ಸ್ಪಂದಿಸಿ ಪರಿಹಾರ ಘೋಷಿಸಿದ ಸಿಎಂ ಬೊಮ್ಮಾಯಿ
ಚಿತ್ರರಂಗದ ಸಮಸ್ಯೆಗಳಿಗೆ ಟಿವಿ9 ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಬಳಿ ಪರಿಹಾರ ಕೇಳಿದ ರಮೇಶ್ ಅರವಿಂದ್
(Tv9 Kannada Impact CM Basavaraj Bommai special interview makes many problems solved)